Viral: ನಮ್‌ ಬಾಸ್‌ ರಿಲೀಸೋ.. ದೇವ್ರು ರಿಲೀಸ್‌ ಆಗ್ಬಿರ್ಟ್ರು ಕಣ್ರಲೇ!ವೈರಲ್‌ ಆಗ್ತಿದೆ ದರ್ಶನ್ ಮೀಮ್ಸ್

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 30, 2024 | 1:18 PM

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನಮ್‌ ಬಾಸ್‌ಗೆ ಜಾಮೀನು ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್‌ ಜೋರಾಗೇ ಹಬ್ಬ ಶುರು ಹಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡಿ ಬಾಸ್‌ ರಿಲೀಸ್‌ಗೆ ಸಂಬಂಧಪಟ್ಟ ಕೆಲವೊಂದು ಮೀಮ್ಸ್‌ಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ನಮ್‌ ಬಾಸ್‌ ರಿಲೀಸೋ.. ದೇವ್ರು ರಿಲೀಸ್‌ ಆಗ್ಬಿರ್ಟ್ರು ಕಣ್ರಲೇ!ವೈರಲ್‌ ಆಗ್ತಿದೆ ದರ್ಶನ್ ಮೀಮ್ಸ್
ವೈರಲ್​​ ವಿಡಿಯೋ
Follow us on

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಅವರಿಗೆ ಕೊನೆಗೂ 131 ದಿನಗಳ ಬಳಿಕ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್‌ ಅವರಿಗೆ ಬೆನ್ನು ನೋವು ಇದ್ದ ಕಾರಣ ಅವರಿಗೆ ಜಾಮೀನು ನೀಡಬೇಕೆಂದು ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ನಟ ದರ್ಶನ್‌ ಅವರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಬೆನ್ನು ನೋವಿನ ಸಮಸ್ಯೆಗೆ ತುರ್ತು ಚಿಕಿತ್ಸೆಯ ಅಗತ್ಯ ಹಿನ್ನೆಲೆ ಆರು ವಾರಗಳ ಅವಧಿ ಅಂದ್ರೆ ಸುಮಾರು 45 ದಿನಗಳ ಕಾಲದ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.‌ ಈ ಸುದ್ದಿ ದರ್ಶನ್‌ ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಬಂಪರ್‌ ಉಡುಗೊರೆ ಸಿಕ್ಕಂತಾಗಿದೆ. ಸೋಷಿಯಲ್‌ ಮೀಡಿಯಾದಲ್ಲಂತೂ ಈ ದಿನ ಡಿ ಬಾಸ್‌ ಮೀಮ್ಸ್‌ಗಳು ಭಾರೀ ವೈರಲ್‌ ಆಗುತ್ತಿವೆ.

ನಟ ದರ್ಶನ್‌ಗೆ ಜಾಮೀನು ಮಂಜೂರು ಆಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಮ್‌ ಬಾಸ್‌ಗೆ ಜಾಮೀನು ಸಿಕ್ಕಾಯ್ತು ಕಣ್ರೋ ಎಂದು ಅಭಿಮಾನಿಗಳು ಫುಲ್‌ ಜೋರಾಗೇ ಹಬ್ಬ ಶುರು ಹಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡಿ ಬಾಸ್‌ ರಿಲೀಸ್‌ಗೆ ಸಂಬಂಧಪಟ್ಟ ಕೆಲವೊಂದು ಮೀಮ್ಸ್‌ಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಹೌದು ಡಿ ಬಾಸ್‌ ಫ್ಯಾನ್ ಪೇಜ್‌ಗಳು ದರ್ಶನ್‌ ಅವರ ಸಿನಿಮಾದ ಕೆಲವೊಂದು ಫುಟೇಜ್‌ಗಳನ್ನು ಎಡಿಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಮ್‌ ಬಾಸ್‌ ಬರ್ತಿದ್ದಾರೆ ಎಂದು ಖುಷಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ವೈರಲ್​​​ ವೀಡಿಯೋ ಇಲ್ಲಿದೆ ನೋಡಿ:

dboss_darbar ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲೂ ಇಂತಹದ್ದೇ ವಿಡಿಯೋವನ್ನು ಹಂಚಿಕೊಂಡಿದ್ದು, “ಮಗ ನಮ್‌ ಬಾಸು ರಿಲೀಸೋ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ದರ್ಶನ್‌ ಅವರು ತಮ್ಮ ಸಿನಿಮಾವೊಂದರಲ್ಲಿ ಜೈಲಿನಿಂದ ರಿಲೀಸ್‌ ಆಗುವಂತಹ ಸೀನ್‌ ಒಂದನ್ನು ಎಡಿಟ್‌ ಮಾಡಿ ಶೇರ್‌ ಮಾಡಲಾಗಿದ್ದು, ನಮ್‌ ಡಿ ಬಾಸ್‌ ಬಂದ್ರು ಹಬ್ಬ ಶುರು ಎನ್ನುತ್ತಾ, ಜಾಮೀನು ಮಂಜೂರು ಬೆನ್ನಲ್ಲೇ ಫುಲ್‌ ಖುಷ್‌ ಆಗಿ ದರ್ಶನ್‌ ಅಭಿಮಾನಿಗಳು ಹಬ್ಬ ಶುರು ಹಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.