Video: ತನನ್ನು ಕೆಣಕಿದ ಮಾಲೀಕನಿಗೆ ಕ್ಯೂಟ್ ವಾರ್ನಿಂಗ್ ಕೊಟ್ಟ ಗಜರಾಜ

ಪ್ರಾಣಿ ಸಾಮ್ರಾಜ್ಯದ ವಿಡಿಯೋಗಳನ್ನು ನೀವು ಸೋಶಿಯಲ್‌ ಮೀಡಿಯಾದಲ್ಲಿ ನೋಡಿರುತ್ತೀರಿ. ಕೆಲ ದೃಶ್ಯಗಳು ಬಹುಬೇಗನೆ ಮನಸ್ಸಿಗೆ ಹತ್ತಿರವಾಗುತ್ತವೆ. ಇದೀಗ ಆನೆಯೊಂದು ತನ್ನನ್ನು ಕೆಣಕಿದ ಮಾಲೀಕನಿಗೆ ಕ್ಯೂಟ್‌ ಆಗಿಯೇ ವಾರ್ನಿಂಗ್‌ ಕೊಟ್ಟಿದೆ. ಹೌದು, ಆನೆ ಹಾಗೂ ಮಾಲೀಕನ ನಡುವಿನ ಸುಂದರ ಬಾಂಧ್ಯವ್ಯ ಸಾರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನನ್ನು ಕೆಣಕಿದ ಮಾಲೀಕನಿಗೆ ಕ್ಯೂಟ್ ವಾರ್ನಿಂಗ್ ಕೊಟ್ಟ ಗಜರಾಜ
ವೈರಲ್‌ ವಿಡಿಯೋ
Image Credit source: Instagram

Updated on: Aug 06, 2026 | 11:26 AM

ಆನೆಗಳ (elephant) ತುಂಟಾಟಗಳನ್ನು ನೋಡುವುದೇ ಖುಷಿ. ಮಾಲೀಕನ ಜತೆಗೆ ಆನೆಗಳು ಮಗುವಾಗಿ ವರ್ತಿಸುತ್ತವೆ. ತನ್ನನ್ನು ಕಾಳಜಿ ವಹಿಸುವ ವ್ಯಕ್ತಿಯ ಜತೆಗೆ ತುಂಟಾಟ ಆಡುತ್ತವೆ, ಕೋಪಗೊಳ್ಳುತ್ತವೆ. ಇದೀಗ ಈ ದೃಶ್ಯವು ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಗಿದೆ. ಮಾಲೀಕನೊಬ್ಬ ಆನೆಯನ್ನು ಕೆಣಕಿದ್ದಾನೆ. ಈ ಚಾಲಾಕಿ ಆನೆ ತನ್ನ ಸೊಂಡಿಲು ಹಾಗೂ ಕಾಲನ್ನು ಮೇಲೆತ್ತಿ ಹೆದರಿಸಲು ಪ್ರಯತ್ನಿಸುತ್ತಿದ್ದು, ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಿನ್ನು ದಿ ಪ್ಯಾರೋಟ್ (minnu the parrot) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆನೆ ಹಾಗೂ ಮಾಲೀಕನ ನಡುವಿನ ಶುದ್ಧ ಪ್ರೀತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆನೆಯ ಪಕ್ಕದಲ್ಲಿದ್ದ ಮಾಲೀಕನು ಅದರ ಸೊಂಡಿಲನ್ನು ಮುಟ್ಟುತ್ತಾ ಅದನ್ನು ಕೆಣಕಿದ್ದಾನೆ. ಮಾಲೀಕನ ಕಪಿಚೇಷ್ಟೆಗೆ ಕೋಪಗೊಂಡ ಆನೆಯೂ ಸೊಂಡಿಲನ್ನು ಅಲ್ಲಾಡಿಸುತ್ತ, ಕಾಲನ್ನು ಮೇಲೆತ್ತಿ ಹೆದರಿಸಲು ಪ್ರಯತ್ನಿಸಿದೆ. ಆದರೆ ಮಾಲೀಕ ಮಾತ್ರ ತನ್ನ ಕಪಿಚೇಷ್ಟೆಯನ್ನು ನಿಲ್ಲಿಸದೇ, ಸೊಂಡಿಲಿಗೆ ಹೊಡೆದಿದ್ದು, ಆನೆ ಮತ್ತೆ ಅದೇ ರೀತಿ ಪ್ರತಿಕ್ರಿಯಿಸುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಷ್ಟು ಮುದ್ದಾದ ಸಂಬಂಧ ಎಂದರೆ, ಮತ್ತೊಬ್ಬರು, ಮಾಲೀಕ ಹಾಗೂ ಆನೆಯ ಶುದ್ಧ ಪ್ರೀತಿಯಿದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಸ್ವಾರ್ಥ ಪ್ರೀತಿ ಮೂಕ ಪ್ರಾಣಿಗಳಿಂದ ಮಾತ್ರ ಸಿಗೋದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us