Viral : ಅಚ್ಛೇ ದಿನ್ಗಳ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ ಈ ಸುದ್ದಿಯನ್ನು ಗಮನಿಸಿ. ಪತ್ರಕರ್ತೆಯೊಬ್ಬರು ಮುಂಬೈ ವಿಮಾನದಲ್ಲಿ ರೂ. 490 ಕೊಟ್ಟು ಎರಡು ಸಮೋಸಾ, ಒಂದು ಕಾಫಿ ಮತ್ತು ಒಂದು ನೀರಿನ ಬಾಟಲಿಯನ್ನು ಖರೀದಿಸಿದ ನಂತರ ‘ಕಾಫೀ ಅಚ್ಛೇ ದಿನ್ ಆಗಯೇ ಹೈ’ ಎಂದು ಬಿಜೆಪಿ ಸರ್ಕಾರವನ್ನು ಗೇಲಿ ಮಾಡಿ ಬಿಲ್ ಸಮೇತ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
Two samosas, one chai and one water bottle for 490 Rs at Mumbai airport!! Kafi ache din aa gae hain. #Vikas pic.twitter.com/aaEkAD9pmb
ಇದನ್ನೂ ಓದಿ— Farah khan (@farah17khan) December 28, 2022
ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮೋಸಾ, ನೀರಿನ ಬಾಟಲಿ ಮತ್ತು ಕಾಫಿ ಖರೀದಿಸಿದ ಪತ್ರಕರ್ತೆ ಫರಾ ಖಾನ್ ಬಹಳೇ ಒಳ್ಳೆಯದ ದಿನಗಳು ಬಂದಿವೆ ಎಂದು ಮಾಡಿದ ಟ್ವೀಟ್ ಇದಾಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿಂಡಿ ಕಾಫಿ ಕೈಗೆಟಕುವ ದರದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಇದನ್ನೂ ಓದಿ : ವರಮಾಲಾಗೆ ಸವಾಲು ಹಾಕಿದ ವಧು‘ಯೋಗ‘; ವೈರಲ್ ಆದ ವಿಡಿಯೋ
ಆಹಾರ ಮತ್ತು ಪ್ರಯಾಣದ ಆಯ್ಕೆ ಆದಷ್ಟು ಅಗ್ಗವಾಗಿರಲಿ ಅದಕ್ಕಾಗಿ ಸಾಕಷ್ಟು ಮಾರ್ಗಗಳಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದ ಬೇರೆ ಬೇರೆ ಮಳಿಗೆಗಳಲ್ಲಿ ಒಂದೇ ತಿಂಡಿಯ ಬೆಲೆಯಲ್ಲಿ ಹೇಗೆ ಮತ್ತು ಎಷ್ಟು ವ್ಯತ್ಯಾಸವಿರುತ್ತದೆ ಎನ್ನುವುದನ್ನು ಚರ್ಚಿಸಿದ್ದಾರೆ ಕೆಲವರು. ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಒಂದು ಇಡ್ಲಿ ವಡೆಗೆ ನೂರು ರೂಪಾಯಿ, ಕಿತ್ತಳೆ ಜ್ಯೂಸಿಗೆ ರೂ. 150. ಅಚ್ಛೆ ದಿನಗಳು ಹೇಗೆ ಆದಾವು? ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ಇದಕ್ಕೆ ಪ್ರತಿಯಾಗಿ, ಇದು ಯಾವ ಮಳಿಗೆಯಲ್ಲಿ ಎನ್ನುವ ವಿವರವನ್ನು ಕೊಡಿ ಎಂದಿದ್ಧಾರೆ ಒಬ್ಬರು.
ಇದನ್ನೂ ಓದಿ : ಏರ್ಪಾಡ್ಸ್ ಕಳೆದುಕೊಂಡಿದ್ದು ವಿಮಾನದಲ್ಲಿ, ಹುಡುಕಿಕೊಡಿ ಎನ್ನುತ್ತಿರುವುದು ನೆಟ್ಟಿಗರಲ್ಲಿ
ದುಬೈ ಏರ್ಪೋರ್ಟ್ಗೆ ಬಂದು ನೋಡಿ ಎಂದು ಮತ್ತೊಬ್ಬರು ಆಹ್ವಾನಿಸಿದ್ಧಾರೆ. ಕೇವಲ ಏರ್ಪೋರ್ಟ್ನಲ್ಲಿ ಮಾತ್ರವಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿಯೂ ಸಮೋಸಾ ಮತ್ತು ಪಾಪ್ಕಾರ್ನ್ ಬೆಲೆ ಶುರುವಾಗುವುದೇ ರೂ. 200 ಮತ್ತು ರೂ. 300ರಿಂದ ಎಂದಿದ್ದಾರೆ ಮತ್ತೊಬ್ಬರು.
ಅಚ್ಛೇ ದಿನ್ ಬಗ್ಗೆ ಮತ್ತು ವಿಮಾನ ನಿಲ್ದಾಣಗಳ ಆಹಾರೋತ್ಪನ್ನಗಳ ಬೆಲೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:45 am, Fri, 30 December 22