
ಭಾರತವೆಂದರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ಪ್ರತಿ ವರ್ಷವು ಲೆಕ್ಕವಿಲ್ಲದಷ್ಟು ವಿದೇಶಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಇಲ್ಲಿ ಆಹಾರ, ಉಡುಗೆ ತೊಡುಗೆಯನ್ನು ಇಷ್ಟ ಪಟ್ಟು ಧರಿಸುತ್ತಾರೆ. ಕೆಲವರು ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳಿಗೆ ಮನಸೋತು ಇಲ್ಲಿಯೇ ಉಳಿದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆನ್ನುವಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಪೋಲಿಷ್ ಕಂಟೆಂಟ್ ಕ್ರಿಯೇಟರ್ ಎಮಿಲಿಯಾ ಪೀಟ್ರ್ಜಿಕ್ (Polish Content Creator Emilia Pietrzyk) ಕೇರಳದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು, ಅಲ್ಲಿನ ಮಕ್ಕಳೊಂದಿಗೆ ಮಲಯಾಳಂನಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದು, ವಿದೇಶಿ ಮಹಿಳೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಲಯಾಳಂ ಮಾತನಾಡಿ ಅಚ್ಚರಿ ಮೂಡಿಸಿದ ವಿದೇಶಿ ಮಹಿಳೆ
emiliainkerala ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕೇರಳದ ಮದುವೆಯಲ್ಲಿ ಭಾಗಿಯಾಗಿರುವ ಪೋಲಿಷ್ ಮಹಿಳೆಯೂ ಕೇರಳದ ಮಕ್ಕಳೊಂದಿಗೆ ಮಲಯಾಳಂ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ವಿದೇಶಿ ಮಹಿಳೆ ಮಲಯಾಳಂ ಮಾತನಾಡುವುದನ್ನು ನೋಡಿ ಮಕ್ಕಳು ಶಾಕ್ ಆಗಿರುವುದನ್ನು ನೀವಿಲ್ಲಿ ನೋಡಬಹುದು.
ಕೇರಳದ ಸಂಸ್ಕೃತಿಯನ್ನು ಅನ್ವೇಷಿಸುವ, ಅದರ ಸೌಂದರ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಪೋಲಿಷ್ ಹುಡುಗಿ ಎಂದು ಶೀರ್ಷಿಕೆಯಲ್ಲಿ ವಿವರಿಸುತ್ತಾ ಮದುವೆಯಲ್ಲಿ ಮಕ್ಕಳೊಂದಿಗೆ ಮಲಯಾಳಂನಲ್ಲಿ ಮಾತನಾಡುವ ಮೂಲಕ ಅವರನ್ನು ಅಚ್ಚರಿಗೊಳಿಸಲು ನಿರ್ಧರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊದಲು ಆಘಾತ, ನಂತರ ನಗು, ನಂತರ ಹಲವು ಪ್ರಶ್ನೆಗಳು. ಈ ಮಕ್ಕಳ ಮುಖದಲ್ಲಿನ ಭಾವನೆ ಅಮೂಲ್ಯವಾಗಿತ್ತು ಎಂದಿದ್ದಾರೆ.
ವಿದೇಶಿಯರಾಗಿ, ಇಂತಹ ಕ್ಷಣಗಳು ಭಾಷೆಯನ್ನು ಕಲಿಯಲು ಮುಂದಿನ ಪೀಳಿಗೆಯೊಂದಿಗೆ ತಮ್ಮದೇ ಆದ ಮಾತೃಭಾಷೆಯಲ್ಲಿ ಸಂಪರ್ಕ ಸಾಧಿಸುವುದನ್ನು ಅರ್ಥೈಸುತ್ತವೆ. ಈ ಮಕ್ಕಳಿಂದ ಬಂದ ಆತ್ಮೀಯ ಪ್ರತಿಕ್ರಿಯೆಯು ಯಾವುದೇ ತರಗತಿಯ ಪಾಠಕ್ಕಿಂತ ಹೆಚ್ಚಾಗಿ ತನಗೆ ಪ್ರೇರಣೆ ನೀಡಿತು. ಕೇರಳದ ಸಂಸ್ಕೃತಿಯ ನಿಜವಾದ ಭಾಗವೆಂದು ತಾನು ಭಾವಿಸುವಂತೆ ಮಾಡಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮಕ್ಕಳು ಯಾವುದೇ ತರಗತಿಗಿಂತ ಹೆಚ್ಚಿನ ಆತ್ಮವಿಶ್ವಾಸವನ್ನು ನನಗೆ ನೀಡಿದರು. ಅವರ ಮುಖದಲ್ಲಿದ್ದ ಸಂತೋಷವು ಪ್ರತಿದಿನ ಮಲಯಾಳಂ ಕಲಿಯುವುದನ್ನು ಮುಂದುವರಿಸಲು ಅತ್ಯುತ್ತಮ ಪ್ರೇರಣೆಯಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ:Video: ತನ್ನ ಕುಟುಂಬದೊಂದಿಗೆ ಅಮೆರಿಕಕ್ಕೆ ಮರಳುವ ಸಮಯ ಬಂತು, ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಹೀಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಒಳ್ಳೆಯ ಪ್ರಯತ್ನ ಎಂದಿದ್ದಾರೆ. ಇನ್ನೊಬ್ಬರು ಅದ್ಭುತವಾದ ಸಂಭಾಷಣೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ವಿದೇಶಿಗರು ನಮ್ಮ ಮಾತೃಭಾಷೆಯನ್ನು ಮಾತನಾಡುವುದನ್ನು ಕೇಳುವ ಖುಷಿಯೇ ಬೇರೆ. ಈ ವಿಡಿಯೋ ನೋಡಿ ನಿಜಕ್ಕೂ ಖುಷಿಯಾಗುತ್ತಿದೆ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ. ಇನ್ನು ಕೆಲವು ಬಳಕೆದಾರರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ