Fact Check: ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?: ಸತ್ಯ ಇಲ್ಲಿ ತಿಳಿಯಿರಿ

ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಈ ವೈರಲ್ ವೀಡಿಯೊವನ್ನು ಹಂಚಿಕೊಂಡು, ‘ಈ ಬಿಲ್ಲು ಸಮುದ್ರದಲ್ಲಿ ಪತ್ತೆಯಾಗಿದೆ ಮತ್ತು ಇದು ರಾಮಾಯಣ ಕಾಲದ ಪುರಾವೆಯಾಗಿದೆ ಎಂದು ಹೇಳಲಾಗುತ್ತಿದೆ. ರಾಮಾಯಣದ ಪ್ರಕಾರ, ಭಗವಾನ್ ಶ್ರೀ ರಾಮನಿಗೆ ಕೋದಂಡ್ ಎಂಬ ವಿಶೇಷ ಬಿಲ್ಲು ಇತ್ತು' ಎಂದು ಬರೆದಿದ್ದಾರೆ.

Fact Check: ಸಮುದ್ರದ ಅಡಿಯಿಂದ ಶ್ರೀರಾಮನ ಬಿಲ್ಲನ್ನು ತೆಗೆಯಲಾಗಿದೆಯೇ?: ಸತ್ಯ ಇಲ್ಲಿ ತಿಳಿಯಿರಿ
Lord Shri Rama Bow Fact Check (1)

Updated on: Jun 07, 2025 | 5:54 PM

ಬೆಂಗಳೂರು (ಜೂ. 07): ಸಾಮಾಜಿಕ ಮಾಧ್ಯಮದಲ್ಲಿ (Social Media) ಒಂದು ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಇದರಲ್ಲಿ ಸಮುದ್ರದಿಂದ ಬಿಲ್ಲು ಹೊರಬರುತ್ತಿರುವುದನ್ನು ಕಾಣಬಹುದು. ಇದನ್ನು ಹಂಚಿಕೊಳ್ಳುತ್ತಾ, ಕೆಲವು ಬಳಕೆದಾರರು ಇದು ಸಮುದ್ರದಲ್ಲಿ ಕಂಡುಬಂದಿರುವ ಭಗವಾನ್ ರಾಮನ ಬಿಲ್ಲು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಪಿಟಿಐ ಫ್ಯಾಕ್ಟ್ ಚೆಕ್‌ನ ತನಿಖೆಯಲ್ಲಿ ಈ ಹಕ್ಕು ಸುಳ್ಳು ಎಂದು ಸಾಬೀತಾಯಿತು. ಈ ವಿಡಿಯೋ ನಿಜವಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ತಯಾರಿಸಲಾಗಿದೆ ಎಂದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೋವನ್ನು ಅನೇಕ ಬಳಕೆದಾರರು ಸುಳ್ಳು ಹಕ್ಕಿನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದೇನು?

ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಈ ವೈರಲ್ ವೀಡಿಯೊವನ್ನು ಹಂಚಿಕೊಂಡು, ‘ಈ ಬಿಲ್ಲು ಸಮುದ್ರದಲ್ಲಿ ಪತ್ತೆಯಾಗಿದೆ ಮತ್ತು ಇದು ರಾಮಾಯಣ ಕಾಲದ ಪುರಾವೆಯಾಗಿದೆ ಎಂದು ಹೇಳಲಾಗುತ್ತಿದೆ. ರಾಮಾಯಣದ ಪ್ರಕಾರ, ಭಗವಾನ್ ಶ್ರೀ ರಾಮನಿಗೆ ಕೋದಂಡ್ ಎಂಬ ವಿಶೇಷ ಬಿಲ್ಲು ಇತ್ತು’ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ, ಸಮುದ್ರದಿಂದ ಬಿಲ್ಲು ಹೊರಬರುವುದನ್ನು ಕಾಣಬಹುದು, ಮತ್ತು ಮುಂದಿನ ಭಾಗದಲ್ಲಿ ಆ ಬಿಲ್ಲು ದೋಣಿಯ ಮೇಲೆ ಇರಿಸಲ್ಪಟ್ಟಿದ್ದು, ಪೊಲೀಸರಿಂದ ಸುತ್ತುವರೆದಿರುವುದನ್ನು ನೋಡಬಹುದು.

ಇದನ್ನೂ ಓದಿ
ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?
ಕೇವಲ 14 ಸಾವಿರಕ್ಕೆ ಪತಂಜಲಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ?
ಬಿಡುಗಡೆ ಆಯಿತು ಟಾಟಾದ ಹೊಸ ಕಾರು: ಬೆಲೆ ಕೇವಲ 6.89 ಲಕ್ಷ ರೂ.
ಟಾಟಾ ಪಂಚ್‌ಗೆ ನಡುಕ ಹುಟ್ಟಿಸಿದ ಈ ಹೊಸ ಮಿನಿ ಎಸ್​ಯುವಿ

ಶ್ರೀರಾಮನ ಬಿಲ್ಲು ಎಂದು ಕೃತಕ ಬುದ್ದಿಮತ್ತೆಯ ವಿಡಿಯೋ ವೈರಲ್

ವೈರಲ್ ಆದ ಈ ಹಕ್ಕಿನ ಸತ್ಯಾಸತ್ಯತೆಯನ್ನು ತಿಳಿಯಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಾಟ ನಡೆಸಿದ್ದೇವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿ ಕಂಡುಬಂದಿಲ್ಲ. ಬಳಿಕ ನಾವು ವೈರಲ್ ವಿಡಿಯೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಆಗ ಈ ವಿಡಿಯೋದಲ್ಲಿ ಅನೇಕ ವ್ಯತ್ಯಾಸಗಳು ಇರುವುದು ಗಮನಕ್ಕೆ ಬಂದವು, ಆದ್ದರಿಂದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು AI ಉಪಕರಣದ ಸಹಾಯವನ್ನು ಪಡೆಯಲಾಯಿತು.

Fact Check: ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?: ಸುಳ್ಳು, ಇದು AI ವಿಡಿಯೋ

ವೈರಲ್ ವೀಡಿಯೊವನ್ನು ತನಿಖೆ ಮಾಡಲು undetectable.ai ಎಂಬ AI ತನಿಖಾ ಸಾಧನವನ್ನು ಬಳಸಿದ್ದೇವೆ. ಇದು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಅಂದರೆ AI ಸಹಾಯದಿಂದ ರಚಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಅದೇ ಸಮಯದಲ್ಲಿ, ಮತ್ತೊಂದು AI ಡಿಟೆಕ್ಟರ್ ಟೂಲ್ ಡಿಕೋಪಿ AI ಸಹಾಯವನ್ನು ಪಡೆಯಲಾಯಿತು. ಡಿಕೋಪಿ AI ಪ್ರಕಾರ, ವೈರಲ್ ವಿಡಿಯೋವನ್ನು ಶೇ. 99 ರಷ್ಟು AI ಯಿಂದ ಕೂಡಿದೆ.

ಖಾಸಗಿ ವೆಬ್​ಸೈಟ್ ಒಂದು ಹೆಚ್ಚಿನ ಮಾಹಿತಿಗಾಗಿ, AI ತಜ್ಞ ಅಜಹರ್ ಮಚಾವೆ ಅವರನ್ನು ಸಂಪರ್ಕಿಸಿತ್ತು. ಅವರು ಕೂಡ ಇದು ಎಐಯಿಂದ ರಚಿಸಲಾಗಿದೆ ಎಂದು ಹೇಳಿರುವುದನ್ನು ನಾವು ಗಮನಿಸಿದ್ದೇವೆ. ಬಿಲ್ಲಿನ ರಚನೆ ಮತ್ತು ನೀರಿನ ಅಲೆಗಳು ತುಂಬಾ ವಿಚಿತ್ರವಾಗಿವೆ ಎಂದು ಅವರು ನಮಗೆ ಹೇಳಿದರು. ಬಿಲ್ಲು ಮೇಲಕ್ಕೆ ಬಂದಾಗ ಅದು ಒದ್ದೆಯಾಗುವುದಿಲ್ಲ. ವಿಡಿಯೋದ ಎರಡನೇ ಭಾಗದಲ್ಲಿ, ಪೊಲೀಸರ ದೇಹದ ರಚನೆಯು ತುಂಬಾ ವಿಚಿತ್ರವಾಗಿದೆ ಎಂದು ಕಾಣಬಹುದು. ಇದನ್ನು ನೋಡುವುದರಿಂದ, ವಿಡಿಯೋವನ್ನು AI ಸಹಾಯದಿಂದ ಮಾಡಲಾಗಿದೆ ಎಂದು ತಿಳಿಯಬಹುದು ಎಂದಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಶ್ರೀರಾಮನ ಬಿಲ್ಲು ಸಮುದ್ರದಲ್ಲಿ ಕಂಡುಬಂದಿದೆ ಎಂದು ಹೇಳುವ ವೈರಲ್ ವಿಡಿಯೋವು AI ನಿಂದ ರಚಿಸಲ್ಪಟ್ಟಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ