ಹೋಳಿ ಹಬ್ಬಕ್ಕೆ ಇನ್ನಷ್ಟು ಮೆರಗು: ವಾಟ್ಸ್ಆ್ಯಪ್​ ಮೂಲಕ ನಿಮ್ಮ ಸ್ನೇಹಿತರಿಗೆ ಕಳುಹಿಸಿ ವಿಶೇಷ ಹೋಳಿ ಸ್ಟಿಕರ್ಸ್​

ಹೋಳಿ ಹಬ್ಬಕ್ಕೆ ಇನ್ನಷ್ಟು ಮೆರಗು: ವಾಟ್ಸ್ಆ್ಯಪ್​ ಮೂಲಕ ನಿಮ್ಮ ಸ್ನೇಹಿತರಿಗೆ ಕಳುಹಿಸಿ ವಿಶೇಷ ಹೋಳಿ ಸ್ಟಿಕರ್ಸ್​
ವಾಟ್ಸ್ಆ್ಯಪ್ ಸ್ಟಿಕರ್ಸ್​

ಈ ಬಾರಿಯ ಹೋಳಿ ಆಚರಣೆಗೆ ವಾಟ್ಸ್ಆ್ಯಪ್​ ಮೂಲಕ ವಿವಿಧ ಸ್ಟಿಕರ್ಸ್​​ಗಳನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿ.

shruti hegde

|

Mar 28, 2021 | 1:41 PM

ದೇಶಾದ್ಯಂತ ಪ್ರತೀ ವರ್ಷ ರಂಗುರಂಗಿನ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ. ಆದರೀಗ ಕೊವಿಡ್ ಸೋಂಕು ಎಲ್ಲೆಡೆ ತನ್ನ ಆರ್ಭಟವನ್ನು ತೋರುತ್ತಿದ್ದು, ಈ ವರ್ಷದ ಹೋಳಿ ಹಬ್ಬವನ್ನು ಆಚರಿಸಲು ತಡೆಗೋಡೆಯಾಗಿ ನಿಂತಿದೆ. ಬಣ್ಣವನ್ನು ಎರಚಿಕೊಳ್ಳುತ್ತಾ ಸಂಭ್ರಮದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ ಎಂಬುದು ಎಲ್ಲರಿಗೆ ಬೇಸರ ತಂದಿದೆ. ಮನೆಯಲ್ಲಿ ಕೂತಲ್ಲಿಯೇ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್​ಫುಲ್​ ಸ್ಟಿಕರ್ಸ್​​ಗಳೊಂದಿಗೆ ಹೋಳಿ ಆಚರಿಸಲು ವಾಟ್ಸ್ಆ್ಯಪ್ ಸುರ್ಣಾವಕಾಶ. ಹಾಗಿದ್ದಾಗ ವಾಟ್ಸ್ಆ್ಯಪ್​ ಮೂಲಕ ಹೋಳಿ ಸ್ಟಿಕರ್ಸ್​​ ಕಳುಹಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಈ ವರ್ಷದ ಹೋಳಿ ಉಡುಗೊರೆಯಾಗಿ ನೆಟ್ಟಿಗರಿಗೆ ವಿಶೇಷ ಸ್ಟಿಕರ್ಸ್​​ಗಳು ಲಭ್ಯವಾಗಿದೆ. ಆ್ಯಂಡ್ರಾಯ್ಡ್​ ಮೊಬೈಲ್​ನಲ್ಲಿ ವಾಟ್ಸ್ಆ್ಯಪ್ ಮೂಲಕ ನಿಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಸ್ಟಿಕರ್ಸ್​​​ ಕಳುಹಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ವಾಟ್ಸ್ಆ್ಯಪ್​ನಲ್ಲಿ ಹೋಳಿ ಸ್ಟಿಕ್ಕರ್ಸ್​ ಕಳುಹಿಸುವುದು ಹೇಗೆ? * ಮೊದಲಿಗೆ ಗೂಗಲ್​ ಪ್ಲೇ ಸ್ಟೋರ್​ ತೆರೆಯಿರಿ * ಹೋಳಿ ಸ್ಟಿಕರ್ಸ್​​ ಅಥವಾ ಹೋಳಿ ವಾಟ್ಸ್ಆ್ಯಪ್ ಸ್ಟಿಕ​ರ್ಸ್​ ಎಂದು ಹುಡುಕಿ * ಅಲ್ಲಿ ಹಲವಾರು ಅಪ್ಲಿಕೇಶನ್​ಗಳ ಆಯ್ಕೆ ನಿಮ್ಮದಾಗುತ್ತದೆ * ನಿಮಗಿಷ್ಟವಾದ ಹೋಳಿ ಅಪ್ಲಿಕೇಶನ್​ಅನ್ನು ಡೌನ್​ಲೋಡ್​ ಮಾಡಿಕೊಳ್ಳಿ * ಡೌನ್​ಲೋಡ್​ ಮಾಡಿದ ಅಪ್ಲಿಕೇಶನ್​ಅನ್ನು ತೆರೆಯಿರಿ. ನಿಮಗಿಷ್ಟವಾದ ಸ್ಟಿಕರ್ಸ್​​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳಿ * ನಂತರ ನಿಮ್ಮ ಮೊಬೈಲ್​ ಮೂಲಕ ವಾಟ್ಸ್ಆ್ಯಪ್​ ಅಪ್ಲಿಕೇಶನ್​ ತೆರೆಯಿರಿ * ಹೋಳಿ ಹಬ್ಬಕ್ಕೆ ಶುಭಕೋರಲು ಇಚ್ಛಿಸುವ ಸ್ನೇಹಿತರ ಪೇಜ್​ ಒಂದನ್ನು ತೆರೆಯಿರಿ * ಇಮೋಜಿ ಆಯ್ಕೆಯನ್ನು ಒತ್ತಿರಿ. ಅಲ್ಲಿ ನಿಮಗೆ ಸ್ಟಿಕರ್ಸ್​​ ಆಯ್ಕೆಗಳು ದೊರೆಯುತ್ತವೆ * ಸ್ಟಿಕರ್ಸ್​​ನಲ್ಲಿ ನೀವು ಡೌನ್​ಲೋಡ್​ ಮಾಡಿಕೊಂಡ ಸ್ಟಿಕರ್ಸ್​​ಗಳು ಲಭ್ಯವಿರುತ್ತದೆ

ಈ ಮೂಲಕ ನಿಮಗೆ ಇಷ್ಟವಾದ ಸ್ಟಿಕರ್ಸ್​​ಗಳನ್ನು ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕಳುಹಿಸುವ ಮೂಲಕ ಹೋಳಿ ಹಬ್ಬವನ್ನು ವಿಶೇಷವಾಗಿ  ಆಚರಿಸಿ. ಕೊವಿಡ್​ ಕಾರಣದಿಂದ ನಿಮಗೆ ಹಬ್ಬವನ್ನು ಆಚರಿಸಲು ಸಾಧ್ಯವಾಗದೇ ಇರಬಹುದು. ಹೀಗಿದ್ದಾಗ ನಿರಾಸೆಗೊಳ್ಳದೇ ಸಂದೇಶದ ಮೂಲಕ ವಿಶೇಷವಾದ ಹೋಳಿ ಆಚರಣೆಯ ಕಲರ್​ಫುಲ್​ ಸ್ಟಿಕರ್ಸ್​​ ಕಳುಹಿಸುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್​ಬುಕ್​ನಿಂದ ವಿಶೇಷ ಸ್ಟಿಕ್ಕರ್ಸ್​ ಕೊಡುಗೆ

ರಂಗಿನಾಟ ಹೋಳಿ ಹುಣ್ಣಿಮೆಯ ಮಹತ್ವ ವೇನು? ಕಾಮದೇವನನ್ನು ದಹಿಸೋದೇಕೆ?

Follow us on

Related Stories

Most Read Stories

Click on your DTH Provider to Add TV9 Kannada