AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಹಾರ ಡೆಲಿವರಿ ಏಜೆಂಟ್​​ಗೆ ಸ್ಮಶಾನದಿಂದ ಬಂತೊಂದು ಕರೆ

ತಡರಾತ್ರಿ ಸ್ಮಶಾನಕ್ಕೆ ಆಹಾರ ಡೆಲಿವರಿಗೆ ಕರೆ ಬಂದಾಗ, ಡೆಲಿವರಿ ಏಜೆಂಟ್ ಅಲ್ಲಿಗೆ ಹೋಗಲು ನಿರಾಕರಿಸಿದ್ದರು. ಗ್ರಾಹಕ ಮಹಿಳೆ ಪಾರ್ಟಿ ಮಾಡುತ್ತಿರುವುದಾಗಿ ಹೇಳಿ, ಏಜೆಂಟ್ ಬಳಿ ದೆವ್ವಗಳಿಗೆ ಹೆದರಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾಳೆ. ಆದರೆ ಏಜೆಂಟ್, ನನ್ನ ಭಯ ದೆವ್ವಗಳಿಗಲ್ಲ, ರಾತ್ರಿ ಹೊತ್ತು ಮನುಷ್ಯರು ಏನಾದರೂ ಮಾಡಿದರೆ ಎನ್ನುವುದಕ್ಕೆ ಎಂದು ಸ್ಪಷ್ಟಪಡಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡೆಲಿವರಿ ಏಜೆಂಟರ ಸುರಕ್ಷತೆ ಮತ್ತು ಮಾನವೀಯತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Viral Video: ಆಹಾರ ಡೆಲಿವರಿ ಏಜೆಂಟ್​​ಗೆ ಸ್ಮಶಾನದಿಂದ ಬಂತೊಂದು ಕರೆ
ಸ್ಮಶಾನ
ನಯನಾ ರಾಜೀವ್
|

Updated on: Feb 04, 2026 | 2:53 PM

Share

ನವದೆಹಲಿ, ಫೆಬ್ರವರಿ 04: ಸಾಮಾನ್ಯವಾಗಿ ರಾತ್ರಿ ಹೊತ್ತು ಸ್ಮಶಾನದ ಅಕ್ಕಪಕ್ಕದ ಜಾಗದಲ್ಲಿ ಹಾದುಹೋಗುವಾಗಲೇ ಜೀವ ಬಾಯಿಗೆ ಬಂದಂಥಾ ಅನುಭವವಾಗುತ್ತೆ. ಇನ್ನು ಸ್ಮಶಾನದಿಂದಲೇ ಕಾಲ್ ಬಂದರೆ ಭಯವಾಗದೇ ಇದ್ದೀತೆ. ಆಹಾರ ವಿತರಣಾ ಏಜೆಂಟ್​​ಗೆ ತಡರಾತ್ರಿ ಸ್ಮಶಾನದಿಂದ ಕರೆ ಬಂದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸಣ್ಣ ವಿಡಿಯೋದಲ್ಲಿ ಡೆಲಿವರಿ ಏಜೆಂಟ್​ ಗ್ರಾಹಕನಿಗೆ ಕರೆ ಮಾಡಿ ಆ ಜಾಗವನ್ನು ತಲುಪಿದ್ದರು. ಫೋನ್‌ನಲ್ಲಿರುವ ಮಹಿಳೆ ಶಾಂತವಾಗಿ ಅವರಿಗೆ ಮುಂದೆ ನಡೆಯಲು ಹೇಳುತ್ತಾಳೆ. ನಾಯಿಯನ್ನು ತೋರಿಸುತ್ತಾಳೆ ಮತ್ತು ಚಿಂತಿಸಬೇಡಿ ಎಂದೂ ಹೇಳುತ್ತಾಳೆ. ಆದರೆ ಏಜೆಂಟ್ ಮುಂದೆ ಹೆಜ್ಜೆ ಹಾಕಿದ ತಕ್ಷಣ ಮತ್ತು ಮಾರ್ಗವು ಸ್ಮಶಾನದತ್ತ ಸಾಗುತ್ತದೆ.

ಮತ್ತಷ್ಟು ಓದಿ: Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು

ಕೂಡಲೇ ಡೆಲಿವರಿ ಏಜೆಂಟ್ ಅಲ್ಲೇ ನಿಲ್ಲುತ್ತಾರೆ. ಪರಿಸ್ಥಿತಿಯನ್ನು ಅರಿತ ಅವನು ಒಳಗೆ ಹೋಗಲು ನಿರಾಕರಿಸುತ್ತಾರೆ, ಅಲ್ಲಿ ಸಂಪೂರ್ಣವಾಗಿ ಕತ್ತಲೆಯಿರುತ್ತದೆ. ನಾನು ಒಳಗೆ ಹೋಗುವುದಿಲ್ಲ, ಎಂದು ಆತ ಹೇಳುತ್ತಾರೆ. ಮಹಿಳೆ ಗೇಟ್ ಮೂಲಕ ಹೋಗಿ ಪಾರ್ಸೆಲ್ ಕೊಡುವಂತೆ ಒತ್ತಾಯಿಸುತ್ತಾಳೆ.

ಮಹಿಳೆ ತಾನು ಮತ್ತು ತನ್ನ ಸ್ನೇಹಿತರು ಸ್ಮಶಾನದ ಒಳಗೆ ಪಾರ್ಟಿ ಮಾಡುತ್ತಿದ್ದೇವೆ, ಅಲ್ಲೇ ಆಹಾರವನ್ನು ತಂದುಕೊಡುವಂತೆ ಕೇಳಿಕೊಳ್ಳುತ್ತಾಳೆ.ಏಜೆಂಟ್ ಮತ್ತಷ್ಟು ಹಿಂಜರಿದಾಗ, ನೀವು ದೆವ್ವಗಳಿಗೆ ಹೆದರಿದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡುತ್ತಾಳೆ. ಅದಕ್ಕೆ ಡೆಲಿವರಿ ಏಜೆಂಟ್ ನನಗೆ ಭಯ ಇರುವುದು ಮೂಢನಂಬಿಕೆ, ದೆವ್ವಗಳಿಗೆ ಅಲ್ಲ, ರಾತ್ರ ಹೊತ್ತು ಯಾರಾದರೂ ಏನಾದರೂ ಮಾಡಿದರೆ ಎನ್ನುವ ಭಯವಿದೆ ಎಂದು ಹೇಳುತ್ತಾರೆ.

ಅನೇಕ ನೆಟ್ಟಿಗರು ಡೆಲಿವರಿ ಏಜೆಂಟ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವಿತರಣಾ ಏಜೆಂಟ್‌ಗಳು ಮನುಷ್ಯರು, ರೋಬೋಟ್‌ಗಳಲ್ಲ ಎಂಬುದನ್ನು ಮರೆತುಬಿಡುತ್ತಾರೆ ಜನರು ಅನೇಕ ಸಂದರ್ಭಗಳಲ್ಲಿ ಮರೆಯುತ್ತಾರೆ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ