Kaamya Karthikeyan: ಎವರೆಸ್ಟ್ ಶಿಖರವನ್ನೇರಿದ ಭಾರತದ 16ರ ಹರೆಯದ ಬಾಲಕಿ ಕಾಮ್ಯ ಕಾರ್ತಿಕೇಯನ್

ಮುಂಬೈನ ನೇವಿ ಚಿಲ್ಡ್ರನ್ಸ್ ಸ್ಕೂಲ್ ನಲ್ಲಿ 12ನೇ ತರಗತಿ ಓದುತ್ತಿರುವ ಕಾಮ್ಯಾ, ಸೋಮವಾರ, ತನ್ನ ತಂದೆ ಕಮಾಂಡರ್ ಎಸ್. ಕಾರ್ತಿಕೇಯನ್, ನೌಕಾಪಡೆಯ ಅಧಿಕಾರಿಯೊಂದಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ವಿಶ್ವದ ಎರಡನೇ ಅತಿ ಕಿರಿಯ ಮೌಂಟ್ ಎವರೆಸ್ಟ್ ಶಿಖರ ಏರಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

Kaamya Karthikeyan: ಎವರೆಸ್ಟ್ ಶಿಖರವನ್ನೇರಿದ ಭಾರತದ 16ರ ಹರೆಯದ ಬಾಲಕಿ ಕಾಮ್ಯ ಕಾರ್ತಿಕೇಯನ್
Kaamya Karthikeyan
Follow us
ಅಕ್ಷತಾ ವರ್ಕಾಡಿ
|

Updated on: May 25, 2024 | 12:57 PM

16 ವರ್ಷದ ಕಾಮ್ಯ ಕಾರ್ತಿಕೇಯನ್ ಮೌಂಟ್ ಎವರೆಸ್ಟ್ (8,849 ಮೀಟರ್) ಏರಿದ ವಿಶ್ವದ ಎರಡನೇ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಮುಂಬೈನ ನೇವಿ ಚಿಲ್ಡ್ರನ್ಸ್ ಸ್ಕೂಲ್ ನಲ್ಲಿ 12ನೇ ತರಗತಿ ಓದುತ್ತಿರುವ ಕಾಮ್ಯಾ, ಸೋಮವಾರ, ತನ್ನ ತಂದೆ ಕಮಾಂಡರ್ ಎಸ್. ಕಾರ್ತಿಕೇಯನ್, ನೌಕಾಪಡೆಯ ಅಧಿಕಾರಿಯೊಂದಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ್ದಾಳೆ. ಇದೀಗ ಇವರ ಸಾಧನೆಯನ್ನು ಭಾರತೀಯ ನೌಕಾಪಡೆಯು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಕಾಮ್ಯ ಮೂರು ವರ್ಷ ವಯಸ್ಸಿನಲ್ಲೇ ಟ್ರೆಕ್ಕಿಂಗ್ ಪ್ರಾರಂಭಿಸಿದ್ದಳು, ತನ್ನ ತಂದೆಯಿಂದಲೇ ಪ್ರೇರೇಪಿತಳಾದ ಕಾಮ್ಯ ಬಾಲ್ಯದಿಂದಲೇ ಟ್ರೆಕ್ಕಿಂಗ್​​ನಲ್ಲಿ ಆಸಕ್ತಿಯನ್ನು ಹೊಂದಿದ್ದಾಳೆ. ಇಲ್ಲಿಯವರೆಗೆ ಹರ್-ಕಿ ಡನ್ (13,500 ಅಡಿ), ಕೇದಾರಕಾಂತ ಶಿಖರ (13,500 ಅಡಿ) ಮತ್ತು ರೂಪ್‌ಕುಂಡ್ ಸರೋವರ (16,400 ಅಡಿ) ಸೇರಿದಂತೆ ಹಲವು ಶಿಖರಗಳನ್ನು ಏರಿದ್ದಾರೆ. ಮೇ 2017 ರಲ್ಲಿ, ಕಾಮ್ಯಾ ಅವರು ಎವರೆಸ್ಟ್ ಬೇಸ್ ಕ್ಯಾಂಪ್ (17,600 ಅಡಿ) ಪಾದಯಾತ್ರೆ ಮಾಡಿದಾಗ ಹೊಸ ಮೈಲಿಗಲ್ಲನ್ನು ತಲುಪಿದರು, 13 ನೇ ವಯಸ್ಸಿನಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದ ಇತಿಹಾಸದಲ್ಲಿ ಎರಡನೇ ಕಿರಿಯ ಬಾಲಕಿ.

ಇದನ್ನೂ ಓದಿ: ಮದುವೆ ದಿನ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿದ ಯುವತಿ ಸಾವು; ಏನಿದು ಸರ್ಜರಿ?

ಕಾಮ್ಯ ಕಾರ್ತಿಕೇಯನ್ ಸಾಧನೆಯನ್ನು ಗುರುತಿಸಿದ ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಬಾಲಕಿಯ ಸಾಧನೆಯ ಬಗ್ಗೆ ಮಾತನಾಡಿದ್ದರು. ಇದಲ್ಲದೇ ಈ ಬಾಲಕಿ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ