Video: ಭಾರತದ ಅಸುರಕ್ಷಿತ ರಸ್ತೆಗಳಲ್ಲಿ ಓಡಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವ್ಯಕ್ತಿ

ಭಾರತೀಯ ರಸ್ತೆಗಳು ಓವರ್‌ಲೋಡ್ ವಾಹನಗಳಿಂದ ತುಂಬಿವೆ. ಕಳಪೆ ಬೆಳಕಿನಲ್ಲಿ ಸಂಚರಿಸುವುದು ಕಷ್ಟಕರ ಎಂದು ಭಾರತೀಯ ರಸ್ತೆ ಸುರಕ್ಷತೆಯ ಬಗ್ಗೆ ಎಂಟು ವರ್ಷಗಳ ಬಳಿಕ ವಿದೇಶಕ್ಕೆ ಭಾರತಕ್ಕೆ ಮರಳಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಈ ವ್ಯಕ್ತಿ ಮಾಡಿದ ಪೋಸ್ಟ್ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತದ ಅಸುರಕ್ಷಿತ ರಸ್ತೆಗಳಲ್ಲಿ ಓಡಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Feb 23, 2026 | 11:03 AM

ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದ ರಸ್ತೆಗಳಲ್ಲಿನ ಅಸ್ತವ್ಯಸ್ತವಾದ ಸಂಚಾರ, ಅತಿಯಾದ ವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಎಂಟು ವರ್ಷಗಳ ಬಳಿಕ ಆಸ್ಟ್ರೇಲಿಯಾದಿಂದ (Australia) ಭಾರತಕ್ಕೆ ಮರಳಿದ ವ್ಯಕ್ತಿಯೊಬ್ಬರು (Indian) ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ರಸ್ತೆಗಳು ಓವರ್‌ಲೋಡ್ ವಾಹನಗಳಿಂದ ತುಂಬಿ ಹೋಗಿವೆ. ಕಳಪೆ ಬೆಳಕಿನಲ್ಲಿರುವ ಸಂಚಾರ ಪರಿಸ್ಥಿತಿಗಳನ್ನು ತೋರಿಸುವ ವಿಡಿಯೋ ಹಂಚಿಕೊಂಡು ಯುದ್ಧಕ್ಕೆ ಹೋದಂತಹ ಅನುಭವ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಅನಿಮಿಶ್ ಅಗರ್ವಾಲ್ (animish__aggarwal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅತಿಯಾದ ಹೊರೆಗಳನ್ನು ಹೊತ್ತ ಟ್ರಕ್‌ಗಳು ಮತ್ತು ಸಾಕಷ್ಟು ಬೆಳಕು, ಸುರಕ್ಷತಾ ಕ್ರಮಗಳಿಲ್ಲದೆ ವಾಹನಗಳು ಚಲಿಸುವ ದೃಶ್ಯಗಳನ್ನು ಕಾಣಬಹುದು. ಈ ವಿಡಿಯೋದ ಶೀರ್ಷಿಕೆಯಲ್ಲಿ ಭಾರತೀಯ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಎಂಟು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ವಾಸಿಸಿ ಈಗ ನನ್ನ ಸ್ವಂತ ದೇಶಕ್ಕೆ ಹಿಂತಿರುಗಿದ ನಂತರದಲ್ಲಿ ಭಾರತೀಯ ರಸ್ತೆಗಳು ಎಷ್ಟು ಅಸುರಕ್ಷಿತವಾಗಿವೆ ಎಂದು ನನಗೆ ಅರಿವಾಯಿತು. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಚಾಲನೆ ಮಾಡುವುದು. ಈ ಓವರ್‌ಲೋಡ್ ಟ್ರಕ್‌ಗಳನ್ನು ದಾಟುವುದು ಬಂದೂಕು ಇಲ್ಲದೇ ಯುದ್ಧಕ್ಕೆ ಹೋಗುವುದಕ್ಕಿಂತ ಕಡಿಮೆಯೇನಿಲ್ಲ. ನೀವು ಮೊದಲ ಹಂತವನ್ನು ದಾಟಬಹುದು ಎಂದು ನೀವು ಭಾವಿಸಿದರೆ ಮುಂದಿನ ಸವಾಲು ನಿಮಗಾಗಿ ಕಾಯುತ್ತಿದೆ, ಅಲ್ಲಿ ನೀವು ಟೈಲ್ ಲೈಟ್‌ಗಳಿಲ್ಲದ ವಾಹನಗಳನ್ನು ನೋಡುತ್ತೀರಿ. ಈ ಹೆಚ್ಚಿನವು ವಾಹನಗಳ ಹಿಂಭಾಗದಲ್ಲಿ ಪ್ರತಿಫಲಕಗಳನ್ನು ಸಹ ಹೊಂದಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಇಲ್ಲಿ 80% ವಾಹನಗಳು ಸಂಚಾರಿಸುವಾಗ ಸೂಚಕಗಳನ್ನು ಬಳಸುವುದಿಲ್ಲ. ಸೂಚಕಗಳನ್ನು ಬಳಸುತ್ತಿರುವ ಉಳಿದವರು ಅವುಗಳನ್ನು ಅನುಸರಿಸುವುದಿಲ್ಲ. 2026 ರಲ್ಲಿ ನಾವೆಲ್ಲರೂ ನಮ್ಮ ಸ್ವಂತ ಮತ್ತು ಕುಟುಂಬಗಳ ಸುರಕ್ಷತೆಗಾಗಿ ರಸ್ತೆ ನಿಯಮಗಳನ್ನು ಅನುಸರಿಸಲು ಪ್ರಾರಂಭಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಓವರ್‌ಲೋಡ್ ಮಾಡಿದ ಟ್ರಕ್‌ಗಳು ಮತ್ತು ಟೈಲ್ ಲೈಟ್‌ಗಳಿಲ್ಲದಿರುವುದು ಹೆದ್ದಾರಿಗಳಲ್ಲಿ ದೊಡ್ಡ ಅಪಾಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ನಿಜ, ಆದರೆ ಸುರಕ್ಷತೆಯ ಬಗ್ಗೆ ಗಮನ ಕೊಡದಿರುವುದೇ ಅಪಘಾತ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ವಿದೇಶದಿಂದ ಬಂದ ಬಳಿಕ ನಾನು ಅದೇ ವಿಷಯವನ್ನು ಅರಿತುಕೊಂಡೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ