Video: ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿಯೇ ಬಿಡ್ತು ದೈತ್ಯ ಆನೆ

ಶಾಂತ ಸ್ಥಿತಿಯಲ್ಲಿರುವ ಆನೆಯನ್ನು ನೋಡುವುದು ಎಷ್ಟು ಖುಷಿ ಕೊಡುತ್ತದೆಯೋ ಆದರೆ, ಈ ಮದವೇರಿದ ಆನೆಗಳು ಮಾಡುವ ಅವಾಂತರಗಳು ಅಷ್ಟಿಷ್ಟಲ್ಲ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಆನೆಯೊಂದು ನಡುರಸ್ತೆಯಲ್ಲೇ ಮಿನಿ ಟ್ರಕ್‌ವೊಂದನ್ನು ಉರುಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿಯೇ ಬಿಡ್ತು ದೈತ್ಯ ಆನೆ
ವೈರಲ್ ವಿಡಿಯೋ
Image Credit source: Twitter

Updated on: Aug 24, 2025 | 12:21 PM

ಆನೆಗಳ (elephant) ಆಟ ತುಂಟಾಟಗಳು ಮನಸ್ಸಿಗೆ ಎಷ್ಟು ಖುಷಿಕೊಡುತ್ತದೆ, ಆದರೆ ರೊಚ್ಚಿಗೆದ್ದರೆ ಎದುರಿಗಿದ್ದವರ ಕಥೆ ಮುಗಿದೇ ಹೋಯಿತು. ಕಾಡಾನೆಗಳಿಗೆ ಕೋಪ ಬಂದರೆ ಅವುಗಳ ನಿಯಂತ್ರಿಸುವುದು ಕಷ್ಟಕರ. ದಾಂಧಲೆ ನಡೆಸುವ ಈ ಆನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಸುಸಂತಾ ನಂದಾ (susanta nanda) ಅವರು ಹಂಚಿಕೊಂಡಿರುವ ಕ್ಲಿಪ್‌ನಲ್ಲಿ ಆನೆಯೊಂದು ಮಿನಿ ಟ್ರಕನ್ನು ಉರುಳಿಸಿದ್ದು, ತನ್ನ ಶಕ್ತಿಯನ್ನು ಪ್ರದರ್ಶಿಸಿದಂತಿದೆ. ಈ ದೃಶ್ಯವು ವನ್ಯಜೀವಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವಂತಿದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು, susantananda ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಶೀರ್ಷಿಕೆಯಲ್ಲಿ ವಾಸ್ತವ ಸತ್ಯವನ್ನು ಬರೆದುಕೊಂಡಿದ್ದಾರೆ. ಆನೆಯೂ ತನ್ನ ಈ ಕೆಲಸದಲ್ಲಿ ಶಕ್ತಿಯನ್ನು ಮಾತ್ರವಲ್ಲ, ಒತ್ತಡವನ್ನು ಪ್ರತಿಬಿಂಬಿಸುತ್ತಿದೆ. ವನ್ಯಜೀವಿಗಳು ಮನೋರಂಜನೆಯಲ್ಲ, ಅವುಗಳಿಗೆ ಯಾವುದೇ ತೊಂದರೆಯಿಲ್ಲದೇ ಬದುಕಲು ಅವಕಾಶ ನೀಡಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ
ಚೊಂಪುವಿಗೆ ಚೆಂಡಾಟ ಆಡೋದಂದ್ರೆ ಬಲು ಇಷ್ಟ ನೋಡಿ
ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಪುಟಾಣಿ ಆನೆ
ಅಮ್ಮನ ಮಡಿಲು ಸೇರಿದ ದಾರಿ ತಪ್ಪಿದ ಮರಿಯಾನೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ದಟ್ಟವಾದ ಹಸಿರಿನಿಂದ ಆವೃತವಾದ ಯಾವುದೇ ವಾಹನಗಳ ಓಡಾಟವಿಲ್ಲದ ರಸ್ತೆಯಲ್ಲಿ ರೆಕಾರ್ಡ್ ಮಾಡಲಾದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಆನೆಯೊಂದು ನಡುರಸ್ತೆಯಲ್ಲಿದ್ದ ಮಿನಿ ಟ್ರಕ್ ವೊಂದನ್ನು ತನ್ನ ಶಕ್ತಿಯನ್ನೆಲ್ಲಾ ಬಳಸಿ ಉರುಳಿಸುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: Video: ಆನೆ ಬಂತೊಂದಾನೆ, ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ಪ್ರದೇಶವು ಅವುಗಳ ವಾಸಸ್ಥಳ, ಹೀಗಾಗಿ ನಾವು ಅಲ್ಲಿಗೆ ಹೋದದ್ದು ನಮ್ಮ ತಪ್ಪು ಎಂದಿದ್ದಾರೆ. ಮತ್ತೊಬ್ಬರು ಮಾನವ ಚಟುವಟಿಕೆಗಳು ಅರಣ್ಯ ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ವಾಹನಗಳು ಅಥವಾ ಪ್ರವಾಸಿಗರು ಮತ್ತು ಕಾಡು ಪ್ರಾಣಿಗಳ ನಡುವಿನ ಘರ್ಷಣೆಗಳು ಹೆಚ್ಚಾಗುತ್ತಲೇ ಇದೆ ಎಂದು ಹೇಳಿದ್ದಾರೆ. ಈ ದೃಶ್ಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು ಈ ರೀತಿಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನೀವು ಯಾವುದೇ ಕಾಡು ಪ್ರಾಣಿಯನ್ನು ಕಂಡರೆ , ತಾಳ್ಮೆಯಿಂದ ಇರಿ. ಅವುಗಳಿಗೆ ಭಯಪಡಬೇಡಿ, ಭಯ ಪಡಿಸಬೇಡಿ, ಅವುಗಳು ಶೀಘ್ರದಲ್ಲೇ ತಮ್ಮದೇ ಆದ ರೀತಿಯಲ್ಲಿ ಸರಿಯಾಗುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Sun, 24 August 25