Video: ಅಂಡಮಾನ್ ಸೌಂದರ್ಯಕ್ಕೆ ಮನಸೋತ ಕೊರಿಯನ್ ಮಹಿಳೆ
ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇದೀಗ ತನ್ನ ಮಕ್ಕಳ ಜತೆಗೆ ಭಾರತದ ಏಳು ನಗರಗಳಿಗೆ ಪ್ರವಾಸ ಕೈಗೊಂಡ ಕೊರಿಯನ್ ಮಹಿಳೆ ಅಂಡಮಾನ್ ಸೌಂದರ್ಯಕ್ಕೆ ಮನಸೋತಿದ್ದಾರೆ. ಈ ದ್ವೀಪದ ಸೊಬಗನ್ನು ಕಣ್ತುಂಬಿಸಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಇಷ್ಟ ಪಟ್ಟು ಇಲ್ಲಿಗೆ ಭೇಟಿ ನೀಡುವ ವಿದೇಶಿಗರು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡ್ತಾರೆ. ಇದೀಗ ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ನೆಲೆಸಿರುವ ಕೊರಿಯನ್ ಮಹಿಳೆ ಅಂಡಮಾನ್ ದ್ವೀಪಕ್ಕೆ ಭೇಟಿ ನೀಡಿದ್ದು, ಇಲ್ಲಿನ ಸ್ವಚ್ಛಂದವಾಗಿ ಹರಿಯುವ ನೀರು, ಪ್ರಕೃತಿ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ. ವಿದೇಶಿ ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಡಮಾನ್ ಸೌಂದರ್ಯಕ್ಕೆ ವಿದೇಶಿ ಮಹಿಳೆ ಫಿದಾ
ಯಂಗ್ ಆಯ ಉಮ್ (Jung ae Um) ಎಂಬ ಕೊರಿಯನ್ ಮಹಿಳೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಭಾರತದ ಏಳು ನಗರಕ್ಕೆ ಭೇಟಿ ನೀಡಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಚೆನ್ನೈ, ಬೆಂಗಳೂರು, ದೆಹಲಿ, ಮುಂಬೈ, ಕೇರಳ, ಕೊಯಮತ್ತೂರು ಹಾಗೂ ಅಂಡಮಾನ್ಗೆ ಭೇಟಿ ನೀಡಿದ್ದಾರೆ. ಇಲ್ಲಿನ ತಾಣಗಳು, ಭಾಷೆ ಹಾಗೂ ಆಹಾರ ಪದ್ಧತಿಗಳು ಬಹಳಷ್ಟು ಭಿನ್ನವಾಗಿದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಸ್ಕೂಬಾ ಡೈವಿಂಗ್ ಅನುಭವ ಅತ್ಯದ್ಭುತ
ಪ್ರತಿಯೊಂದು ಕ್ಷಣವು ವಿಭಿನ್ನ ಅನುಭವ ನೀಡಿದೆ. ನಾನು ಭೇಟಿ ನೀಡಿದ ಸ್ಥಳಗಳ ಪೈಕಿ ಅಂಡಮಾನ್ ದ್ವೀಪ ನೆಚ್ಚಿನ ಜಾಗ ಇದು. ಇಲ್ಲಿ ಸಮಯ ಕಳೆದದ್ದು ನನ್ನ ಜೀವನದ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು. ಅಂಡಮಾನ್ ನ ಸ್ಕೂಬಾ ಡೈವಿಂಗ್ ಅನುಭವವು ಅದ್ಭುತವಾಗಿತ್ತು. ಇಲ್ಲಿನ ನೈಸರ್ಗಿಕ ಸೌಂದರ್ಯ ನಿಜಕ್ಕೂ ಮರೆಯಲಾಗಲಿಲ್ಲ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿ ಎಂದಿದ್ದಾರೆ. ಮತ್ತೊಬ್ಬರು, ನೀವೊಮ್ಮೆ ನಾಗಲ್ಯಾಂಡ್ ಗೆ ಬನ್ನಿ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ನೀವು ಭಾರತದ ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Fri, 16 October 26




