
ವ್ಯಕ್ತಿಯೊಬ್ಬ ತನ್ನ ಹುಟ್ಟು ಹಬ್ಬದಂದು ಪೊಲೀಸರ ಕೈಯಿಂದ ಭರ್ಜರಿ ಗಿಫ್ಟ್ ಪಡೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹುಟ್ಟು ಹಬ್ಬದಂದು ಸಾಮಾನ್ಯವಾಗಿ ಚಾಕುವಿನಿಂದ ಕೇಕ್ ಕಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಸ್ವಲ್ಪ ಢಿಪರೆಂಟ್ ಆಗಿರಲಿ ಎಂದು ಪಿಸ್ತೂಲ್ನಿಂದ ಕೇಕ್ ಕಟ್ ಮಾಡಿದ್ದಾನೆ. ಇದಲ್ಲದೇ ತನ್ನ ಸಾಹಸವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆತ ಪಿಸ್ತೂಲ್ನಿಂದ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಭಾರೀ ವೈರಲ್ ಆಗಿದೆ. ಆ ಪೋಸ್ಟ್ ಇಲ್ಲಿದೆ ನೋಡಿ.
ಇದನ್ನೂ ಓದಿ: ಕೊರಿಯನ್ Vs ಭಾರತೀಯ ಆಫೀಸ್ ಡಿನ್ನರ್: ಯಾವುದು ಉತ್ತಮ; ಕೋರಿಯನ್ ಮಹಿಳೆ ಹೇಳಿದ್ದೇನು?
ರಾಷ್ಟ್ರ ರಾಜಧಾನಿಯ ನೆಬ್ ಸರೈ ಪ್ರದೇಶದಿಂದ ಆರೋಪಿಯನ್ನು ಬಂಧಿಸಿ, ಆತ ಬಳಸಿದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೆಹಲಿ ಪೊಲೀಸರು ಹಂಚಿಕೊಂಡ ವೀಡಿಯೊವು 35 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಭದ್ರತಾ ಪಡೆಗಳ ಕ್ರಮವನ್ನು ಸಾಕಷ್ಟು ಬಳಕೆದಾರರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:32 pm, Sun, 2 April 23