ಅರೇ, ಅಪ್ಪ ನಾನು ನಿನ್ನಂತೆ ಬಲಶಾಲಿ ತೋಳುಗಳನ್ನು ಬೆಳೆಸಿಕೊಳ್ತೇನೆ, ತಂದೆ ಮಗಳ ಮುದ್ದಾದ ಸಂಭಾಷಣೆ ನೋಡಿ

ಪುಟಾಣಿಗಳಿಗೆ ಅಮ್ಮನಿಗಿಂತ ಅಪ್ಪನೆಂದರೆ ತುಂಬಾನೇ ಇಷ್ಟ. ಅದರಲ್ಲಿ ಮಾತು ಕಲಿಯುವ ವಯಸ್ಸಿನಲ್ಲಿ ಅಪ್ಪನ ಜೊತೆಗೆ ಮುದ್ದು ಮುದ್ದಾಗಿ ಮಾತಾಡುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಂದೆ ಹಾಗೂ ಪುಟಾಣಿ ಕಂದಮ್ಮನ ನಡುವೆ ಬಲಶಾಲಿ ತೋಳುಗಳ ಬಗೆಗೆ ಸಂಭಾಷಣೆ ನಡೆದಿದೆ. ತಂದೆಯ ತನ್ನ ತೋಳುಗಳ ಬಗ್ಗೆ ಮಾತನಾಡುತ್ತಿದ್ದಂತೆ ಈ ಮಗುವೊಂದು ಮುದ್ದಾಗಿ ಪ್ರತಿಕ್ರಿಯೆ ನೀಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅರೇ, ಅಪ್ಪ ನಾನು ನಿನ್ನಂತೆ ಬಲಶಾಲಿ ತೋಳುಗಳನ್ನು ಬೆಳೆಸಿಕೊಳ್ತೇನೆ, ತಂದೆ ಮಗಳ ಮುದ್ದಾದ ಸಂಭಾಷಣೆ ನೋಡಿ
ವೈರಲ್​​ ವಿಡಿಯೋ
Edited By:

Updated on: Apr 17, 2025 | 5:33 PM

ಮುದ್ದು ಮಕ್ಕಳು (little kids) ಏನು ಮಾಡಿದರೂ ಕೂಡ ನೋಡೋದಕ್ಕೆ ಚಂದ. ತರಲೆ, ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಅದರಲ್ಲಿಯೂ ತಂದೆ ತಾಯಿಯ ಜೊತೆಗೆ ತನ್ನದೇ ಭಾಷೆ (language) ಯಲ್ಲಿ ಮಾತಾಡುವುದನ್ನು ನೋಡುವಾಗಲಂತೂ ಖುಷಿಯೆನಿಸುತ್ತದೆ. ಮುದ್ದು ಮಕ್ಕಳ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಂದೆ (father) ಯೊಬ್ಬರು, ತನ್ನ ಬಲಶಾಲಿ ತೋಳು (biceps) ಗಳನ್ನು ತೋರಿಸುತ್ತಾ ಪುಟ್ಟ ಕಂದಮ್ಮನೊಂದಿಗೆ ಮಾತನಾಡಿದ್ದಾರೆ. ಈ ವೇಳೆಯಲ್ಲಿ ಪ್ರೀತಿಯ ಮಾತುಗಳನ್ನು ಕೇಳಿಸಿಕೊಂಡು ಅದಕ್ಕೆ ಪ್ರತಿಯಾಗಿ ಮುದ್ದಾಗಿ ಪ್ರತಿಕ್ರಿಯಿಸಿದೆ. ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಪ ಮಗಳ ಮುದ್ದಾದ ಸಂಭಾಷಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ayuverma 1929 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬೆಡ್ ಮೇಲೆ ಪುಟಾಣಿ ಮಗುವೊಂದು ಮಲಗಿದೆ. ಪಕ್ಕದಲ್ಲೇ ಕುಳಿತ ತಂದೆ ತನ್ನ ಮುದ್ದು ಮಗಳಿಗೆ ತನ್ನ ಬಲಶಾಲಿ ತೋಳುಗಳನ್ನು ತೋರಿಸುತ್ತಾ, “ನೋಡು ಇದು ಮಸಲ್ಸ್, ನಿನಗೂ ಇಂತಹ ಮಸಲ್ಸ್ ಬರುತ್ತೆ. ನೀನು ಪೋಸ್ ಹೇಗೆ ಕೊಡ್ತೀಯಾ, ತೋರಿಸು?” ಎಂದು ಕೇಳಿದ್ದಾರೆ. ಈ ವೇಳೆ ಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಕಂದಮ್ಮ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿದೆ. ಮಗುವಿನ ಪ್ರತಿಕ್ರಿಯೆಗೆ ಅಪ್ಪನ ಮುಖದಲ್ಲಿ ನಗು ಮೂಡಿದೆ. ಈ ವೇಳೆಯಲ್ಲಿ ತಂದೆ ಮಗಳ ಸಂಭಾಷಣೆಯನ್ನು ಸೆರೆ ಹಿಡಿಯುತ್ತಿದ್ದಂತೆ ಪುಟ್ಟ ಕಂದಮ್ಮನ ತಾಯಿಯೂ ಜೋರಾಗಿ ನಗುವುದನ್ನು ಕಾಣಬಹುದು.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮುದ್ದಾದ ಪ್ರತಿಕ್ರಿಯೆ ನೀಡುತ್ತಿದ್ದಂತೆ ಸುಮ್ಮನಾಗದ ತಂದೆಯೂ, ನಾವಿಬ್ಬರೂ ಹೀಗೆ ಪೋಸ್ ಕೊಡೋಣ” ಎನ್ನುತ್ತಿದ್ದಂತೆ ಮಗುವು ಎಲ್ಲಾ ಅರ್ಥ ಆಗಿರುವಂತೆ ಕಿರುಚುತ್ತ ತನ್ನ ಖುಷಿಯನ್ನು ತೋರಿಸಿಕೊಂಡಿದೆ. ಕೊನೆಗೆ ಮಗುವಿನ ಮುದ್ದಾದ ಸಂಭಾಷಣೆಗೆ ಪ್ರತಿಯಾಗಿ ಮಗಳಿಗೆ ಮುತ್ತನ್ನಿಟ್ಟು, ಇಬ್ಬರೂ ಜಿಮ್‌ಗೆ ಹೋಗಿ ಹೀಗೆ ಪೋಸ್ ಕೊಡೋಣ ಎನ್ನುವುದನ್ನು ನೋಡಬಹುದು. ಆ ಬಳಿಕ ಮತ್ತೆ ತನ್ನ ಬಲಶಾಲಿ ತೋಳುಗಳನ್ನು ತೋರಿಸುತ್ತಿದ್ದಂತೆ ಮತ್ತೆ ತನ್ನ ಕೈಗಳನ್ನು ಎತ್ತಿಕೊಂಡು ಜೋರಾಗಿ ಕಿರುಚಿತ್ತಿದೆ.

ಇದನ್ನೂ ಓದಿ : ಆಕಾಶದಲ್ಲಿ ಹಾರಾಡುತ್ತಿರುವ ಹಕ್ಕಿಯ ಹೊಟ್ಟೆ ಸೀಳಿ ಹೊರ ಬಂದ ಈಲ್ ಮೀನು, ಕ್ಯಾಮೆರಾದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ

ಈ ವಿಡಿಯೋ ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, ‘ಪುಟಾಣಿಗಳ ಮಾತು, ಪ್ರತಿಕ್ರಿಯೆಗಳನ್ನು ನೋಡುವುದೇ ಖುಷಿ’ ಎಂದಿದ್ದಾರೆ. ಇನ್ನೊಬ್ಬರು, ‘ನೀವೇನು ಟೆನ್ಶನ್ ಮಾಡಿಕೊಳ್ಬೇಡಿ, ನಿಮ್ಮ ಮಗಳು ದೊಡ್ಡವಳಾದ ಮೇಲೆ ನಿಮ್ಮಂತೆಯೇ ಬಲಿಷ್ಠ ತೋಳುಗಳನ್ನು ಬೆಳೆಸಿಕೊಳ್ಳುತ್ತಾಳೆ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ನಿಜಕ್ಕೂ ಈ ತಂದೆ ಮಗಳ ಸಂಭಾಷಣೆಯ ಕ್ಷಣವು ಮುದ್ದಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ