
ಅಸ್ಸಾಂ, ಜುಲೈ 13: ಇತ್ತೀಚಿಗಿನ ದಿನಗಳಲ್ಲಿ ವಿಚ್ಛೇದನದ (Divorce) ಪ್ರಕರಣಗಳು ಹೆಚ್ಚಾಗಿದೆ. ಚಿಕ್ಕ ಚಿಕ್ಕ ಕಾರಣಗಳಿಂದಲ್ಲೂ ದಂಪತಿಗಳು ದೂರುವಾಗುತ್ತಿದ್ದಾರೆ. ಇನ್ನು ಕೆಲವು ದಂಪತಿಗಳದ್ದು ವಿಚಿತ್ರ ಕಥೆ. ಹೌದು, ಮದುವೆಯಾಗಿ ಎರಡು ಮಕ್ಕಳಿದ್ದರೂ ಇನ್ನೊಬ್ಬರ ಜತೆಗೆ ಓಡಿಹೋಗುವುದು. ಇಂತಹ ಘಟನೆಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಇದೀಗ ಇಂತಹದೇ ಒಂದು ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೆಂಡತಿ ಬೇರೊಬ್ಬನ ಜತೆಗೆ ಓಡಿ ಹೋದಳು ಎಂದು ವಿಚ್ಛೇದನ ನೀಡಿ ಹಾಲಿನಲ್ಲಿ ಸ್ನಾನ ಮಾಡಿದ್ದಾನೆ. ಅಸ್ಸಾಂ (Assam )ನಿವಾಸಿ ಮಾಣಿಕ್ ಅಲಿಗೆ ಇದು ಸಂಭ್ರಮಿಸಲು ಯೋಗ್ಯವಾದ ದಿನ ಎಂದು ಹೇಳಿಕೊಂಡಿದ್ದಾನೆ. ತನ್ನ ಜೀವನದ ಸ್ವಾತಂತ್ರ್ಯ ಪಡೆದುಕೊಂಡ ಕ್ಷಣ. ಇದು ನಮ್ಮ ಆಚರಣೆ ಅಲ್ಲದಿದ್ದರು. ನನಗೆ ತುಂಬಾ ಸಂತೋಷವಾಗಿದೆ. ಆ ಕಾರಣಕ್ಕೆ ನಾನು ಹೀಗೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ.
ಅಸ್ಸಾಂನ ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತನ್ನ ಹೆಂಡತಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನ ಸ್ನಾನ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಮನೆಯ ಹೊರಗೆ ಹಾಲು ತುಂಬಿದ ನಾಲ್ಕು ಪ್ಲಾಸ್ಟಿಕ್ ಬಕೆಟ್ಗಳನ್ನು ಕಾಣಬಹುದು. ಸಂತೋಷದಿಂದ ಮಡದಿಯಿಂದ ಮುಕ್ತಿ ಸಿಕ್ಕಿದೆ ಎಂದು ಒಂದರಂತೆ ಒಂದು ಬಕೆಟ್‌ನಲ್ಲಿದ್ದ ಹಾಲನ್ನು ತಲೆಯ ಮೇಲೆ ಸುರಿದುಕೊಳ್ಳುತ್ತಾನೆ. ಈ ವಿಡಿಯೋ ಇದೀಗ ಎಲ್ಲಾ ಕಡೆ ಭಾರೀ ವೈರಲ್ ಆಗಿದೆ. ನಾನು ಇಂದಿನಿಂದ ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸಮಸ್ಯೆ ಅಂದ್ರು ವಿಚಿತ್ರ ಬೇಡಿಕೆ ಇಡ್ತಾರೆ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ
ನನ್ನ ಹೆಂಡತಿ ಆಕೆಯ ಲವರ್ ಜತೆಗೆ ಓಡಿ ಹೋಗುತ್ತಿದ್ದಾಳೆ. ಅದರೂ ನಾನು ಕುಟುಂಬದ ಶಾಂತಿಗಾಗಿ ನಾನು ಮೌನವಾಗಿದ್ದೆ ಎಂದು ಈ ವಿಡಿಯೋದಲ್ಲಿ ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ. ಇನ್ನು ಸ್ಥಳೀಯರು ಹೇಳಿರುವ ಪ್ರಕಾರ ಈ ಇಬ್ಬರು ದಂಪತಿಗಳು ವಿಚ್ಛೇದನ ಪಡೆಯುವ ಮೊದಲು ಆತನ ಪತ್ನಿ ಎರಡು ಬಾರಿ ಆಕೆಯ ಪ್ರೇಮಿಯ ಜತೆಗೆ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇನ್ನು ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಾಣಿಕ್ ಅಲಿ, ಇಂದು ನನಗೆ ಆಕೆಯಿಂದ ಮುಕ್ತಿ ಸಿಕ್ಕಿದೆ ಎಂದು ನನ್ನ ವಕೀಲರು ಹೇಳಿದ್ದಾರೆ. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ