
ವಿದೇಶಿಗರು (foreigner) ಭಾರತಕ್ಕೆ ಬಂದು ಎಂಜಾಯ್ ಮಾಡುತ್ತಾರೆ. ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಳ್ಳಲು ಇಷ್ಟ ಪಡ್ತಾರೆ. ಆದರೆ ಇದೀಗ ವಿದೇಶಿ ಮಹಿಳೆ ಭಾರತಕ್ಕೆ ಬರಲು ಬಯಸುವವರಿಗೆ ಸಲಹೆ ನೀಡಿದ್ದಾರೆ. ಭಾರತದ ಈ ಕೆಲ ವಿಷ್ಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಕಿವಿ ಮಾತು ಹೇಳಿದ್ದಾರೆ. ಭಾರತ ಟ್ರಿಪ್ ಎಂಜಾಯ್ ಮಾಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಸೋಲೋ ಫೀಮೇಲ್ ಟ್ರಾವೆಲ್ (Solo female travel) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲೋ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಭಾರತ ಪ್ರವಾಸ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋದಲ್ಲಿ ಭಾರತವು ಕೇವಲ ಒಂದು ಪ್ರವಾಸಿ ತಾಣವಲ್ಲ; ಇದು ನಿಮ್ಮನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲ ಒಂದು ಅನುಭವ. ಆದರೆ ಇಲ್ಲಿಗೆ ಬರುವ ಮುನ್ನ, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಮೊದಲನೇಯದು ಭಾರತವು ನಿಮ್ಮ ನಿರೀಕ್ಷೆಗಳಿಗೆ ಸವಾಲೊಡ್ಡಬಹುದು. ಇಲ್ಲಿನ ಗದ್ದಲ, ಸಂಚಾರ ದಟ್ಟಣೆ, ಜನಸಂದಣಿ ಆರಂಭದಲ್ಲಿ ಎಲ್ಲವೂ ನಿಮಗೆ ಅತಿಯೆನಿಸಬಹುದು ಅಥವಾ ದಿಗ್ಭ್ರಮೆಗೊಳಿಸಬಹುದು. ಪರಿಸ್ಥಿತಿಗೆ ಹೊಂದಿಕೊಳ್ಳಲು ನಿಮಗೆ ನೀವೇ ಸಮಯ ನೀಡಿ ಎಂದು ಸಲಹೆ ನೀಡಿದ್ದಾರೆ.
ಎರಡನೇಯದು ಪ್ರತಿಯೊಂದು ಅನುಭವವೂ ಆರಾಮದಾಯಕವಾಗಿ ಇರುವುದಿಲ್ಲ. ಜನರು ನಿಮ್ಮನ್ನು ದಿಟ್ಟಿಸಿ ನೋಡಬಹುದು, ನಿಮ್ಮಿಂದ ಹೆಚ್ಚು ಹಣ ವಸೂಲಿ ಮಾಡಬಹುದು ಅಥವಾ ಈ ವರ್ತನೆಗಳಿಂದ ದಣಿದುಹೋಗಬಹುದು. ಒಂಟಿಯಾಗಿ ಪ್ರಯಾಣಿಸುವ ಮಹಿಳೆಯಾಗಿ ಆತ್ಮವಿಶ್ವಾಸದಿಂದ ಇರಿ ಹಾಗೂ ಸ್ಪಷ್ಟವಾದ ಗಡಿಗಳನ್ನು ನಿಗದಿಪಡಿಸಿಕೊಳ್ಳಿ. ಮೂರನೇಯದು ಭಾರತವು ಅತ್ಯಂತ ಸುಂದರವಾದ ರೀತಿಯಲ್ಲಿ ನಿಮಗೆ ಆಶ್ಚರ್ಯ ಉಂಟು ಮಾಡುತ್ತದೆ. ಅಪರಿಚಿತರ ದಯೆ, ಆಹಾರ, ಆಧ್ಯಾತ್ಮಿಕತೆ ಮತ್ತು ಇಲ್ಲಿ ಬೆಸೆದುಕೊಳ್ಳುವ ಬಾಂಧವ್ಯಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ ಎಂದು ಬರೆದಿದ್ದಾರೆ.
ನಾನು ಅನೇಕ ದೇಶಗಳಿಗೆ ಪ್ರಯಾಣಿಸಿದ್ದೇನೆ, ಆದರೆ ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಇದನ್ನೆಲ್ಲಾ ಕೇಳಿದ ನಂತರವೂ ನೀವು ಭಾರತಕ್ಕೆ ಭೇಟಿ ನೀಡಲು ಬಯಸುತ್ತೀರಾ?.ನಿಮ್ಮ ಮುಂದಿನ ಪ್ರವಾಸಕ್ಕಾಗಿ
ಈ ದೇಶವನ್ನು ಆಯ್ಕೆ ಮಾಡಿಕೊಳ್ಳಿ. ಭಾರತಕ್ಕೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಇದನ್ನು ಕಳುಹಿಸಿ ಎಂದು ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ಇದೇ ಕಣ್ರೀ ನಿಜವಾದ ಮಾನವೀಯತೆ; ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧ ವ್ಯಕ್ತಿಗೆ ಸಹಾಯ ಮಾಡಿದ ವಿದೇಶಿಗ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನಾಯಿತು ಎಂದು ಕೇಳಿದ್ದಾರೆ. ಮತ್ತೊಬ್ಬರು, ಎಲ್ಲಾ ಅನುಭವವಾದ್ರೆ ಮಾತ್ರ ಪ್ರವಾಸ ಚಂದ ಎಂದಿದ್ದಾರೆ. ಇನ್ನೊಬ್ಬರು, ಹೊಸ ಅನುಭವಗಳು ನಮ್ಮನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ