
ಅಜ್ಜ ಅಜ್ಜಿಯಂದಿರಿಗೆ (grandparents) ಈ ಸ್ಮಾರ್ಟ್ ಫೋನ್ ಬಳಕೆ ತಂತ್ರಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಆದರೆ ಈ ಹೊಸ ಹೊಸ ವಿಷ್ಯಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರುತ್ತಾರೆ. ಇದೀಗ ಈ ಅಜ್ಜಿಗಿರುವ ಆಸಕ್ತಿ ಕಂಡರೆ ನೀವು ಶಾಕ್ ಆಗ್ತೀರಾ. ವೃದ್ಧ ಮಹಿಳೆ ಆನ್ಲೈನ್ ಶಾಪಿಂಗ್ ಮಾಡುವುದೆಂದು ಹೇಗೆಂದು ಕಲಿಯುತ್ತಿದ್ದಾಳೆ. ಮೊಮ್ಮಗಳು ಮೊಬೈಲ್ ನಲ್ಲಿ ಶಾಪಿಂಗ್ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದಂತೆ ಶ್ರದ್ಧೆಯಿಂದ ಕುಳಿತು ಪೆನ್ನು ಪೇಪರ್ ಹಿಡಿದು ಪ್ರತಿಯೊಂದನ್ನು ಬರೆದುಕೊಳ್ಳುತ್ತಿದ್ದಾಳೆ. ಈ ಅಜ್ಜಿಯ ಮುಗ್ಧತೆಗೆ ನೆಟ್ಟಿಗರು ಕರಗಿ ಹೋಗಿದ್ದಾರೆ.
ಇಂಟರ್ಫೆರೋನೇಲಿ (InterferonEi) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮೊಮ್ಮಗಳು ತನ್ನ ಅಜ್ಜಿಗೆ ಬ್ಲಿಂಕಿಟ್ ಆಪ್ ಮೂಲಕ ದಿನಸಿ ವಸ್ತುಗಳನ್ನು ಹೇಗೆ ಆರ್ಡರ್ ಮಾಡುವುದನ್ನು ಹೇಳಿಕೊಟ್ಟಿದ್ದಾಳೆ. ಆಪ್ ತೆರೆಯುವುದರಿಂದ ಹಿಡಿದು ಹಣ ಪಾವತಿಸುವವರೆಗೂ ಹಂತ ಹಂತವಾಗಿ ವಿವರಿಸುತ್ತಾ ಹೋಗುವುದನ್ನು ಕಾಣಬಹುದು. ಮೊಮ್ಮಗಳು ಹೇಳುವುದನ್ನು ಮುಗ್ಧವಾಗಿ ಆಲಿಸುತ್ತಾ, ಅದನ್ನು ಪೇಪರ್ ಮೇಲೆ ಬರೆದುಕೊಂಡಿದ್ದಾರೆ ಈ ಅಜ್ಜಿ.
ಈ ಕಲಿಕೆಯ ವೇಳೆ ಮೊಬೈಲ್ ಸ್ಕ್ರೀನ್ ಮೇಲೆ ವಸ್ತುಗಳು 15 ನಿಮಿಷಗಳಲ್ಲಿ ಬಂದು ತಲುಪಲಿವೆ ಎಂಬುದು ಬಂದಿದೆ. ಅದನ್ನು ಕೂಡ ಪೇಪರ್ ಮೇಲೆ ಬರೆದುಕೊಳ್ಳಲು ಮುಂದಾಗುತ್ತಾರೆ. ಮೊಮ್ಮಗಳು ಅದನ್ನು ಬರೆದುಕೊಳ್ಳಬೇಡಿ ಎಂದು ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ: ಸಲೀಸಾಗಿ ಕಾರು ಓಡಿಸುವ ಅಜ್ಜಿಯನ್ನು ಕಂಡು ಪೊಲೀಸರು ಶಾಕ್
ಈ ವಿಡಿಯೋ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಅಜ್ಜಿಯ ಆಸಕ್ತಿ ನೋಡಿ ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮುಗ್ಧ ಅಜ್ಜಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ