Video: ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ಮನೆ ಮಂದಿ

ಮಕ್ಕಳೆಂದರೆ ಎಲ್ಲರಿಗೂ ಇಷ್ಟ. ಮನೆಗೊಂದು ಪುಟಾಣಿ ಕಂದಮ್ಮ ಬರುತ್ತದೆ ಎಂದರೆ ಆ ಖುಷಿಯೇ ಬೇರೆ. ಆದರೆ ಇಲ್ಲೊಂದು ಕುಟುಂಬ ಹೆಣ್ಣು ಮಗುವಿನ ಆಗಮನವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದೆ. ಆ ಖುಷಿ ಮನೆ ಮಂದಿಯ ಮುಖದಲ್ಲಿ ಮನೆ ಮಾಡಿದೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ಮನೆ ಮಂದಿ
ವೈರಲ್‌ ವಿಡಿಯೋ
Image Credit source: Instagram

Updated on: Nov 27, 2026 | 7:04 PM

ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು. ಹೆಣ್ಣು ಮಕ್ಕಳನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು ಎಂದು ಹೇಳುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸುವ ಕುಟುಂಬವನ್ನು ನೀವು ನೋಡಿರುತ್ತೀರಿ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದೆ. ಮನೆ ಮಂದಿ ಎಲ್ಲಾ ಮಗುವಿನ ಆಗಮನದ ಸುದ್ದಿ ಕೇಳಲು ಆಸ್ಪತ್ರೆಯಲ್ಲಿ ಕಾಯುತ್ತಿದ್ದು, ಹೆಣ್ಣು ಮಗು ಹುಟ್ಟಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಖುಷಿಯಲ್ಲಿ ಕುಣಿದಾಡಿದ್ದಾರೆ. ಮನೆ ಮಂದಿಯ ಖುಷಿ ನೋಡಿ ನೆಟ್ಟಿಗರು ಮುಖದಲ್ಲಿ ನಗು ಮೂಡಿದೆ.

ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳಿ ಕುಣಿದಾಡಿದ ಮನೆ ಮಂದಿ

ವೈರಲ್ ವೆಡ್ಡಿಂಗ್ ಗ್ರಾಮ್ (Viralweddinggram) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆಸ್ಪತ್ರೆಯಲ್ಲಿ ಮನೆಗೆ ಹೊಸ ಅತಿಥಿಯ ಆಗಮನಕ್ಕಾಗಿ ಮನೆ ಮಂದಿಯೆಲ್ಲಾ ಕಾಯುತ್ತಿರುವುದನ್ನು ಕಾಣಬಹುದು. ವೈದ್ಯರು ಹೆಣ್ಣು ಮಗುವನ್ನು ಕೈಯಲ್ಲಿಡು ತಂದು ಮನೆಯವರಿಗೆ ತೋರಿಸುತ್ತಿದ್ದಂತೆ ಅವರ ಖುಷಿಗೆ ಪಾರಾವೇ ಇಲ್ಲ ಎನ್ನುವಂತಾಗಿದೆ. ಕುಟುಂಬದವರು ಚಪ್ಪಾಳೆ ತಟ್ಟಿ ತಮ್ಮ ಖುಷಿ ಹೊರಹಾಕಿದ್ದಾರೆ. ಪುಟ್ಟ ಕಂದಮ್ಮನ ತಂದೆ ಹೆಣ್ಣು ಮಗು ಹುಟ್ಟಿದ ಖುಷಿಗೆ ಕಣ್ಣೀರು ಹಾಕಿದ್ದಾನೆ. ಆ ಬಳಿಕ ತನ್ನ ಮಗಳನ್ನು ಕೈಯಲ್ಲಿ ಎತ್ತಿಕೊಂಡು ಖುಷಿಯಿಂದ ನೋಡುತ್ತಾ ನಿಂತಿರುವುದನ್ನು ಕಾಣಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: 47 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ; ಪುಟ್ಟ ಲಕ್ಷ್ಮಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಕುಟುಂಬ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಜೀವನದ ಬೆಲೆ ಕಟ್ಟಲಾಗದ ಕ್ಷಣ ಎಂದಿದ್ದಾರೆ. ಇನ್ನೊಬ್ಬರು, ತಂದೆ ಮಗಳ ಬಾಂಧವ್ಯವೇ ಅದ್ಭುತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೆಣ್ಣು ಮಗುವಿನ ತಂದೆಯಾಗುವುದು ಅದೃಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us