Video: ಮಗಳು ಲೇಟ್ ನೈಟ್ ಮೀಟಿಂಗ್‌ನಲ್ಲಿದ್ದಾಗಲೇ ಕ್ಲಾಸ್‌ ತೆಗೆದುಕೊಂಡ ತಂದೆ, ಕಾರಣ ಇದೇ ನೋಡಿ

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಹೆಚ್ಚು. ಬೇಕು ಬೇಕೆಂತಲೇ ಅಪ್ಪನು ಮಗಳ ಕಾಲೆಳೆಯುವ, ದೃಶ್ಯಗಳನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಮಗಳು ತಡರಾತ್ರಿ ಆಫೀಸ್‌ ಮೀಟಿಂಗ್‌ನಲ್ಲಿದ್ದಾಲೇ ತಂದೆ ಎಂಟ್ರಿ ಕೊಟ್ಟಿದ್ದಾರೆ. ತಿಂಗಳ ಸಂಬಳದಲ್ಲಿ ನನ್ನ ಮಗಳದ್ದು ಉಳಿತಾಯಕ್ಕಿಂತ ಖರ್ಚು ಹೆಚ್ಚು ಎಂದು ಆಕೆಯ ಸಹೋದ್ಯೋಗಿಗಳ ಮುಂದೆ ಮರ್ಯಾದೆ ತೆಗೆದಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

Video: ಮಗಳು ಲೇಟ್ ನೈಟ್ ಮೀಟಿಂಗ್‌ನಲ್ಲಿದ್ದಾಗಲೇ ಕ್ಲಾಸ್‌ ತೆಗೆದುಕೊಂಡ ತಂದೆ, ಕಾರಣ ಇದೇ ನೋಡಿ
ವೈರಲ್‌ ವಿಡಿಯೋ
Image Credit source: Twitter

Updated on: Aug 24, 2026 | 4:41 PM

ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವ ಉದ್ಯೋಗಿಗಳಿಗೆ ಬಿಡುವು ಇರಲ್ಲ. ಲೇಟ್ ನೈಟ್ ಮೀಟಿಂಗ್ ಜಾಯಿನ್ ಆಗಲೇಬೇಕು. ಇದೀಗ ಯುವತಿಯೊಬ್ಬಳು ಲೇಟ್ ನೈಟ್ ಮೀಟಿಂಗ್ ಹಾಜರಾಗಿದ್ದಾಳೆ. ಇದೇ ವೇಳೆ ಎಂಟ್ರಿ ಕೊಟ್ಟ ಈ ಯುವತಿಯ ತಂದೆ, ಮಗಳು ಆರ್ಡರ್ ಮಾಡಿದ ಪಾರ್ಸೆಲ್ ಈಗ ಬಂದದ್ದಕ್ಕೆ ಬೈಯಲು ಶುರು ಮಾಡಿದ್ದಾರೆ. ಹಾಸ್ಯಮಯ ಸನ್ನಿವೇಶವಾಗಿ ಮಾರ್ಪಟ್ಟ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸನಾತನ (Sanatan) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮೂವರು ಉದ್ಯೋಗಿಗಳು ರಾತ್ರಿ ಆನ್‌ಲೈನ್ ಆಫೀಸ್ ಮೀಟಿಂಗ್ ಹಾಜರಾಗಿರುವುದನ್ನು ಕಾಣಬಹುದು. ಇದೇ ವೇಳೆ, ಯುವತಿಯ ತಂದೆ ರೂಮ್ ಗೆ ಎಂಟ್ರಿ ಕೊಟ್ಟು ಈಗ ಟೈಮ್ ರಾತ್ರಿ 11:45 ಗಂಟೆ. ಈಗ ಮನೆಗೆ ಪಾರ್ಸೆಲ್ ಬಂದಿದೆ ಎಂದು ಗದರಲು ಶುರು ಮಾಡಿದ್ದಾರೆ. ಯುವತಿ ತನ್ನ ತಂದೆಯನ್ನು ಕಣ್ಣ ಸನ್ನೆಯಲ್ಲೇ ಸಮಾಧಾನ ಪಡಿಸಿ ನಾನು ಮೀಟಿಂಗ್‌ನಲ್ಲಿರುವುದನ್ನು ತಿಳಿಸಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಆದರೆ ಮಗಳು ಹೀಗೆನ್ನುತ್ತಿದ್ದಂತೆ ಯಾವ ಮೀಟಿಂಗ್ ಇದು, ನನಗೆ ತೋರಿಸು ಎಂದು ಕ್ಯಾಮೆರಾ ನೋಡುವುದನ್ನು ಕಾಣಬಹುದು. ಅಷ್ಟಕ್ಕೇ ಸುಮ್ಮನಾಗದ ತಂದೆ ಮಗಳ ಬಗ್ಗೆ ಆಕೆಯ ಸಹೋದ್ಯೋಗಿಗಳ ಬಳಿಯೇ ದೂರು ಹೇಳುತ್ತಾ, ಇವಳಿಗೆ ನೀವು ಸ್ವಲ್ಪ ಬುದ್ಧಿ ಹೇಳಿ, ತಿಂಗಳ ಇಡೀ ಸಂಬಳದಲ್ಲಿ ಒಂದೇ ಒಂದು ರೂಪಾಯಿ ಉಳಿಸಲ್ಲ ಎಂದು ಹೇಳಿದ್ದಾರೆ. ಇನ್ನು ಮುಂದೆ ನನ್ನ ಮಗಳ ಸಂಬಳವನ್ನು ಆಕೆಯ ಖಾತೆಗೆ ಹಾಕುವ ಬದಲು ತಮ್ಮ ಖಾತೆಗೆ ಕಳುಹಿಸಿ, ನಾನು ಇನ್ನಾವುದಕ್ಕಾದರೂ ಹೂಡಿಕೆ ಮಾಡುವೆ ಎಂದು ಮಗಳ ಬಾಸ್‌ ಬಳಿ ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಮಗಳ ಸಹೋದ್ಯೋಗಿಗಳ ಬಳಿ ನೀವೇನಾದ್ರೂ ತಿಂಗಳ ಸಂಬಳ ಉಳಿಸಿ ಹೂಡಿಕೆ ಮಾಡುತ್ತಿದ್ದೀರಾ ಎಂದು ವಿಚಾರಿಸುವುದನ್ನು ಕಾಣಬಹುದು.

ಇದನ್ನೂ ಓದಿ: ತಂದೆಯ ಅನಾರೋಗ್ಯದ ವೇಳೆ ವರ್ಕ್ ಫ್ರಮ್ ಹೋಮ್ ಕೊಟ್ಟದ್ದಕ್ಕೆ ಮ್ಯಾನೇಜರ್‌ಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿ

ಆಗಸ್ಟ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನದು ಪಾರ್ಸೆಲ್ ಎಂದು ಕೇಳಿದ್ದಾರೆ. ಮತ್ತೊಬ್ಬರು, ಮೂವರು ಸ್ನೇಹಿತರು ವಿಡಿಯೋ ಕಾನ್ಫರೆನ್ಸ್ ಮಾಡಿ ಮಾತನಾಡುತ್ತಿದ್ದಾರೆ. ನಿಮ್ಮ ಬಳಿ ಮೀಟಿಂಗ್ ಎಂದು ಸುಳ್ಳು ಹೇಳಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಗಳಿಗೆ ತಕ್ಕ ತಂದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:41 pm, Mon, 24 August 26

Loading...
Unable to load recommendations.
Follow Us