
ಆಫೀಸಿಗೆ ಹೋಗಿ ಯಾರ್ ಕೆಲ್ಸ ಮಾಡ್ತಾರೆ, ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವ ಮೈಂಡ್ ಸೆಟ್ ಬಹುತೇಕರಲ್ಲಿದೆ. ಕೋವಿಡ್ ಸಮಯಕ್ಕೆ ಹೋಲಿಸಿದ್ರೆ ವರ್ಕ್ ಫ್ರಮ್ ಹೋಮ್ ಆಪ್ಷನ್ ಇರೋದು ಕಡಿಮೆಯೇ. ಮನೆಯಲ್ಲೇ ಕುಳಿತು ಕೆಲಸ ಮಾಡಬಹುದಾದ ಕಾರಣ ಕಂಪನಿ ಕೆಲಸದೊಂದಿಗೆ ಮನೆ ಮಕ್ಕಳನ್ನು ಕೂಡ ಮ್ಯಾನೇಜ್ ಮಾಡಬಹುದು. ನೀವೇನಾದ್ರೂ ವರ್ಕ್ ಫ್ರಮ್ ಹೋಮ್ ಕೆಲಸದಲ್ಲಿದ್ದು, ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಸ್ವಲ್ಪ ಹುಷಾರಾಗಿ ಇರೋದು ಒಳ್ಳೆಯದು. ನೀವು ಮಾಡುವ ಕೆಲಸ ಹಾಗೂ ನಿಮ್ಮ ಹಾವಭಾವ ಎಷ್ಟು ಗಮನಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಇಲ್ಲೊಬ್ಬ ಪುಟ್ಟ ಬಾಲಕನು (little boy) ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರ ಹಾವಭಾವ, ನಡವಳಿಕೆ ಹಾಗೂ ಬಾಸ್ ಜೊತೆಗೆ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸಿದ್ದು, ಅದೇ ರೀತಿ ಅನುಕರಣೆ ಮಾಡಿ ತೋರಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೆತ್ತವರನ್ನೇ ಅನುಕರಣೆ ಮಾಡಿದ ಪುಟ್ಟ ಬಾಲಕ
vihaan.vibez ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಪುಟ್ಟ ಹುಡುಗನು ಲ್ಯಾಪ್ ಟಾಪ್ ಮುಂದೆ ಕುಳಿತುಕೊಂಡಿದ್ದಾನೆ. ಬಾಲಕ ಐಮ್ ಆಡಿಬಲ್ ಎಂದು ಕೇಳುತ್ತಾನೆ. ಆ ಬಳಿಕ ನಾನು ನನ್ನ ಕಂಪ್ಯೂಟರ್ ಸ್ಕ್ರೀನನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಕೊನೆಗೆ ಹಲೋ ಅಮರ್ ತೊಂದರೆ ಏನು ನಾನು ಚೆಕ್ ಮಾಡುತ್ತೇನೆ ಎಂದಿದ್ದಾನೆ. ನನಗೊಂದು ಕಾಫಿ ತಗೊಂಡು ಬಾ ನನ್ನ ತಲೆ ಓಡ್ತಾ ಇಲ್ಲ ಎನ್ನುವುದನ್ನು ನೋಡಬಹುದು. ಈ ಬಾಲಕನು ತನ್ನ ಅಪ್ಪನ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದನ್ನು ನೋಡಿರಬೇಕು, ಅವರನ್ನೇ ಅನುಕರಣೆ ಮಾಡಿದ್ದಂತಿದೆ ಈ ವಿಡಿಯೋ.
ಇದನ್ನೂ ಓದಿ: Video: ಭಯ ಅನ್ನೋ ಮಾತೇ ಇಲ್ಲ; ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಈ ವಿಡಿಯೋ 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ನೀವು ಹೇಳೋದು ನನಗೆ ಕೇಳಿಸುತ್ತಿಲ್ಲ, ಒಮ್ಮೆ ಮೈಕ್ ಚೆಕ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಎಷ್ಟು ಚೂಟಿ ಇದ್ದಾನೆ ನೋಡಿ ಈ ಪುಟಾಣಿ, ಇವನು ಮ್ಯಾನೇಜರ್ ಆಗೋದು ಗ್ಯಾರಂಟಿ ಎಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಸಂಸ್ಥೆಗೆ ಹತ್ತು ವರ್ಷ ಅನುಭವ ಇರುವ ಫ್ರೆಶರ್ ಗಳು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ನನ್ನ ಮಗನು ಕೂಡ ಇದೇ ರೀತಿ ಅನುಕರಣೆ ಮಾಡುತ್ತಾನೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ