Video: ಆರು ವರ್ಷಗಳ ಬಳಿಕ ವಿದೇಶದಿಂದ ಬಂದು ವೈದ್ಯೆ ಪತ್ನಿಗೆ ಸರ್ಪ್ರೈಸ್ ಕೊಟ್ಟ ಪತಿ

ಪ್ರೀತಿಯೇ ಹಾಗೆ, ತನ್ನ ಪ್ರೀತಿ ಪಾತ್ರರನ್ನು ಕಾಣಲು ಹಂಬಲಿಸುತ್ತದೆ. ಇದೀಗ ಸರಿಸುಮಾರು ಆರು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದ ಪತಿಯೊಬ್ಬ ತನ್ನ ವೈದ್ಯೆ ಪತ್ನಿಗೆ ಸರ್ಪ್ರೈಸ್ ನೀಡಿದ್ದಾನೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆರು ವರ್ಷಗಳ ಬಳಿಕ ವಿದೇಶದಿಂದ ಬಂದು ವೈದ್ಯೆ ಪತ್ನಿಗೆ ಸರ್ಪ್ರೈಸ್ ಕೊಟ್ಟ ಪತಿ
ವೈರಲ್‌ ವಿಡಿಯೋ
Image Credit source: Twitter

Updated on: Aug 17, 2026 | 2:43 PM

ಪ್ರೀತಿ (love) ಅನ್ನೋದು ಸುಂದರವಾದ ಭಾವನೆ. ಒಬ್ಬೊಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಆದರೆ ಹೆಣ್ಣಿಗೆ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಗಂಡ ಸಿಕ್ಕರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೀಗ ಆರು ವರ್ಷಗಳ ಬಳಿಕ ವಿದೇಶದಿಂದ ಬಂದ ಪತಿಯೊಬ್ಬ (husband) ಕರ್ತವ್ಯದಲ್ಲಿದ್ದ ವೈದ್ಯ ಪತ್ನಿಗೆ ಸರ್ಪ್ರೈಸ್ ನೀಡಿದ್ದಾನೆ. ವೈದ್ಯಕೀಯ ತಪಾಸಣೆಯ ನೆಪದಲ್ಲಿ ಕ್ಲಿನಿಕ್‌ಗೆ ಬಂದು ಪತ್ನಿಯ ಮುಂದೆ ನಿಂತಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ರಮೇಶ್ ತಿವಾರಿ (Ramesh Tiwari) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವೈದ್ಯೆಯಾಗಿರುವ ಪತ್ನಿಯು ಕರ್ತವ್ಯದಲ್ಲಿ ನಿರತರಾಗಿದ್ದಾಳೆ.. ಇತ್ತ ಪತಿಯೂ ಆರು ವರ್ಷಗಳ ಬಳಿಕ ವಿದೇಶದಿಂದ ಬಂದಿದ್ದಾನೆ. ಪತ್ನಿಯ ಕ್ಲಿನಿಕ್ ಗೆ ರೋಗಿಯ ವೇಷದಲ್ಲಿ ಹೋಗಿದ್ದಾನೆ. ತನ್ನ ಗಂಡನ ಗುರುತು ಸಿಕ್ಕೊಡನೆ ಹೆಂಡತಿ ಕಣ್ಣಲ್ಲಿ ಸಂತೋಷದ ಕಣ್ಣೀರು ಜಾರಿದೆ. ಆ ಬಳಿಕ ಈ ದಂಪತಿ ಪರಸ್ಪರ ತಬ್ಬಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವೆಡ್ಡಿಂಗ್ ಆನಿವರ್ಸರಿ ದಿನ ಬೈಕ್ ಗಿಫ್ಟ್ ಕೊಟ್ಟ ಮಡದಿ, ಸರ್ಪ್ರೈಸ್‌ಗೆ ಪತಿ ಭಾವುಕ

ಆಗಸ್ಟ್ 14 ರಂದು ಹಂಚಿಕೊಂಡ ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ದೂರವಿದ್ದಾಗಲೇ ಒಬ್ಬರ ಬೆಲೆ ಇನ್ನೊಬ್ಬರಿಗೆ ತಿಳಿಯೋದು ಎಂದಿದ್ದಾರೆ. ಇನ್ನೊಬ್ಬರು, ಆರು ವರ್ಷಗಳ ಪುನರ್ಮಿಲನ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಜಕ್ಕೂ ನೀನು ಪುಣ್ಯವಂತೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us