Video: ಮುಖಕ್ಕೆ ಫೇಸ್ ಪ್ಯಾಕ್‌ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್‌ ಹಾಜರಾದ ಜೆನ್ ಝೆಡ್ ಉದ್ಯೋಗಿ

ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ಸಂಭಾಷಣೆಯ ವಿಡಿಯೋ, ಸ್ಕ್ರೀನ್ ಶಾಟ್ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಹೌದು, ಫೇಸ್ ಪ್ಯಾಕ್ ಹಾಕಿಕೊಂಡು ಆನ್ಲೈನ್ ಮೀಟಿಂಗ್‌ನಲ್ಲಿ ಭಾಗಿಯಾಗಿರುವ ಉದ್ಯೋಗಿಯ ವಿಡಿಯೋ ವೈರಲ್ ಆಗಿದೆ. ಮೀಟಿಂಗ್ ವೇಳೆ ಮ್ಯಾನೇಜರ್ ಪ್ರಶ್ನೆಗೆ ಜೆನ್ ಝೆಡ್ ಉದ್ಯೋಗಿ ನೀಡಿದ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ.. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮುಖಕ್ಕೆ ಫೇಸ್ ಪ್ಯಾಕ್‌ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್‌ ಹಾಜರಾದ ಜೆನ್ ಝೆಡ್ ಉದ್ಯೋಗಿ
ವೈರಲ್‌ ವಿಡಿಯೋ
Image Credit source: Instagram

Updated on: Aug 05, 2026 | 6:29 PM

ವರ್ಕ್ ಫ್ರಮ್ ಹೋಮ್ ಮಾಡುವವರು ಮನೆ ಹಾಗೂ ಉದ್ಯೋಗ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಜೆನ್ ಝೆಡ್ ಉದ್ಯೋಗಿಯದ್ದು ಅದೇ ಕಥೆ. ತನ್ನ ಲಂಚ್ ಬ್ರೇಕನ್ನು ವೈಯುಕ್ತಿಕ ಬೆಳೆವಣಿಗೆಗಾಗಿ ಬಳಸಿಕೊಂಡಿದ್ದಾಳೆ. ಯುವತಿಯೊಬ್ಬಳು  ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡು, ಆನ್ಲೈನ್ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದಾಳೆ. ಇದನ್ನು ನೋಡಿದ ಮ್ಯಾನೇಜರ್ ತಾಳ್ಮೆ ಕಳೆದುಕೊಂಡು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಜೆನ್ ಝೆಡ್ ಉದ್ಯೋಗಿ (Gen Z employee) ಮಾತ್ರ ಮ್ಯಾನೇಜರ್‌ಗೆ ನಾಟುವಂತೆ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಈ ಯುವತಿ ಹಾಸ್ಯಮಯ ಪ್ರತಿಕ್ರಿಯೆಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಟೀಮ್ ಬ್ರಿಡ್ಜ್ರಸ್ (team bridgers) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮ್ಯಾನೇಜರ್ ಆನ್‌ಲೈನ್ ಮಿಟೀಂಗ್‌ ಆಯೋಜಿಸಿದ್ದಾರೆ. ಇದೇ ವೇಳೆ ಉದ್ಯೋಗಿಗಳು ಕ್ಯಾಮೆರಾ ಆನ್ ಮಾಡಿದ್ದಾರೆ. ಹೀಗಿರುವಾಗ ಮ್ಯಾನೇಜರ್, ದಯವಿಟ್ಟು ನಿಮ್ಮ ಕ್ಯಾಮೆರಾವನ್ನು ಆನ್ ಮಾಡಬಹುದೇ? ನಾನು ನಿಮ್ಮೊಂದಿಗೆ ಕೆಲಸದ ಒಂದಷ್ಟು ಯೋಜನೆಗಳ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಮ್ಯಾನೇಜರ್ ಹೀಗೆನ್ನುತ್ತಿದ್ದಂತೆ ಉದ್ಯೋಗಿ ತನ್ನ ಕ್ಯಾಮೆರಾವನ್ನು ಆನ್ ಮಾಡಿದ್ದು, ಈ ಯುವತಿ ಮುಖದ ಮೇಲೆ ಫೇಸ್‌ ಪ್ಯಾಕ್ ಮುಖಕ್ಕೆ ಹಚ್ಚಿಕೊಂಡು ಮೀಟಿಂಗ್ ಹಾಜರಾಗಿರುವುದನ್ನು ಕಾಣಬಹುದು. ಯುವತಿಯ ಮುಖ ನೋಡಿದ ಮ್ಯಾನೇಜರ್ ಕೆಲಸದ ಸಮಯದಲ್ಲಿ ಈ ರೀತಿ ಮಾಡುವುದು ಸರಿಯೇ, ಈ ಕೆಲಸವನ್ನು ನಿಮ್ಮ ಲಂಚ್‌ ಬ್ರೇಕ್‌ ವೇಳೆ ಮಾಡಿಕೊಳ್ಳಿ ಎಂದು ಸಮಾಧಾನದಿಂದಲೇ ಉತ್ತರಿಸಿದ್ದಾರೆ.

ಆದರೆ ಈ ಯುವತಿ ಮ್ಯಾನೇಜರ್‌ಗೆ ನಾಟುವಂತೆ ಉತ್ತರ ನೀಡಿದ್ದು, ನೀವು ಕೊಡುವುದೇ ಹದಿನೈದು ನಿಮಿಷ ಬ್ರೇಕ್. ಆದರೆ ಈ ಫೇಸ್ ಪ್ಯಾಕ್ ಒಣಗಲು 20 ನಿಮಿಷವಾದ್ರೂ ಬೇಕು. ನಾನು ಈಗ ಕ್ಯಾಮೆರಾ ಆಫ್ ಮಾಡಬಹುದೇ? ಎಂದು ಕೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ವೃತ್ತಿ ಜತೆಗೆ ವೈಯುಕ್ತಿಕವಾಗಿ ಸಮಯ ಕೊಡುವುದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಈ ಮ್ಯಾನೇಜರ್ ಗೆ ಇದೆಲ್ಲಾ ಹೊಸದು ಎಂದು ಕಾಣಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈ ಯುವತಿಯ ಧೈರ್ಯಕ್ಕೆ ನನ್ನದೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:25 pm, Wed, 5 August 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us