ಮದುವೆಯಂದು ಸೊಸೆಯ ಕಾಲು ನೋಡಿ ಮನೆಯಿಂದ ಹೊರ ಹಾಕಿದ ಮಾವ, ವಧುವಿನ ಅಜ್ಜ ಸಾವು

ವಧುವಿನ ಕಾಲು ನೋಡಿ ಆಕೆಯನ್ನು ಮನೆಯಿಂದ ಹೊರಹಾಕಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಯುವತಿಯ ಕೈಯಲ್ಲಿರುವ ಮೆಹಂದಿ ಬಣ್ಣವೂ ಮಾಸಿರಲಿಲ್ಲ, ಮನೆಯ ಅಂಗಳದಲ್ಲಿ ಮಂಟಪದ ಸಾಮಗ್ರಿಗಳು ಕೂಡ ಹಾಗೇ ಇದ್ದವು ಆಗಲೇ ವಧುವನ್ನು ಹೊರಹಾಕಲಾಗಿದೆ.

ಮದುವೆಯಂದು ಸೊಸೆಯ ಕಾಲು ನೋಡಿ ಮನೆಯಿಂದ ಹೊರ ಹಾಕಿದ ಮಾವ, ವಧುವಿನ ಅಜ್ಜ ಸಾವು
ಮದುವೆ

Updated on: Jul 24, 2024 | 9:01 AM

ಮದುವೆಯಾಗಿ ಕೆಲಸವೇ ಕೆಲವು ಗಂಟೆಗೊಳಗೆ ಸೊಸೆಯನ್ನು ಮಾವ ಮನೆಯಿಂದ ಹೊರಹಾಕಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮಾವ ಸೊಸೆಯ ಕಾಲು ನೋಡುತ್ತಿದ್ದಂತೆ ಆಕೆಗೆ ಇಲ್ಲಿರಲು ಅವಕಾಶವೇ ಇಲ್ಲ ಎಂದು ಹೇಳಿ ಹೊರಹಾಕಿದ್ದಾರೆ. ಈ ಸುದ್ದಿ ತಿಳಿದ ವಧುವಿನ ಅಜ್ಜ ಸಾವನ್ನಪ್ಪಿದ್ದಾರೆ.

ಯುವತಿಯ ಕೈಯಲ್ಲಿರುವ ಮೆಹಂದಿ ಬಣ್ಣವೂ ಮಾಸಿರಲಿಲ್ಲ, ಮನೆಯ ಅಂಗಳದಲ್ಲಿ ಮಂಟಪದ ಸಾಮಗ್ರಿಗಳು ಕೂಡ ಹಾಗೇ ಇದ್ದವು ಆಗಲೇ ವಧುವನ್ನು ಹೊರಹಾಕಲಾಗಿದೆ.

ವಧು ಹಾಗೂ ವರನ ತಂದೆ ಇಬ್ಬರೂ ಕೂಡ ನಿವೃತ್ತ ಯೋಧರು. ಯುವತಿಯ ಕಾಲು ನೋಡಿ ಆಕೆ ಅಂಗವಿಕಲೆ, ನಮಗೆ ಆಕೆಯ ಕುಟುಂಬದವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಹೊರಹಾಕಿದ್ದಾರೆ ಆಕೆಯ ಅಜ್ಜ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಫೇಮಸ್​ ಆಗಲು 10 ಕೆಜಿ ಆಹಾರ ತಿಂದು ಸಾವನ್ನಪ್ಪಿದ್ದ ಯುವತಿ

ಯುವಕ ಯಾವುದೇ ಕೆಲಸದಲ್ಲಿರಲಿಲ್ಲ, ಯುವತಿಗೆ ನಡೆಯಲು ಕೂಡ ಯಾವುದೇ ತೊಂದರೆ ಇರಲಿಲ್ಲ. ಆದರೂ ಆಕೆಯನ್ನು ಮಾವ ಅಂಗವಿಕಲೆ ಎಂದು ಕರೆದಿದ್ದಾರೆ. ಯುವತಿಯಲ್ಲಿ ಯಾವುದೇ ದೋಷವಿಲ್ಲ ಎಂದರು. ಅತ್ತೆಯ ಮನೆಯವರು ಉದ್ದೇಶಪೂರ್ವಕವಾಗಿ ಹುಡುಗಿಯನ್ನು ಒಪ್ಪಿಕೊಳ್ಳುತ್ತಿಲ್ಲ, ಈ ಸಂಬಂಧ ಎಫ್​ಐಆರ್​ ದಾಖಲಾಗಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us