ಏಪ್ರಿಲ್ 1ರ ಶುಕ್ರವಾರದಿಂದ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಪ್ರಯಾಣಿಸುವುದು ದುಬಾರಿಯಾಗಿದೆ. ಹೌದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ- ಎನ್ಹೆಎಐ (NHAI) ಟೋಲ್ ತೆರಿಗೆಯನ್ನು (Toll Tax) 10- 65 ರೂಗಳಷ್ಟು ಹೆಚ್ಚಿಸಿದೆ. ಟೋಲ್ ಮೂಲಕ ಹಾದುಹೋಗುವ ಲಘು ವಾಹನಗಳು ಮೊದಲಿಗಿಂತ 10 ರೂಪಾಯಿ ಹೆಚ್ಚು ತೆರಿಗೆ ಪಾವತಿಸಬೇಕು. ಹಾಗೆಯೇ ಭಾರೀ ವಾಣಿಜ್ಯ ವಾಹನಗಳು ಮೊದಲಿಗಿಂತ 65 ರೂಪಾಯಿ ಹೆಚ್ಚು ಟೋಲ್ ತೆರಿಗೆ ಪಾವತಿಸಬೇಕಾಗುತ್ತದೆ. ಟೋಲ್ ಟ್ಯಾಕ್ಸ್ ಹೆಚ್ಚಳದ ನಡುವೆ ಜನರಿಗೆ ಈ ಬಗ್ಗೆ ಕುತೂಹಲ ಮೂಡಿರುತ್ತದೆ. ಯಾವ ಹೆದ್ದಾರಿಯಲ್ಲಿ ವಾಹನಗಳಿಗೆ ಎಷ್ಟು ಟೋಲ್ ಕಟ್ಟಬೇಕು? ಈ ಟೋಲ್ಗಳನ್ನು ಲೆಕ್ಕ ಹಾಕುವ ಮಾನದಂಡ ಹೇಗೆ? ಯಾವ ಕಾರಣಕ್ಕಾಗಿ ದೊಡ್ಡ ವಾಹನಗಳಿಗೆ ಹೆಚ್ಚು ತೆರಿಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಹೆಚ್ಚಾಗಿ ಜನಸಾಮಾನ್ಯರಿಗೆ ತಿಳಿಯದ ಟೋಲ್ಗೆ ಸಂಬಂಧಿಸಿದ ಕುತೂಹಲಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.
ತೆರಿಗೆಯನ್ನು ಏಕೆ ವಿಧಿಸಲಾಗುತ್ತದೆ?
ತೆರಿಗೆಯನ್ನು ಲೆಕ್ಕಾಚಾರ ಮಾಡುವ ಮೊದಲು, ಈ ಟೋಲ್ ತೆರಿಗೆಯನ್ನು ಏಕೆ ವಿಧಿಸಲಾಗುತ್ತದೆ ಎನ್ನುವುದನ್ನು ನೋಡೋಣ. ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ತಗಲುವ ವೆಚ್ಚಗಳಿಗಾಗಿ ಭಾರತದ ಪ್ರತಿ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ/ಎಕ್ಸ್ಪ್ರೆಸ್ವೇಗಳಲ್ಲಿ ಶುಲ್ಕವನ್ನು ವಿಧಿಸಲಾಗುತ್ತದೆ.
ಯಾವ ಆಧಾರದ ಮೇಲೆ ಟೋಲ್ ನಿರ್ಧರಿಸಲಾಗುತ್ತದೆ?
ಯಾವ ಆಧಾರದ ಮೇಲೆ ರಸ್ತೆ ತೆರಿಗೆಯನ್ನು ನಿರ್ಧರಿಸಲಾಗುತ್ತದೆ? ಟೋಲ್ ಟ್ಯಾಕ್ಸ್ ಲೆಕ್ಕಾಚಾರದ ಹಿಂದೆ ಹಲವು ಸಂಗತಿಗಳು ಕಾಣಸಿಗುತ್ತವೆ. ಟೋಲ್ ತೆರಿಗೆಯ ಲೆಕ್ಕಾಚಾರವು ಹೆದ್ದಾರಿಯ ಅಂತರವನ್ನು ಅವಲಂಬಿಸಿರುತ್ತದೆ. ಅಂದರೆ ಒಂದು ವಿಸ್ತರಣೆಯ ದೂರ- ಇದು ಸಾಮಾನ್ಯವಾಗಿ 60 ಕಿ.ಮೀ ಆಗಿರುತ್ತದೆ. ಅದರಲ್ಲಿ ವ್ಯತ್ಯಾಸವಿದ್ದರೆ ತೆರಿಗೆಯನ್ನು ಸಹ ಅದಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ. ಆದರೆ 60 ಕಿಮೀಗಳನ್ನು ಪ್ರಮಾಣಿತವೆಂದು ಪರಿಗಣಿಸಲಾಗುತ್ತದೆ.
ಇದರಲ್ಲೂ ಸೇತುವೆ, ಸುರಂಗ ಅಥವಾ ಬೈಪಾಸ್ ಇತ್ಯಾದಿಗಳು ಈ 60 ಕಿಮೀ ದೂರದಲ್ಲಿ ಸೇರಿಕೊಂಡರೆ, ಆಗ ಟೋಲ್ ಟ್ಯಾಕ್ಸ್ ಬದಲಾಗುತ್ತದೆ. ಇದಲ್ಲದೆ, ಇದು ಹೆದ್ದಾರಿಯ ಅಗಲ, ಒಪ್ಪಂದ, ಅನ್ವಯವಾಗುವ ಶುಲ್ಕಗಳು, ಹೆದ್ದಾರಿಯ ವೆಚ್ಚ ಮತ್ತು ಅಲ್ಲಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಟೋಲ್ ಲೆಕ್ಕಾಚಾರ ಹೇಗೆ?
ಅಧಿಕೃತ ಮಾಹಿತಿಯ ಪ್ರಕಾರ, 2007-08ರ ಮೂಲ ವರ್ಷಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಲೇನ್ಗಳನ್ನು ಹೊಂದಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ- ಒಂದು ವಿಭಾಗದ ಬಳಕೆಗೆ ಶುಲ್ಕದ ದರವು ಕೆಳಗಿನ ದರಗಳಿಂದ ಗುಣಿಸಿದಾಗ ಅಂತಹ ವಿಭಾಗದ ಒಟ್ಟು ದರ ಬರುತ್ತದೆ. ಇದರಲ್ಲಿ , ಕಾರು, ಜೀಪ್, ವ್ಯಾನ್, ಲೈಟ್ಮೋಟಾರ್ಗಳ ಪ್ರತಿ ಕಿಲೋಮೀಟರ್ ಶುಲ್ಕದ ಮೂಲ ದರ ಅಂದರೆ 0.65. ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್ 1.05 ರೂ, ಬಸ್ ಅಥವಾ ಟ್ರಕ್ 2.20 ರೂ, ಭಾರೀ ನಿರ್ಮಾಣ ಯಂತ್ರಗಳು ಅಥವಾ ಮಲ್ಟಿ ಆಕ್ಸಲ್ ವಾಹನ ಪ್ರತಿ ಕಿಲೋ ಮೀಟರ್ಗೆ 3.45ರೂ ಆಗಿದೆ.
ಇದರಲ್ಲಿ ವೆಚ್ಚದ ಆಧಾರದ ಮೇಲೆಯೂ ದರ ಬದಲಾಗುತ್ತದೆ. ಉದಾಹರಣೆಗೆ, ಎರಡು-ಪಥದ ರಾಷ್ಟ್ರೀಯ ಹೆದ್ದಾರಿಯ ಒಂದು ವಿಭಾಗವು ನವೀಕರಣಕ್ಕಾಗಿ ಸರಾಸರಿ ಹೂಡಿಕೆಯು ಕಿಲೋ ಮೀಟರ್ಗಳಿಗೆ ಒಂದು ಕೋಟಿ ರೂಗಳನ್ನು ಮೀರಿದೆ ಮತ್ತು ಶುಲ್ಕದ ದರವು ಶೇ.60 ಆಗಿರುತ್ತದೆ.
ಹೆಚ್ಚಳ ಎಷ್ಟು?
ಸರ್ಕಾರದ ಮಾಹಿತಿಯ ಪ್ರಕಾರ, ಏಪ್ರಿಲ್ 1, 2008 ರಿಂದ ಜಾರಿಗೆ ಬರುವಂತೆ, ವರ್ಷಕ್ಕೆ ಮೂರು ಪ್ರತಿಶತದಷ್ಟು ದರ ಹೆಚ್ಚಿಸಲಾಗುತ್ತದೆ. ಅಂತಹ ಹೆಚ್ಚಿದ ದರವನ್ನು ನಂತರದ ವರ್ಷಗಳ ಮೂಲ ದರವೆಂದು ಪರಿಗಣಿಸಲಾಗುತ್ತದೆ.
ಪ್ರತಿ ವಾಹನಕ್ಕೂ ಟೋಲ್ ಏಕೆ ವಿಭಿನ್ನವಾಗಿದೆ?
ಇದು ವಾಹನದ ಗಾತ್ರ ಮತ್ತು ಅವರು ಸಾಗಿಸುವ ಹೊರೆ ಮತ್ತು ರಸ್ತೆಗೆ ಆಗುವ ಹಾನಿಯನ್ನು ಆಧರಿಸಿದೆ. ಬಳಸಿದ ವಾಹನದ ಪ್ರಕಾರವನ್ನು ಅವಲಂಬಿಸಿ ಟೋಲ್ ತೆರಿಗೆಯು ಬದಲಾಗಬಹುದು.
ಇದನ್ನೂ ಓದಿ:
Toll plaza tax: ಈ ರಾಜ್ಯ ಸರ್ಕಾರದಿಂದ ಖಾಸಗಿ ವಾಹನಗಳಿಗೆ ಟೋಲ್ ಪ್ಲಾಜಾ ತೆರಿಗೆ ವಿನಾಯಿತಿ
ಚಾಣಕ್ಯ ನೀತಿ: ಈ ಜನರಿಂದ ದಯೆಯನ್ನು ನಿರೀಕ್ಷಿಸಲೇಬೇಡಿ; ಕಾರಣ ಅವರಿಗೆ ಯಾವುದೇ ಭಾವನೆಗಳಿರುವುದಿಲ್ಲ!