Video : ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಮೊಮೊಸ್ ಬಿರಿಯಾನಿ ಆಯ್ತು, ಇದೀಗ ಲಿಚಿ ಮೊಮೊಸ್ ಅಂತೆ

ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ಬಹಳನೇ ಟ್ರೆಂಡ್ ಆಗಿದೆ. ಐಸ್ ಕ್ರೀಮ್ ರೋಲ್, ಒರಿಯೊ ಬಜ್ಜಿ, ಮಸಾಲೆ ದೋಸೆ ಐಸ್ ಕ್ರೀಮ್, ಗುಲಾಬ್ ಜಾಮೂನ್ ದೋಸೆ ಹೀಗೆ ವಿಲಕ್ಷಣ ಆಹಾರಗಳ ಕುರಿತಾದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವ್ಯಕ್ತಿಯೊಬ್ಬರು ಮಾಡಿದ ಲಿಚಿ ಮೊಮೊಸ್ ಆಹಾರ ಪ್ರಿಯರ ಗಮನ ಸೆಳೆದಿದೆ. ಬಳಕೆದಾರರು ವ್ಯಕ್ತಿಯೂ ಈ ವಿಚಿತ್ರ ಆಹಾರ ತಯಾರಿಸಿರುವುದನ್ನು ನೋಡಿ ಗರಂ ಆಗಿದ್ದಾರೆ.

Video : ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಮೊಮೊಸ್ ಬಿರಿಯಾನಿ ಆಯ್ತು, ಇದೀಗ ಲಿಚಿ ಮೊಮೊಸ್ ಅಂತೆ
ವಿಯರ್ಡ್ ಫುಡ್ ಲಿಚಿ ಮೊಮೊಸ್
Image Credit source: Instagram

Updated on: Jun 09, 2025 | 8:14 PM

ಮೊಮೊಸ್ (momos) ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಮೊಮೊಸ್ ಇಷ್ಟ ಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಮೊಮೊಸ್ ನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಾರೆ. ಬಿಳಿ ಮೋದಕದಂತಿರುವ ಈ ತಿನಿಸಿನ ಸ್ಟಫ್ಫಿಂಗ್‌ನಲ್ಲಿ ಹಲವಾರು ವೆರೈಟಿಗಳನ್ನು ಕಾಣಬಹುದು. ಮೊಮೊಸ್ ಪ್ರಿಯರಲ್ಲಿ ನೀವು ಕೂಡ ಒಬ್ಬರಾ? ಹಾಗಿದ್ದರೆ, ಈ ವೀಡಿಯೊ ನೋಡಿದ ಮೇಲೆ ಇನ್ನು ಮುಂದೆ ಈ ಮೊಮೊಸ್ ತಿನ್ನುವ ಎನ್ನುವ ಯೋಚನೆ ಬರದೇ ಇದ್ದರೂ ತಪ್ಪೇನಿಲ್ಲ. ದೆಹಲಿ (dehli) ಯ ವ್ಯಕ್ತಿಯೊಬ್ಬರು ಮೊಮೊಸ್ ನಲ್ಲಿ ವಿಭಿನ್ನ ಪ್ರಯೋಗ ಮಾಡಿದ್ದು ಲಿಚಿ ಹಣ್ಣನ್ನು ಬಳಸಿದ್ದಾರೆ. ಲಿಚಿ ಮೊಮೊಸ್ (litchi memos) ಎನ್ನುವ ಹೊಸ ರುಚಿಯನ್ನು ಪರಿಚಯಿಸಿದ್ದು, ಈ ವಿಡಿಯೋ ಆಹಾರ ಪ್ರಿಯರಲ್ಲಿ ವಾಕರಿಕೆ ತರಿಸುವಂತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಇದನ್ನೂ ಓದಿ
ಹಣ್ಣುಗಳ ರಾಜ ಮಾವಿನ ಹಣ್ಣಾದ್ರೆ, ಹಣ್ಣುಗಳ ರಾಣಿ ಯಾವ ಹಣ್ಣು ಗೊತ್ತಾ?
ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಹೇಳುವಿರಾ?
ಒಂದೇ ಒಂದು ರಜೆ ತೆಗೆದುಕೊಳ್ಳದ್ದಕ್ಕೆ ನಿಷ್ಠಾವಂತ ಅಧಿಕಾರಿಗೆ ಈ ಶಿಕ್ಷೆನಾ?
ತಾನು ಸಿಗರೇಟ್ ಸೇದುತ್ತಾ, ಪತಿಗೂ ಸೇದಲು ಕೊಟ್ಟ ಪತ್ನಿ

@bhukkad bagh ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹಣ್ಣನ್ನು ಬಳಸಿ ಮೊಮೊಸ್ ನಲ್ಲಿ ಹೊಸ ಪ್ರಯೋಗವನ್ನು ಮಾಡುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬರು ಮೊಮೊಸ್ ಫ್ರೈ ಮಾಡಿ ಗ್ರೇವಿಯನ್ನು ತಯಾರಿಸಿದ್ದಾರೆ. ತದನಂತರದಲ್ಲಿ ತರಕಾರಿಗಳನ್ನು ಫ್ರೈ ಮಾಡಿ ಅದಕ್ಕೆ ಕ್ರೀಮ್ ಹಾಕಿದ್ದಾರೆ. ಆ ಬಳಿಕ ಲಿಚಿ ಜ್ಯೂಸ್ ಹಾಗೂ ಲಿಚಿ ಹಣ್ಣುಗಳನ್ನು ಸೇರಿಸುತ್ತಿರುವುದನ್ನು ನೋಡಬಹುದು. ಕೊನೆಗೆ ಕ್ರೀಮ್ ಹಾಗೂ ಲಿಚಿ ಹಣ್ಣಿನಿಂದ ಅಲಂಕರಿಸಿ ಸವಿಯಲು ಗ್ರಾಹಕರಿಗೆ ನೀಡಿದ್ದಾರೆ.

ಇದನ್ನೂ ಓದಿ :Viral : ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ಈ ಹೊಸ ಆಹಾರ ಪ್ರಯೋಗ ನೋಡಿ ಗರಂ ಆಗಿದ್ದು, ಬಳಕೆದಾರರೊಬ್ಬರು, ಈ ರೀತಿ ವಿಚಿತ್ರ ಆಹಾರ ತಿಂದ್ರೆ ಆರೋಗ್ಯ ಏನಾಗ್ಬೇಡ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ನೋಡಿದ್ರೆ ಬಾಯಲ್ಲಿ ನೀರು ಬರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದನ್ನು ತಿಂದ್ರೆ ಹೊಟ್ಟೆ ಕೆಡೋದು ಪಕ್ಕ, ದಯವಿಟ್ಟು ಯಾರು ಈ ರೀತಿ ಆಹಾರ ತಿನ್ನಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ