Video: ಅಬ್ಬಾ! ಏನ್​​​​ ಮಸ್ತ್​​​​​ ಸ್ಟೆಪ್ ನೋಡಿ; ದೋಣಿಯ ತುದಿಯಲ್ಲಿ ನಿಂತು ಬಾಲಕನ ಜಬರ್ದಸ್ತ್ ಡ್ಯಾನ್ಸ್

ಈಗಿನ ಕಾಲದ ಮಕ್ಕಳು ಯಾವುದರಲ್ಲಿ ಕಡಿಮೆಯಿದ್ದಾರೆ ಹೇಳಿ, ಹೌದು ಪುಟಾಣಿ ಮಕ್ಕಳ ಸಾಹಸಮಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇಂಡೋನೇಷ್ಯಾದ ಹನ್ನೊಂದು ವರ್ಷದ ಬಾಲಕನು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರೇಸಿಂಗ್ ದೋಣಿಯಲ್ಲಿ ಅತ್ಯದ್ಭುತವಾಗಿ ಡ್ಯಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಬಾಲಕ ಪ್ರತಿಭೆಯನ್ನು ಕೊಂಡಾಡಿದ್ದಾರೆ.

Video: ಅಬ್ಬಾ! ಏನ್​​​​ ಮಸ್ತ್​​​​​ ಸ್ಟೆಪ್ ನೋಡಿ; ದೋಣಿಯ ತುದಿಯಲ್ಲಿ ನಿಂತು ಬಾಲಕನ ಜಬರ್ದಸ್ತ್ ಡ್ಯಾನ್ಸ್
ರಯ್ಯಾನ್ ಅರ್ಕನ್ ಧಿಕಾ
Image Credit source: Instagram
Edited By:

Updated on: Jul 22, 2025 | 12:16 PM

ಇಂಡೋನೇಷ್ಯಾ, ಜುಲೈ 22: ಸೋಶಿಯಲ್ ಮೀಡಿಯಾವೇ ಹಾಗೇ, ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡುತ್ತದೆ. ಈಗಾಗಲೇ ಅದೆಷ್ಟೋ ಜನರು ಸೋಶಿಯಲ್ ಮೀಡಿಯಾದಿಂದಲೇ ಸೆಲೆಬ್ರಿಟಿಪಟ್ಟವನ್ನು ಅಲಂಕರಿಸಿಕೊಂಡಿದ್ದಾರೆ. ಈ ಪುಟಾಣಿಗಳ ವಿಡಿಯೋಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತದೆ. ವರ್ಷದ ಆರಂಭದಲ್ಲಿ ರಿಯಾವು ಪ್ರಾಂತ್ಯದಲ್ಲಿ ವಾರ್ಷಿಕ ಸಾಂಪ್ರದಾಯಿಕ ಪಕು ಜಾಲೂರ್ ಉತ್ಸವದಲ್ಲಿ (Paku Jalur festival) ಗಮನ ಸೆಳೆದ ಬಾಲಕನ ವಿಡಿಯೋ ಇದು. ಔರಾ ಫಾರ್ಮಿಂಗ್ ಬೋಟ್ ರೇಸಿಂಗ್ ಕಿಡ್ ಈ ರಯ್ಯಾನ್ ಅರ್ಕನ್ ಧಿಕಾ (Rayyan Arkan Dhika’s). ಹೌದು, ಇಂಡೋನೇಷ್ಯಾದ 11 ವರ್ಷದ ಬಾಲಕ ರಯ್ಯಾನ್ ಅರ್ಕನ್ ಧಿಕಾ ಎನ್ನುವ ಬಾಲಕನು ವೇಗವಾಗಿ ಚಲಿಸುತ್ತಿರುವ ದೋಣಿಯ ತುತ್ತ ತುದಿಯಲ್ಲಿ ನಿಂತು ಡ್ಯಾನ್ಸ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

qatarday ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಇಂಡೋನೇಷ್ಯಾದ 11 ವರ್ಷದ ಬಾಲಕ ರಯ್ಯಾನ್ ಅರ್ಕನ್ ಧಿಕಾ ದೋಣಿಯ ತುತ್ತ ತುದಿಯಲ್ಲಿ ನಿಂತು ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಈ ಬಾಲಕ ಸಾಂಪ್ರದಾಯಿಕ ತೆಲುಕ್ ಬೆಲಂಗಾ ಉಡುಗೆ ಹಾಗೂ ಹೆಡ್ ಕ್ಲಾಸ್ಟ್ ಧರಿಸಿ ವೇಗ ಚಲಿಸುತ್ತಿರುವ ದೋಣಿಯ ತುತ್ತ ತುದಿಯಲ್ಲಿ ನಿಂತು ತನ್ನ ಎರಡು ತೋಳುಗಳನ್ನು ಬೀಸುತ್ತಾ ಅದ್ಭುತವಾಗಿ ಸ್ಟೆಪ್‌ ಹಾಕಿದ್ದಾನೆ.

ಇದನ್ನೂ ಓದಿ
ಓಲಾದಲ್ಲಿ ಆಟೋ ಬುಕ್ ಮಾಡೋ ಬದಲು ಸೆಡಾನ್ ಕಾರ್ ಬುಕ್ ಮಾಡೋದೇ ಬೆಸ್ಟ್
ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡ್ತಾರೆ, ಈ ಜನರಿಂದ ನೀವು ದೂರವಿರಿ
ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂ
ಗ್ರಾಹಕರಿಗೆ ವಿಶೇಷ ಸೂಚನೆ : ಚಹಾ ಅಂಗಡಿಯ ಗೋಡೆಯ ಮೇಲೆ ವಿಶಿಷ್ಟ ಪೋಸ್ಟರ್

ಇದನ್ನೂ ಓದಿ : ಶಾಲೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡಿದ ತಂದೆ-ಮಗಳು; ಅದ್ಭುತ ದೃಶ್ಯ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ಬಾಲಕನು ಹವಾ ಸೃಷ್ಟಿಸಿದ್ದಾನೆ. ಈ ಹುಡುಗನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇಂಡೋನೇಷ್ಯಾದ ಈ ಬಾಲಕನ ನೃತ್ಯವು ಜಾಗತಿಕವಾಗಿ ಸುದ್ದಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಅದ್ಭುತವಾಗಿದೆ, ಈ ಪುಟಾಣಿಯ ಪ್ರತಿಭೆಗಗೆ ನನ್ನದೊಂದು ಸಲಾಂ ಎಂದಿದ್ದಾರೆ. ಮತ್ತೊಬ್ಬರು, ಸೂಪರ್ ಬಾಯ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Tue, 22 July 25