Video: ದಯವಿಟ್ಟು ಭಾರತಕ್ಕೆ ಹೋಗಬೇಡಿ; ವಿದೇಶಿ ಮಹಿಳೆ ಹೀಗೆನ್ನಲು ನೀಡಿದ ಕಾರಣ ನೋಡಿ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳು, ಆಹಾರ ಪದ್ಧತಿ ಹಾಗೂ ಇಲ್ಲಿನ ಜನರಿಗೆ ಮನಸೋಲುತ್ತಾರೆ. ಆದ್ರೆ ಇದೀಗ ಅಮೆರಿಕದಿಂದ ಭಾರತಕ್ಕೆ ಬಂದ ಮಹಿಳೆಯೊಬ್ಬರು, ಭಾರತಕ್ಕೆ ದಯವಿಟ್ಟು ಹೋಗಬೇಡಿ ಎಂದು ಹೇಳಿದ್ದಾರೆ. ಈ ಮಹಿಳೆ ಹೀಗೆನ್ನಲು ನೀಡಿದ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದಯವಿಟ್ಟು ಭಾರತಕ್ಕೆ ಹೋಗಬೇಡಿ; ವಿದೇಶಿ ಮಹಿಳೆ ಹೀಗೆನ್ನಲು ನೀಡಿದ ಕಾರಣ ನೋಡಿ
ವೈರಲ್‌ ವಿಡಿಯೋ
Image Credit source: Instagram

Updated on: Aug 16, 2026 | 3:08 PM

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ಇಷ್ಟ ಪಟ್ಟು ಭಾರತಕ್ಕೆ ಬರುವ ವಿದೇಶಿಗರು ಇಲ್ಲಿ ಟ್ರಿಪ್ ಎಂಜಾಯ್ ಮಾಡ್ತಾರೆ. ಕೆಲವರು ಇಲ್ಲಿ ಜೀವನ ನಡೆಸಲು ಮುಂದಾಗುತ್ತಾರೆ. ಇಲ್ಲಿನ ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಂಡು ಜನರೊಂದಿಗೆ ಬೆರೆಯುತ್ತಾರೆ. ಇದೀಗ ಈ ಮಹಿಳೆಗೆ ಭಾರತಕ್ಕೆ ಬರಲೇಬೇಡಿ. ಒಂದು ವೇಳೆ ಇಲ್ಲಿಗೆ ಬಂದರೆ ನೀವು ಮತ್ತೆ ನಿಮ್ಮ ದೇಶಕ್ಕೆ ಮರಳಿ ಹೋಗಲ್ಲ ಎಂದಿದ್ದಾರೆ. ಇಲ್ಲಿನ ಊಟ ತಿಂಡಿ, ಜನರು, ಆಚಾರ ವಿಚಾರ ಹಾಗೂ ಸಂಸ್ಕೃತಿಗೆ ಫಿದಾ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಳ್ಳೆಯದ್ದನ್ನು ಹುಡುಕುವ ವಿದೇಶಿ ಮಹಿಳೆಯ ಗುಣಕ್ಕೆ ಮೆಚ್ಚಿಕೊಂಡಿದ್ದಾರೆ.

ಕ್ರಿಸ್ಟನ್ ಫಿಶ್ಚರ್ (Kristen Fischer) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಭಾರತಕ್ಕೆ ಹೋಗಬೇಡಿ, ನೀವು ಅದ್ಭುತ ಆಹಾರವನ್ನು ಸವಿಯುತ್ತೀರಿ, ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸುತ್ತೀರಿ, ಅದ್ಭುತ ಜನರನ್ನು ಭೇಟಿಯಾಗುತ್ತೀರಿ. ನಂತರ ದೇಶವನ್ನು ಬಿಟ್ಟು ಹೋಗಲು ಇಚ್ಛೆಯಾಗುವುದೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಭಾರತಕ್ಕೆ ಭೇಟಿ ನೀಡಿ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತಾಯ್ನಾಡಿಗೆ ಹೊರಟ ಭಾರತೀಯ ಕುಟುಂಬ ಕಂಡು ಕಣ್ಣೀರಿಟ್ಟ ಅಮೆರಿಕನ್ ಅಜ್ಜಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮತ್ತೆ ಭಾರತಕ್ಕೆ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ಭಾರತದ ಬಗ್ಗೆ ಧನಾತ್ಮಕ ಅಂಶಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತಕ್ಕೆ ಬನ್ನಿ, ಪ್ರೀತಿಯನ್ನು ಹಂಚಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us