ವಿದೇಶದಲ್ಲಿ ಇಂಜಿನಿಯರ್ ಆಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿ ಇಂದು ಬೀದಿಬದಿ ಜೀವನ; ಪತ್ನಿಯಿಂದಲೇ ಈ ಸ್ಥಿತಿ!

ವೈರಲ್​​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ "ನಾನು ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ, ನನ್ನ ಪತ್ನಿಯ ಸಂತೋಷಕ್ಕಾಗಿ ಹಗಲಿರುಳು ಹಣ ಸಂಪಾದಿಸುತ್ತಿದ್ದೆ, ಆದರೆ ಆಕೆ ತನ್ನ ಮಕ್ಕಳೊಂದಿಗೆ ಬೇರೆಯವರೊಂದಿಗೆ ಹೊರಟುಹೋದಳು" ಎಂದು ವ್ಯಕ್ತಿ ಆಳುತ್ತಾ ಹೇಳಿರುವುದನ್ನು ಕಾಣಬಹುದು.

ವಿದೇಶದಲ್ಲಿ ಇಂಜಿನಿಯರ್ ಆಗಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದ ವ್ಯಕ್ತಿ ಇಂದು ಬೀದಿಬದಿ ಜೀವನ; ಪತ್ನಿಯಿಂದಲೇ ಈ ಸ್ಥಿತಿ!

Updated on: Oct 01, 2024 | 12:12 PM

ಕುಟುಂಬದ ಸಂತೋಷಕ್ಕಾಗಿ ವಿದೇಶಕ್ಕೆ ಹೋಗಿ ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದ ವ್ಯಕ್ತಿಯ ಜೀವನ ಇದೀಗ ಬೀದಿಗೆ ಬಿದ್ದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದ್ದು, ವ್ಯಕ್ತಿಯ ಜೀವನ ಕಂಡು ನೆಟ್ಟಿಗರು ಕಂಬನಿ ಮಿಡಿದ್ದಿದ್ದಾರೆ. ವಿದೇಶದಲ್ಲಿ ಹಗಲಿರುಳಿ ದುಡಿದು ಪತ್ನಿ ಮಕ್ಕಳ ಸಂತೋಷಕ್ಕಾಗಿ ಲಕ್ಷ ಲಕ್ಷ ಹಣವನ್ನು ಮನೆಗೆ ಕಳುಹಿಸುತ್ತಿದ್ದ ವ್ಯಕ್ತಿ, ಈಗ ಬೀದಿಯಲ್ಲಿ ಜೀವನ ನಡೆಸುತ್ತಿದ್ದಾರೆ.

being_jigar_rawal ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವ್ಯಕ್ತಿಯೊಬ್ಬನ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಈಗಾಗಲೇ 12.8 ಮಿಲಿಯನ್​ ಅಂದರೆ 1 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: Viral News: ಬಿಯರ್‌ಗಾಗಿ 3 ತಿಂಗಳ ಮಗುವನ್ನೇ ಮಾರಿದ ದಂಪತಿ

ವೈರಲ್​​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ “ನಾನು ಇಂಜಿನಿಯರ್ ಓದಿದ್ದೇನೆ. ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಾ ಇದ್ದೆ, ಆದರೆ ನನ್ನ ಪತ್ನಿಯಿಂದಲೇ ನನ್ನ ಜೀವನ ಈಗ ಬೀದಿಗೆ ಬಂದಿದೆ. ನನ್ನ ಪತ್ನಿಯ ಸಂತೋಷಕ್ಕಾಗಿ ನಾನು ವಿದೇಶದಲ್ಲಿ ಹೋಗಿ ಹಣ ಸಂಪಾದಿಸುತ್ತಿದ್ದೆ, ಆದರೆ ಆಕೆ ತನ್ನ ಮಕ್ಕಳೊಂದಿಗೆ ಬೇರೆಯವರೊಂದಿಗೆ ಹೊರಟುಹೋದಳು” ಎಂದು ವ್ಯಕ್ತಿ ಆಳುತ್ತಾ ಹೇಳಿರುವುದನ್ನು ಕಾಣಬಹುದು.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us