ಮದುವೆಯಲ್ಲಿ ವರನ ಸಕತ್ ಡಾನ್ಸ್! ನಾಚಿ ನೀರಾದ ವಧುವಿನ ವಿಡಿಯೋ ವೈರಲ್

Viral Video: ವದುವೆಯಲ್ಲಿನ  ಕೆಲವು ತಮಾಷೆಯ ವಿಡಿಯೋಗಳು ಬಹುಬೇಗ ಮನಸ್ಸು ಗೆಲ್ಲುತ್ತದೆ. ಮುಖದಲ್ಲಿ ನಗು ತರಿಸುವ ವಿಡಿಯೋಗಳೇ ಹಾಗೆ ಬೇಗ ಇಷ್ಟವಾಗುತ್ತದೆ.

ಮದುವೆಯಲ್ಲಿ ವರನ ಸಕತ್ ಡಾನ್ಸ್! ನಾಚಿ ನೀರಾದ ವಧುವಿನ ವಿಡಿಯೋ ವೈರಲ್
ವದುವೆಯಲ್ಲಿ ವರನ ಸಕತ್ ಡಾನ್ಸ್! ನಾಚಿ ನೀರಾದ ವಧು
Edited By:

Updated on: Aug 05, 2021 | 2:29 PM

ಮದುವೆ ಸಮಾರಂಭದಲ್ಲಿ ಖುಷಿಯ ಜತೆಗೆ ಡಾನ್ಸ್, ಹಾಡು, ಜೋಕ್ಸ್​ಗಳ ಕಾರ್ಯಕ್ರಮ ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಅದರಲ್ಲಿಯೂ ವಿಶೇಷವಾಗಿ ವಧು (Bride) ವರ ಒಟ್ಟಿಗೆ ಸ್ಟೆಪ್ ಹಾಕಲು ಅತಿಥಿಗಳು ಕಾಯುತ್ತಿರುತ್ತಾರೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಮದುವೆಯಲ್ಲಿ (Wedding) ವರ ಸಕತ್ ಸ್ಟೆಪ್ ಹಾಕುತ್ತಿದ್ದಾನೆ. ವರನ ಡಾನ್ಸ್ (Groom Dance) ನೋಡಿ ವಧು ನಾಚಿ ನೀರಾಗಿದ್ದಾಳೆ. ಬಳಿಕ ಅವಳೂ ನೃತ್ಯ ಮಾಡಲು ಮುಂದಾಗಿದ್ದು ಇಬ್ಬರೂ ಸೇರಿ ಭರ್ಜರಿ ಡಾನ್ಸ್ ಮಾಡುತ್ತಿದ್ದಾರೆ.

ವದುವೆಯಲ್ಲಿನ  ಕೆಲವು ತಮಾಷೆಯ ವಿಡಿಯೋಗಳು ಬಹುಬೇಗ ಮನಸ್ಸು ಗೆಲ್ಲುತ್ತದೆ. ಮುಖದಲ್ಲಿ ನಗು ತರಿಸುವ ವಿಡಿಯೋಗಳೇ ಹಾಗೆ ಬೇಗ ಇಷ್ಟವಾಗುತ್ತದೆ. ಅದರಲ್ಲಿಯೂ ವಧು– ವರನ ನಡುವಿನ ನಾಚಿಕೆ, ಉಡುಗೊರೆ, ಡಾನ್ಸ್ ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಓಡಾಡುತ್ತಲೇ ಇರುತ್ತದೆ. ಇದೀಗ ಈ ವಿಡಿಯೋ ಕೂಡಾ ನೆಟ್ಟಿಗರಿಗೆ ಬಲು ಇಷ್ಟವಾಗಿದ್ದು ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ದೃಶ್ಯವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಖುಷಿಯಿಂದ ವಧು- ವರ ಒಟ್ಟಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಮೊದಲು ನಾಚಿಕೊಂಡ ವಧು, ವರನೊಡನೆ ಡಾನ್ಸ್ ಮಾಡಿದ್ದು ತಮಾಷೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈ ಜೋಡಿಯ ಪ್ರೀತಿ ಸದಾಕಾಲ ಹೀಗೆ ಇರಲಿ ಎಂದು ಆಶಿಸಿದ್ದಾರೆ.

ವರನ ನೃತ್ಯ ನೋಡಿದ ಕೆಲವರು ಹಾಸ್ಯದ ಎಮೋಜಿಗಳನ್ನು ಕಳುಹಿಸಿದ್ದಾರೆ. ಭರ್ಜರಿ ಡಾನ್ಸ್ ಮಾಡಿದ್ದಾನೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ನೆಟ್ಟಿಗರು ವಿಡಿಯೋ ಮೆಚ್ಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಕತ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು! ವಿಡಿಯೋ ವೈರಲ್

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

Published On - 11:40 am, Thu, 5 August 21