Viral: ಮರಿಮೊಮ್ಮಗಳ ಜೊತೆ ಮಕ್ಕಳಂತೆ ಆಟವಾಡಿದ ಮುತ್ತಾತ; ಹೃದಯಸ್ಪರ್ಶಿ ವಿಡಿಯೋ ವೈರಲ್‌

ಅದೇನೋ ಗೊತ್ತಿಲ್ಲ ಅಜ್ಜ-ಅಜ್ಜಿಯಂದಿರಿಗೆ ತಮ್ಮ ಮೊಮ್ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಈ ತಾತ, ಅಜ್ಜಿ-ಮೊಮ್ಮಕ್ಕಳ ಸುಂದರ ಬಾಂಧವ್ಯದ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯವೊಂದು ವೈರಲ್‌ ಆಗಿದ್ದು, 96 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾನು ಮಗುವಾಗಿ ತನ್ನ ಮರಿ ಮೊಮ್ಮಗಳ ಜೊತೆ ಆಟವಾಡಿದ್ದಾರೆ. ಈ ಮುದ್ದಾದ ದೃಶ್ಯ ನೋಡುಗರ ಮನ ಗೆದ್ದಿದೆ.

Viral: ಮರಿಮೊಮ್ಮಗಳ ಜೊತೆ ಮಕ್ಕಳಂತೆ ಆಟವಾಡಿದ ಮುತ್ತಾತ; ಹೃದಯಸ್ಪರ್ಶಿ ವಿಡಿಯೋ ವೈರಲ್‌
ವೈರಲ್​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2025 | 5:52 PM

ಅಜ್ಜ ಅಜ್ಜಿಯಂದಿರ ಜೊತೆ ಮೊಮ್ಮಕ್ಕಳ ಬಾಂಧವ್ಯವನ್ನು ನೋಡೋದೇ ಒಂದು ಚೆಂದ. ಆಟದ ವಿಚಾರಕ್ಕೆ ಬಂದಾಗ ಮಕ್ಕಳು ತಮ್ಮ ಹೆತ್ತವರಿಗಿಂತ ಹೆಚ್ಚಾಗಿ ಅಜ್ಜಿ ಅಜ್ಜನ ಜೊತೆ ಆಟವಾಡುತ್ತಾ ಸಮಯ ಕಳೆಯಲು ಇಷ್ಟ ಪಡ್ತಾರೆ. ಅಜ್ಜಿ ತಾತನ ಜೊತೆ ಮೊಮ್ಮಕ್ಕಳ ಆಟ ತುಂಟಾಟಕ್ಕೆ ಸಂಬಂಧಿಸಿದ ಕೆಲವೊಂದಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, 96 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾನು ಮಗುವಾಗಿ ತನ್ನ ಮುದ್ದಿನ ಮರಿ ಮೊಮ್ಮಗಳ ಜೊತೆ ಆಟವಾಡುತ್ತಾ ಸಮಯ ಕಳೆದಿದ್ದಾರೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

96 ವರ್ಷ ವಯಸ್ಸಿನ ವೃದ್ಧ ವ್ಯಕ್ತಿಯೊಬ್ಬರು ಮರಿ ಮೊಮ್ಮಗಳ ಜೊತೆ ಕುಳಿತು ನಗುನಗುತ್ತಾ ತಾನು ಮಗುವಾಗಿ ಆಕೆಯ ಜೊತೆ ಆಟವಾಡಿದ್ದಾರೆ. ತಾತ ತಾತ ಎನ್ನುತ್ತಾ ತನ್ನ ಆಟದ ವಸ್ತುಗಳನ್ನು ಮುತ್ತಾತನಿಗೆ ತೋರಿಸುತ್ತಾ ಮರಿಮೊಮ್ಮಗಳು ನವ್ಯಾ ಆಟವಾಡಿದ್ದಾಳೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

Navyapatel_02 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಮುದ್ದಾದ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, “ನಿಜವಾದ ಬಂಧಕ್ಕೆ ವಯಸ್ಸಿನ ಮಿತಿಯಿಲ್ಲ; 96 ವರ್ಷ ವಯಸ್ಸಿನ ತನ್ನ ಮುತ್ತಜ್ಜನ ಜೊತೆ ನವ್ಯಾ ತುಂಬಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮರಿ ಮೊಮ್ಮಗಳ ಜೊತೆ ಕುಳಿತಿರುವ 96 ವರ್ಷ ವಯಸ್ಸಿನ ಮುತ್ತಜ್ಜ ತಾನು ಮಗುವಾಗಿ ಆಕೆಯೊಂದಿಗೆ ಮುದ್ದಾಗಿ ಆಟವಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಅಭಿವೃದ್ಧಿಯಲ್ಲಿ ನಾವು ಭಾರತವನ್ನು ಮೀರಿ ಬೆಳೆಯದಿದ್ದರೆ ನನ್ನ ಹೆಸರು ಶೆಹಜಾಬ್‌ ಷರೀಫ್‌ ಅಲ್ಲ; ವೈರಲ್‌ ಆಯ್ತು ಪಾಕ್ ಪ್ರಧಾನಿ ಹೇಳಿಕೆ

ಫೆಬ್ರವರಿ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕಂಡತಹ ಅದ್ಭುತ ದೃಶ್ಯವಿದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯವನ್ನು ಕಂಡು ನನ್ನ ತಾತನ ನೆನಪಾಯಿತುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹೃದಯಸ್ಪರ್ಶಿ ದೃಶ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ