
ಹೈದರಾಬಾದ್, ಮಾ. 16; ವಾಹನ ಚಾಲನೆ (Driving) ಮಾಡುವಾಗ ಚಾಲಕರು(drivers) ಬಹಳ ಜಾಗರೂಕರಾಗಿರಬೇಕು. ಚಾಲನೆ ವೇಳೆ ಒಂದು ಸಣ್ಣ ತಪ್ಪಿನಿಂದ ಜೀವವೇ ಹೋಗಬಹುದು ಅಥವಾ ನಮ್ಮ ಆ ತಪ್ಪಿನಿಂದ ಇನ್ನೊಬ್ಬರ ಪ್ರಾಣಕ್ಕೆ ಹಾನಿ ಉಂಟಾಹಬಹುದು. ವಿಶೇಷವಾಗಿ ಡ್ರೈವಿಂಗ್ ಮಾಡುವಾಗ ಚಾಲಕರು ಮೊಬೈಲ್ (mobile) ನೋಡಿದ್ರೆ ಇದರಿಂದ ಗಮನ ಬೇರೆಡೆ ಹೋಗುತ್ತೆ ಮತ್ತು ಇದರಿಂದ ಅಪಘಾತ (accident) ಸಂಭವಿಸುವ ಸಾಧ್ಯತೆ ಕೂಡಾ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ವಾಹನ ಚಲಾವಣೆಯ ವೇಳೆ ಮೊಬೈಲ್ ಬಳಕೆ ಮಾಡಬಾರದು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಆದ್ರೆ ಇಲ್ಲೊಬ್ಬ ಕ್ಯಾಬ್ ಚಾಲಕ (cab driver) ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಪಬ್‌ಜಿ (PubG) ಗೇಮ್ ಆಡುತ್ತಾ ವಾಹನ ಚಲಾಯಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕ್ಯಾಬ್ ಚಾಲಕನ ಬೇಜವಬ್ದಾರಿತನದ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಕ್ಯಾಬ್ ಚಾಲಕನೊಬ್ಬ ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಮೊಬೈಲ್ ಗೇಮಿಂಗ್ ಪಬ್‌ಜಿ ಆಡ್ತಾ ವಾಹನ ಚಲಾವಣೆ ಮಾಡಿದ್ದಾನೆ. ಹೌದು ಒಂದು ಕೈಯಲ್ಲಿ ಸ್ಟೀರಿಂಗ್ ವೀಲ್ ಹಿಡಿದು ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು ಗೇಮ್ ಆಡುತ್ತಾ ಕಾರ್ ಓಡಿಸಿದ್ದು, ಈ ದೃಶ್ಯ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟು ಹಾಕಿದೆ.
ಈ ಕುರಿತ ವಿಡಿಯೋವನ್ನು viralinlast24hrs ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕ್ಯಾಬ್ ಚಾಲಕನೊಬ್ಬ ಒಂದು ಕೈಯಲ್ಲಿ ಸ್ಟೀರಿಂಗ್ ವೀಲ್ ಹಿಡಿದು ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ಪಬ್‌ಜಿ ಆಡುತ್ತಾ ವಾಹನ ಚಲಾವಣೆ ಮಾಡುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು
ಕೆಲ ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಈತನ ಲೈಸನ್ಸ್ ರದ್ದುಗೊಳಿಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಪಬ್ಲಿಸಿಟಿಗಾಗಿ ಮಾಡಿದಂತಹ ವಿಡಿಯೋವೆಂದು ಕಾಣುತ್ತದೆʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತನ ವಿರುದ್ಧ ಕ್ರಮ ಕೈಗೊಳ್ಳಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sun, 16 March 25