Video: ವಿದೇಶಿಗನಿಗೆ ಪಾನಿಪುರಿ ತಿನ್ನುವುದು ಹೇಗೆಂದು ಕಲಿಸಿಕೊಟ್ಟ ಭಾರತೀಯ ಸ್ನೇಹಿತರು

ಪಾನಿಪುರಿ ಅಂದ್ರೆ ಎಲ್ಲರಿಗೂ ಇಷ್ಟನೇ. ಬೀದಿ ಬದಿಯಲ್ಲಿ ನಿಂತು ಪಾನಿ ಪುರಿ ತಿನ್ನುವುದರಲ್ಲಿರುವ ಖುಷಿಯೇ ಬೇರೆ. ಹೌದು, ಇದೀಗ ವಿದೇಶಿಗನಿಗೆ ಭಾರತೀಯ ಸ್ನೇಹಿತರು ಪಾನಿಪುರಿ ತಿನ್ನುವುದು ಹೇಗೆಂದು ಕಲಿಸಿಕೊಟ್ಟಿದ್ದಾರೆ. ಈ ಕ್ಯೂಟ್ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ವಿದೇಶಿಗನಿಗೆ ಪಾನಿಪುರಿ ತಿನ್ನುವುದು ಹೇಗೆಂದು ಕಲಿಸಿಕೊಟ್ಟ ಭಾರತೀಯ ಸ್ನೇಹಿತರು
ವೈರಲ್‌ ವಿಡಿಯೋ
Image Credit source: Instagram

Updated on: Sep 17, 2026 | 1:44 PM

ಭಾರತಕ್ಕೆ ಬರುವ ವಿದೇಶಿಗರು (foreigner) ಇಲ್ಲಿನ ಪ್ರವಾಸಿ ತಾಣಗಳನ್ನು ಎಂಜಾಯ್ ಮಾಡ್ತಾರೆ. ಅದರ ಜತೆಗೆ ಇಲ್ಲಿನ ಪ್ರತಿಯೊಂದು ವಿಷ್ಯವನ್ನು ಖುಷಿಯಿಂದಲೇ ಕಲಿಯುತ್ತಾರೆ. ಆದರೆ ಇದೀಗ ವಿದೇಶಿಗನು ಭಾರತೀಯ ಸ್ನೇಹಿತರಿಂದ ಪಾನಿಪುರಿ ಸವಿಯುವುದು ಹೇಗೆಂದು ಕಲಿತಿದ್ದಾನೆ. ವಿದೇಶಿಗನ ಮುಗ್ಧತೆಯ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ.

ಭಾರತೀಯ ಸ್ನೇಹಿತರಿಂದ ಪಾನಿಪುರಿ ತಿನ್ನಲು ಕಲಿತ ವಿದೇಶಿಗ

ಕಸಿನ್ ಹಂಗಮ (Cousin hungama) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಭಾರತೀಯ ಫ್ರೆಂಡ್ಸ್‌ ವಿದೇಶಿಗನಿಗೆ ಪಾನಿಪುರಿ ಹೇಗೆಂದು ಕಲಿಸಿಕೊಟ್ಟಿರುವುದನ್ನು ಕಾಣಬಹುದು. ಈ ವಿದೇಶಿಗ ಮೊದಲ ಬಾರಿಗೆ ಪಾನಿಪುರಿ ಸವಿದು ಕ್ಯೂಟ್ ರಿಯಾಕ್ಷನ್ ನೀಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದೇ ಕಣ್ರೀ ನಿಜವಾದ ಮಾನವೀಯತೆ; ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧ ವ್ಯಕ್ತಿಗೆ ಸಹಾಯ ಮಾಡಿದ ವಿದೇಶಿಗ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇವನು ನಿಜಕ್ಕೂ ಪ್ರಾಮಾಣಿಕ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಮ್ಮೆ ತಿಂದ್ರೆ ಮತ್ತೆ ಬಿಡಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 1:43 pm, Thu, 17 September 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us