Viral: ಸಿಂಗಲ್ಸ್‌ಗಳೇ ಎಚ್ಚರ; ಶುರವಾಗಿದೆ ಫ್ಲಡ್‌ಲೈಟಿಂಗ್‌ ಡೇಟಿಂಗ್‌ ಟ್ರೆಂಡ್‌, ಏನಿದು ಹೊಸ ಟಾಕ್ಸಿಕ್‌ ರಿಲೇಷನ್‌ಶಿಪ್?

ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚಿನವರು ಡೇಟಿಂಗ್‌ ಹೋಗ್ತಾರೆ. ಈಗಂತೂ ಕ್ಯಾಶುವಲ್‌ ಡೇಟಿಂಗ್‌, ಆನ್ಲೈನ್‌ ಡೇಟಿಂಗ್‌, ಸ್ಪೀಡ್‌ ಡೇಟಿಂಗ್‌, ಸಿಚುವೇಶನಲ್‌ ಡೇಟಿಂಗ್‌ ಅಂತ ಹೊಸ ಹೊಸ ಡೇಟಿಂಗ್‌ ಟ್ರೆಂಡ್‌ ಚಾಲ್ತಿಯಲ್ಲಿದೆ. ಇದೀಗ ಹೊಸ ಡೇಟಿಂಗ್‌ ಟ್ರೆಂಡ್‌ ಒಂದು ಶುರುವಾಗಿದ್ದು, ವಿಶೇಷವಾಗಿ ಸಿಂಗಲ್ಸ್‌ ಪ್ರೀತಿಯಲ್ಲಿ ಬೀಳೋ ಮುನ್ನ ಹಾಗೂ ಸಂಗಾತಿಯನ್ನು ಆಯ್ಕೆ ಮಾಡೋ ಮುನ್ನ ಈ ಟಾಕ್ಸಿಕ್‌ ಡೇಟಿಂಗ್‌ ಬಗ್ಗೆ ತಿಳಿದುಕೊಳ್ಳಲೇಬೇಕು.

Viral: ಸಿಂಗಲ್ಸ್‌ಗಳೇ ಎಚ್ಚರ; ಶುರವಾಗಿದೆ ಫ್ಲಡ್‌ಲೈಟಿಂಗ್‌ ಡೇಟಿಂಗ್‌ ಟ್ರೆಂಡ್‌, ಏನಿದು ಹೊಸ ಟಾಕ್ಸಿಕ್‌ ರಿಲೇಷನ್‌ಶಿಪ್?
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2025 | 3:31 PM

ಈ ಆಧುನಿಕ ಯುಗದಲ್ಲಿ ಪ್ರೇಮ ಸಂಬಂಧಗಳಲ್ಲಿಯೂ ಹೊಸ ಹೊಸ ಡೇಟಿಂಗ್‌ ಟ್ರೆಂಡ್‌ (Dating Trend) ಬಂದಿವೆ. ಇತ್ತೀಚಿಗೆ ಡೇಟಿಂಗ್‌ ಸಾಮಾನ್ಯವಾಗಿದ್ದು, ಮದುವೆಗೂ ಮುನ್ನ ಅಥವಾ ಪ್ರೀತಿಯಲ್ಲಿ ಬೀಳೋ ಮುನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಜನ ಡೇಟಿಂಗ್‌ ಹೋಗ್ತಾರೆ. ಅದರಲ್ಲೂ ಈಗಂತೂ ಈಗಂತೂ ಕ್ಯಾಶುವಲ್‌ ಡೇಟಿಂಗ್‌, ಆನ್ಲೈನ್‌ ಡೇಟಿಂಗ್‌, ಸ್ಪೀಡ್‌ ಡೇಟಿಂಗ್‌, ಸಿಚುವೇಶನಲ್‌ ಡೇಟಿಂಗ್‌ ಅಂತ ಹೊಸ ಹೊಸ ಡೇಟಿಂಗ್‌ ಟ್ರೆಂಡ್‌ ಚಾಲ್ತಿಯಲ್ಲಿದೆ. ಇದಕ್ಕೆ ಸೇರ್ಪಡೆಯೆಂಬಂತೆ ಫ್ಲಡ್‌ಲೈಟಿಂಗ್‌ ಡೇಟಿಂಗ್‌ ಎಂಬ ಹೊಸ ಡೇಟಿಂಗ್‌ ಟ್ರೆಂಡ್‌ ಒಂದು ಶುರುವಾಗಿದ್ದು, ಸಹಾನುಭೂತಿ ಮತ್ತು ನಂಬಿಕೆಯನ್ನು ಗಳಿಸುವ ಸಲುವಾಗಿ ಒಬ್ಬ ವ್ಯಕ್ತಿ ಈ ಡೇಟಿಂಗ್‌ನಲ್ಲಿ ತನ್ನ ಹಿಂದಿನ ಪ್ರೇಮ ಇತ್ಯಾದಿ ವಿಷಯಗಳ ಬಗ್ಗೆ ಬಹುಬೇಗ ಹಂಚಿಕೊಳ್ಳುತ್ತಾನೆ. ಹೀಗಿರುವಾಗ ವಿಶೇಷವಾಗಿ ಸಿಂಗಲ್ಸ್‌ ಪ್ರೀತಿಯಲ್ಲಿ ಬೀಳೋ ಮುನ್ನ ಈ ಟಾಕ್ಸಿಕ್‌ ಡೇಟಿಂಗ್‌ ಬಗ್ಗೆ ತಿಳಿದುಕೊಳ್ಳಲೇಬೇಕು.

ಏನಿದು ಈ ಹೊಸ ಫ್ಲಡ್‌ಲೈಟಿಂಗ್‌ ಡೇಟಿಂಗ್‌?

ಫ್ಲಡ್‌ಲೈಟಿಂಗ್‌ ಡೇಟಿಂಗ್‌ ಹೆಂಗಪ್ಪಾ ಅಂದ್ರೆ, ಇಲ್ಲಿ ಒಬ್ಬ ವ್ಯಕ್ತಿ ಮೊದಲ ಡೇಟಿಂಗ್‌ನಲ್ಲೇ ಓವರ್‌ ಶೇರಿಂಗ್‌ ಮಾಡುವ ಮೂಲಕ ಅತಿಯಾಗಿ ವೇಗವಾಗಿ ಅನ್ಯೋನ್ಯವಾಗಲು ಬಯಸುತ್ತಾನೆ. ಡೇಟಿಂಗ್‌ ಮಾಡೋ ವ್ಯಕ್ತಿ ತನ್ನ ಮೊದಲ ಡೇಟಿಂಗ್‌ನಲ್ಲಿಯೇ ವಿಪರೀತವಾಗಿ ಆತ್ಮೀಯನಾಗುತ್ತಾನೆ. ತನ್ನ ಹಳೆಯ ಪ್ರೇಮಕಥೆ, ಎಕ್ಸ್‌ ಅಥವಾ ಮಾಜಿ ಬಗ್ಗೆ ಪದೇ ಪದೇ ಮಾತಾಡ್ತಾನೆ, ಹಳೆಯ ನೋವಿನ ಕಥೆಗಳನ್ನು ಹಂಚಿಕೊಳ್ಳುತ್ತಾನೆ. ನಂಬಿಕೆ ಮತ್ತು ಸಹಾನೂಭೂತಿ ಗಳಿಸಲು ಅತಿಯಾಗಿ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಅಂದ್ರೆ ಓವರ್‌ ಶೇರಿಂಗ್‌ ಮಾಡುವ ಮೂಲಕ ನಿಮ್ಮನ್ನು ಮರಳು ಮಾಡುವ ಸಾಧ್ಯತೆ ಇರುತ್ತದೆ. ಹೀಗೆ ಹೆಚ್ಚಾಗಿ ತನ್ನ ಹಳೆಯ ಪ್ರೇಮಕಥೆ, ಎಕ್ಸ್‌ ಬಗ್ಗೆ ಅಥವಾ ನಿಮ್ಮನ್ನು ಮಾತಾಡಲು ಬಿಡದೇ ಒನ್‌ ಸೈಡೆಡ್‌ ಆಗಿ ಒಬ್ಬನೇ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಈ ಡಿಜಿಟಲ್‌ ಯುಗದಲ್ಲೂ 100 ಪುಟಗಳ ಬಜೆಟ್‌ ಪ್ರತಿಯನ್ನು ಕೈಯಲ್ಲೇ ಬರೆದು ಮಂಡಿಸಿ ದಾಖಲೆ ಬರೆದ ಸಚಿವ

ಇದನ್ನೂ ಓದಿ
ರಶ್ಮಿಕಾ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌; ಇಲ್ಲಿದೆ ನೋಡಿ ವಿಡಿಯೋ
ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಈ ಮಹಿಳೆಯ ಡ್ರೀಮ್ ಜಾಬ್ ಅಂತೆ
ಈಜುಕೊಳದಲ್ಲಿ ಪಲ್ಟಿ ಹೊಡೆದ 84 ರ ಹರೆಯದ ಅಜ್ಜಿ
ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು

ಇದೊಂದು ತರಹ ಟಾಕ್ಸಿಕ್‌ ರಿಲೇಷನ್‌ಶಿಪ್‌ ಆಗಿದ್ದು, ಇಲ್ಲಿ ಸಹಾನುಭೂತಿ ಹಾಗೂ ನಿಮ್ಮ ನಂಬಿಕೆ ಗಳಿಸಲು ಒಬ್ಬ ವ್ಯಕ್ತಿ ಅತಿಯಾಗಿ ತನ್ನ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುತ್ತಾನೆ. ಜೊತೆಗೆ ನಿಮ್ಮನ್ನು ಮಾತನಾಡಲು ಬಿಡದೇ ಒಬ್ಬನೇ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಹೀಗೆ ಒಬ್ಬ ವ್ಯಕ್ತಿಯು ತನ್ನ ಜೀವನದ ಬಗ್ಗೆ ಬೇಗನೆ ಹೆಚ್ಚು ಹಂಚಿಕೊಂಡಾಗ, ಕೆಲವರು ಇದರಿಂದ ತುಂಬಾ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಮತ್ತು ಇದು ಅವರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತದೆ. ಅಲ್ಲದೆ ನನ್ನ ಭಾವನೆಯನ್ನು ವ್ಯಕ್ತಪಡಿಸಿಲು ಬಿಡದೆ ಬರೀ ಆತನೆ ಮಾತನಾಡುತ್ತಿದ್ದಾನಲ್ಲ ಎಂದು ಅನ್ನಿಸುತ್ತದೆ. ಒಟ್ಟಾರೆಯಾಗಿ ಈ ಡೇಟಿಂಗ್‌ ಒಂಥರಾ ಟಾಕ್ಸಿಕ್‌ ಆಗಿರುತ್ತದೆ. ಹೀಗಿರುವಾಗ ನಿಮಗೆ ಒಕೆ ಎಂದಾದರೆ ಮಾತ್ರ ಇಂಥಹವರ ಜೊತೆ ಸಂಬಂಧ ಮುಂದುವರೆಸಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ