Viral : ಲಾಕ್ ಡೌನ್​​​, ರಾಮಮಂದಿರ, ಕುಂಭಮೇಳ, ಯುದ್ಧ, ಕೊನೆಗೆ ಆರ್​​ಸಿಬಿ ಕಪ್​​​​, ನಮ್ಮ ಜನ್ಮವೇ ಸಾರ್ಥಕ

ಕೆಲವು ವಿಷಯಗಳಲ್ಲಿ ನಮ್ಮ ಜನರೇಷನ್ ನಿಜಕ್ಕೂ ಲಕ್ಕಿ ಎಂದೇನಿಸುತ್ತದೆ. ಯಾಕಪ್ಪಾ ಲಕ್ಕಿ ಅಂತೀರಾ,ಈ ಜೀವನವೇ ಸಾಕಾಗಿ ಹೋಗಿದೆ ಎಂದು ಮನಸ್ಸಿನಲ್ಲಿ ನೀವು ಅಂದುಕೊಳ್ಳಬಹುದು. ಆದರೆ ನಿಜಕ್ಕೂ ನಮ್ಮ ಜನರೇಷನ್ ಲಕ್ಕಿ ಎನ್ನಲು ಕಾರಣಗಳು ಹಲವಾರಿದೆ. ಹೌದು, ಲಾಕ್ ಡೌನ್​​​, ರಾಮಮಂದಿರ, ಕುಂಭಮೇಳ, ಯುದ್ಧ, ಕೊನೆಗೆ ಆರ್‌ಸಿಬಿ ಕಪ್​​​​ ಎಲ್ಲವನ್ನು ನಮ್ಮ ಜನರೇಷನ್ ಕಂಡಿದೆ ಎನ್ನುವ ಪೋಸ್ಟ್‌ವೊಂದು ವೈರಲ್ ಆಗಿದ್ದು, ಇದಕ್ಕೆ ಬಳಕೆದಾರರು ನೂರಕ್ಕೆ ನೂರರಷ್ಟು ಈ ಮಾತು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.

Viral : ಲಾಕ್ ಡೌನ್​​​, ರಾಮಮಂದಿರ, ಕುಂಭಮೇಳ, ಯುದ್ಧ, ಕೊನೆಗೆ ಆರ್​​ಸಿಬಿ ಕಪ್​​​​, ನಮ್ಮ ಜನ್ಮವೇ ಸಾರ್ಥಕ
ವೈರಲ್ ಪೋಸ್ಟ್
Updated By: ಸಾಯಿನಂದಾ

Updated on: Jun 04, 2025 | 2:14 PM

ಬದುಕಿನಲ್ಲಿ ಸಾರ್ಥಕ ಕ್ಷಣ ಯಾವುದು ಅಂತ ಕೇಳಿದ್ರೆ ಜೀವನದಲ್ಲಿ ಯಶಸ್ಸು ಕಂಡಿದ್ದು, ಒಂದಿಷ್ಟು ಹಣ ಸಂಪಾದಿಸಿಕೊಂಡಿದ್ದು ಹಾಗೂ ಲೈಫ್ ಸೆಟ್ಲ್ (life settle) ಆದದ್ದು ಎಂದು ಹೇಳುತ್ತೇವೆ. ಕೆಲವರಂತೂ ನಾನು ದುರದೃಷ್ಟವಂತ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ವೈಯುಕ್ತಿಕ ಬದುಕು ಹೇಗೆಯೇ ಇರಲಿ, ಇವೆಲ್ಲದರ ಹೊರತಾಗಿ ಜೀವನದಲ್ಲಿ ನಮ್ಮ ಜನರೇಷನ್ ಲಕ್ಕಿ (lucky generation) ಎಂದು ಹೇಳಲು ಈ ಕೆಲವು ಕಾರಣಗಳು ಕೂಡ ಸೇರಿವೆಯಂತೆ. ಹೌದು ನಮ್ಮ ಜನರೇಷನ್‌ನವರು ಲಾಕ್ ಡೌನ್, ರಾಮಮಂದಿರ, ಕುಂಭಮೇಳ, ಭಾರತ ಪಾಕಿಸ್ತಾನ ಯುದ್ಧ, ಕೊನೆಗೆ ಆರ್‌ಸಿಬಿ ಕಪ್​​​​ ಜೀವನದಲ್ಲಿ ಯಾರು ನೋಡಲಾಗದ ನೋವು ಹಾಗೂ ಸಂತೋಷದ ಕ್ಷಣಗಳನ್ನು ನಾವು ನೋಡಿದ್ದೇವೆ. ಈ ಕುರಿತಾದ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಪೋಸ್ಟ್ ನಲ್ಲಿ ಏನಿದೆ?

naveengowda ಹೆಸರಿನ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ, ಈ ಇದರಲ್ಲಿ ಕೋವಿಡ್, ಲಾಕ್ ಡೌನ್, ರಾಮ ಮಂದಿರ, ಕುಂಭಮೇಳ, ಭಾರತ ಪಾಕಿಸ್ತಾನ ಯುದ್ಧ, ಕೊನೆಗೆ ನಮ್ಮದೇ ಆರ್ ಸಿಬಿ ಕಪ್, ಇವೆಲ್ಲಾ ನೋಡಿದ ನಮ್ಮ ಜನ್ಮ ಸಾರ್ಥಕ ಎಂದು ಬರೆದಿರುವುದನ್ನು ನೋಡಬಹುದು. ಕೊರೊನಾ, ರಾಮ ಮಂದಿರ, ಕುಂಭಮೇಳ ಹಾಗೂ ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದ ಫೋಟೋಗಳನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಗೆ ತಂದವರು ಗಣೇಶ್ ಬೀಡಿ ಕಂಪನಿಯಂತೆ
ಮಳೆ ಸುರಿದು ಒದ್ದೆಯಾಗಿದ್ರೂ ಗಡದ್ದಾಗಿ ಊಟ ಮಾಡಿದ ಪುಣ್ಯಾತ್ಮ
ವರ್ಷಗಳು ಉರುಳಿದರೂ ಇದರ ವಿನ್ಯಾಸ, ಆಕಾರ ಬದಲಾಗಿಲ್ಲ
ತಾತನ ಜತೆಗೆ ಮೊಮ್ಮಗಳ ಸಖತ್​​​​​ ಡ್ಯಾನ್ಸ್

ಇದನ್ನೂ ಓದಿ : ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲಿ ಲಿಪ್ ಟು ಲಿಪ್ ಕಿಸ್ ಮಾಡಿದ ಪ್ರೇಮಿಗಳು

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ವೊಂದು ಹದಿನೈದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ನಾವು ನಿಜಕ್ಕೂ ಅದೃಷ್ವವಂತರು ಎನ್ನುವ ಮೂಲಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಇನ್ನೂ ಜೀವನದಲ್ಲಿ ಗೆದ್ದರೆ ಸಾಕು ಪ್ರತಿಯೊಬ್ಬ ಜನರು. ಸರ್ವೇಜನಃ ಸುಖಿನೋ ಭವಂತೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನೋಟ್ ಬ್ಯಾನ್ ಅದು ಕೂಡ ನೋಡಿದ್ದೇವೆ, ಸಾರ್ಥಕ ಆಯಿತು ಈ ಜನ್ಮ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ನಮ್ಮ ಜನ್ಮ ಪಾವನವಯ್ಯ ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ