AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರ ತೀರದಲ್ಲಿ ರೀಲ್​​ ಮಾಡುತ್ತಾ ಮಗುವನ್ನೇ ಮರೆತ ದಂಪತಿ!: ಅಲೆಗಳ ಅಬ್ಬರಕ್ಕೆ ಸಿಲುಕಿದ ಕಂದಮ್ಮನ ರಕ್ಷಿಸಿದ ಮತ್ತೋರ್ವ ವ್ಯಕ್ತಿ

ಸಮುದ್ರ ತೀರದಲ್ಲಿ ರೀಲ್ಸ್ ಮಾಡುವುದರಲ್ಲಿ ತಲ್ಲೀನರಾಗಿ ತಮ್ಮ ಮಗುವನ್ನೇ ಮರೆತ ದಂಪತಿಯ ನಿರ್ಲಕ್ಷ್ಯದ ವಿಡಿಯೋ ವೈರಲ್ ಆಗಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಮಗುವನ್ನು ಸಕಾಲದಲ್ಲಿ ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮಗುವಿನ ಬಗ್ಗೆ ದಂಪತಿ ತೋರಿದ ನಿರ್ಲಕ್ಷ್ಯದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ವಿಡಿಯೋ ಚಿತ್ರೀಕರಣಕ್ಕಿಂತ ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸಮುದ್ರ ತೀರದಲ್ಲಿ ರೀಲ್​​ ಮಾಡುತ್ತಾ ಮಗುವನ್ನೇ ಮರೆತ ದಂಪತಿ!: ಅಲೆಗಳ ಅಬ್ಬರಕ್ಕೆ ಸಿಲುಕಿದ ಕಂದಮ್ಮನ ರಕ್ಷಿಸಿದ ಮತ್ತೋರ್ವ ವ್ಯಕ್ತಿ
ಸಮುದ್ರ ತೀರದಲ್ಲಿ ರೀಲ್​​ ಮಾಡುತ್ತಾ ಮಗುವನ್ನೇ ಮರೆತ ದಂಪತಿ!Image Credit source: Mariyam_MBD X Page
ಪ್ರಸನ್ನ ಹೆಗಡೆ
|

Updated on:Oct 21, 2026 | 12:45 PM

Share

ರೀಲ್ಸ್​​ ಮಾಡುವ ಗೀಳಿಗೆ ಬಿದ್ದು ಮೈಮರೆತು ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಹೀಗಿದ್ದರೂ ಕೆಲವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಇದಕ್ಕೆ ಉದಾಹರಣೆ ಎಂಬಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಸಮುದ್ರ ತೀರದಲ್ಲಿ ರೀಲ್ಸ್​​ ಮಾಡುವುದರಲ್ಲಿ ದಂಪತಿ ತಲ್ಲೀನರಾಗಿದ್ದರೆ, ಇತ್ತ ಅಲೆಗಳ ಅಬ್ಬರಕ್ಕೆ ಮಗುವೊಂದು ಕೊಚ್ಚಿ ಹೋಗಿದೆ. ಅದೃಷ್ಟವಶಾತ್​​ ಕೂಡಲೇ ಎಚ್ಚೆತ್ತ ಸ್ಥಳದಲ್ಲಿದ್ದ ಓರ್ವ ವ್ಯಕ್ತಿ ಮಗುವನ್ನು ರಕ್ಷಿಸಿದ್ದಾರೆ. ಇದರಿಂದ ಸಂಭವನೀಯ ಅನಾಹುತವೊಂದು ತಪ್ಪಿದೆ. ದಂಪತಿಯ ಬೇಜವಾಬ್ದಾರಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವೈರಲ್​​ ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ದಂಪತಿ ಮೊಬೈಲ್ ಅಥವಾ ಸೆಲ್ಫಿ ಸ್ಟಿಕ್ ಬಳಸಿ ತಮ್ಮನ್ನು ತಾವು ಚಿತ್ರೀಕರಿಸಿಕೊಳ್ಳುತ್ತಾ ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವೇಳೆ ಮಹಿಳೆ ಮಗುವಿನ ಕೈ ಹಿಡಿದು ನೀರಿನ ಸಮೀಪದಲ್ಲಿ ನಡೆಯುತ್ತಿರುವಂತೆ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಮಗು ಜಾರಿ ಮರಳಿನ ಮೇಲೆ ಬೀಳುತ್ತದೆ. ಬಳಿಕ ಸಮುದ್ರದ ಅಲೆಗಳು ಮಗುವಿನ ಮೇಲೆ ಅಪ್ಪಳಿಸಿವೆ. ಮಹಿಳೆ ಒಮ್ಮೆ ಹಿಂದಿರುಗಿ ನೋಡಿದರೂ, ಬಳಿಕ ಮತ್ತೆ ಕ್ಯಾಮೆರಾಗೆ ಪೋಸ್ ನೀಡಲು ಮುಂದಾಗುತ್ತಾರೆ. ಇತ್ತ ಪುರುಷ ಚಿತ್ರೀಕರಣ ಮುಂದುವರಿಸುತ್ತಾರೆ. ದಂಪತಿ ರೀಲ್ ಮಾಡುವುದರಲ್ಲಿ ಮಗ್ನರಾಗಿರುವಾಗ ಮಗು ಅಲೆಗಳ ನಡುವೆ ಪರದಾಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ: ಮರದ ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ

ಮರಿಯಮ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಪತಿಯೊಂದಿಗೆ ಸಮುದ್ರ ತೀರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ರೀಲ್ ಮಾಡುವುದರಲ್ಲಿ ದಂಪತಿ ಎಷ್ಟು ಮಗ್ನರಾಗಿದ್ದರೆಂದರೆ, ತಮ್ಮ ಮಗು ಅಪಾಯದಲ್ಲಿರುವುದನ್ನೂ ಗಮನಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಗು ಅಲೆಗಳಲ್ಲಿ ಕೊಚ್ಚಿಹೋಗುವ ಮುನ್ನ ಅಲ್ಲಿದ್ದ ವ್ಯಕ್ತಿಯೊಬ್ಬರು ಮಧ್ಯಪ್ರವೇಶಿಸಿ ರಕ್ಷಿಸಿದ್ದಾರೆ ಎಂದು ಮರಿಯಮ್ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಕಂಟೆಂಟ್ ಮಾಡುವ ಗೀಳು ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ, ಸ್ವಂತ ಮಕ್ಕಳ ಸುರಕ್ಷತೆಯನ್ನೂ ಕಡೆಗಣಿಸುವಂತಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ, ಈ ಘಟನೆ ನಡೆದ ನಿಖರ ಸ್ಥಳ ಮತ್ತು ದಿನಾಂಕ ಹಾಗೂ ಇದರಲ್ಲಿ ಭಾಗಿಯಾಗಿರುವವರ ಗುರುತು ಇನ್ನೂ ತಿಳಿದುಬಂದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮಗುವಿನ ಬಗ್ಗೆ ದಂಪತಿ ತೋರಿದ ನಿರ್ಲಕ್ಷ್ಯದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ವಿಡಿಯೋ ಚಿತ್ರೀಕರಣಕ್ಕಿಂತ ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸುವ ಅಗತ್ಯ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಮಾಡುವಾಗ ಗಮನ ಬೇರೆಡೆ ಹರಿಸುವುದರಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಯಾವುದೇ ರೀಲ್ ಅಥವಾ ಸೋಶಿಯಲ್ ಮೀಡಿಯಾ ಕ್ಷಣ ಮಗುವಿನ ಜೀವವನ್ನು ಅಪಾಯಕ್ಕೆ ಸಿಲುಕಿಸುವಷ್ಟು ಮೌಲ್ಯಯುತವಲ್ಲ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, ರೀಲ್ ಕೆಲವೇ ನಿಮಿಷಗಳ ಕಾಲ ಇರುತ್ತದೆ. ಆದರೆ ಮಗುವಿನ ಜೀವಕ್ಕೆ ಮತ್ತೊಂದು ಅವಕಾಶ ಸಿಗುವುದಿಲ್ಲ. ಆ ವ್ಯಕ್ತಿ ಸಮಯಕ್ಕೆ ಸರಿಯಾಗಿ ಗಮನಿಸಿ ಮಗುವನ್ನು ರಕ್ಷಿಸಿದ್ದು ಒಳ್ಳೆಯದಾಯಿತು. ಮಕ್ಕಳ ಬಗ್ಗೆ ಇಂತಹ ನಿರ್ಲಕ್ಷ್ಯ ಎಂದಿಗೂ ನಡೆಯಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:41 pm, Wed, 21 October 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ