Video: ಚೇರ್ ಒಳಗೆ ತಲೆ ಸಿಲುಕಿಕೊಂಡು ಒದ್ದಾಡಿದ ಶ್ವಾನ, ವೈರಲ್‌ ಆಯ್ತು ದೃಶ್ಯ

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕೆಲ ದೃಶ್ಯಗಳನ್ನು ನೋಡುವಾಗ ತುಟಿಯಂಚಿನಲ್ಲಿ ನಗು ಮೂಡುತ್ತದೆ. ಇದೀಗ ಮನೆಯ ಮುದ್ದಿನ ಶ್ವಾನವು ಮಾಡಿದ ಎಡವಟ್ಟು ನೆಟ್ಟಿಗರ ಗಮನ ಸೆಳೆದಿದೆ. ಚೇರ್ ಒಳಗೆ ಶ್ವಾನದ ತಲೆ ಸಿಲುಕಿಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಚೇರ್ ಒಳಗೆ ತಲೆ ಸಿಲುಕಿಕೊಂಡು ಒದ್ದಾಡಿದ ಶ್ವಾನ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Oct 12, 2026 | 2:30 PM

ಶ್ವಾನಗಳ (dogs) ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಜತೆಗೆ ನಿಲ್ಲುತ್ತವೆ. ಇತ್ತ ಅಪಾಯದಲ್ಲಿದ್ದ ಸಿಲುಕಿ ಮಾಲೀಕನ ಸಹಾಯಕ್ಕಾಗಿ ಕಾಯುತ್ತಿದೆ. ಇದೀಗ ಮನೆಯ ಮುದ್ದಿನ ಶ್ವಾನದ ತಲೆಗೆ ಚೇರ್ ಒಳಗೆ ಸಿಲುಕಿಕೊಂಡಿದೆ. ತನ್ನ ಮಾಲೀಕಳ ಮುಂದೆ ಪೆಚ್ಚು ಮೊರೆ ಹಾಕಿ ನಿಂತ ಶ್ವಾನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೇರ್ ಒಳಗೆ ಸಿಲುಕಿಕೊಂಡ ಶ್ವಾನದ ತಲೆ

ನೇಹಾ ಕಾಂತ್ (Neha kant) ತನ್ನ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿ ಶ್ವಾನವೊಂದು ಚೇರ್ ಒಳಗೆ ಸಿಲುಕಿಕೊಂಡಿದೆ. ಇದೇ ವೇಳ ಪುಟಾಣಿ ಚೇರ್‌ ಸಮೇತ ಬಂದು ಶ್ವಾನವು ಮನೆ ಮಾಲಕಿಯ ಮುಂದೆ ನಿಂತುಕೊಂಡಿದೆ. ಮಾಲಕಿ ಹೆಸರು ಕರೆಯುತ್ತಿದ್ದಂತೆ ತಲೆ ಬಗ್ಗಿಸಿಕೊಂಡು ನಿಂತ ಶ್ವಾನವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಚೂಪಾದ ಹಲ್ಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದ ಶ್ವಾನ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾಪ ಸಹಾಯಕ್ಕಾಗಿ ನಿಮ್ಮ ಮುಂದೆ ಬಂತು ನಿಂತುಕೊಂಡಿದೆ ಎಂದಿದ್ದಾರೆ. ಇನ್ನೊಬ್ಬರು, ಪಾಪ ಈ ಶ್ವಾನ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಂಗಿದು ಬೇಕಿತ್ತಾ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us