ಇನ್‌ಸ್ಟಾಗ್ರಾಮ್​​ನಲ್ಲಿ ಹಾಯ್​​​ಯಿಂದ ಪ್ರಾರಂಭವಾದ ಪ್ರೀತಿ, ಅಮೆರಿಕದ​​​​ ಹುಡುಗಿಯನ್ನು ವರಿಸಿದ ಆಂಧ್ರ ಹುಡುಗ

ಇದು ದೇಸಿ- ವಿದೇಶಿ ಪ್ರೇಮಿಗಳ ಕಥೆ, ಇವರ ಪ್ರೇಮಕಥೆಯೇ ವಿಚಿತ್ರ, ಒಂದು ಹಾಯ್​​ಯಿಂದ ಪ್ರಾರಂಭವಾದ ಪ್ರೀತಿ ಇಂದು ಮದುವೆಯವರೆಗೆ ಬಂದು ನಿಂತಿದೆ. ಇವರದ್ದು ಸೋಶಿಯಲ್​​ ಮೀಡಿಯಾ ಪ್ರೀತಿ. ಅಮೆರಿಕದ ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ ಅವರು ಚಂದನ್ ಅವರನ್ನು ಮೊದಲು ಪರಿಚಯ ಮಾಡಿಕೊಂಡಿದ್ದು ಇನ್‌ಸ್ಟಾಗ್ರಾಮ್​​ನಲ್ಲಿ, ಜಾಕ್ಲಿನ್ ಫೊರೆರೊ ಚಂದನ್ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಇಷ್ಟಪಟ್ಟು ಪ್ರೀತಿ ಮಾಡಲು ಶುರು ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಖತ್​​ ವೈರಲ್​ ಆಗುತ್ತಿದೆ.

ಇನ್‌ಸ್ಟಾಗ್ರಾಮ್​​ನಲ್ಲಿ ಹಾಯ್​​​ಯಿಂದ ಪ್ರಾರಂಭವಾದ ಪ್ರೀತಿ, ಅಮೆರಿಕದ​​​​ ಹುಡುಗಿಯನ್ನು ವರಿಸಿದ ಆಂಧ್ರ ಹುಡುಗ
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 09, 2025 | 5:49 PM

ಪ್ರೀತಿ ಅಂದರೆ ಹಾಗೆ ಯಾರನ್ನೂ ಬೇಕಾದರೂ ಮನಿಸುತ್ತದೆ. ಪ್ರೀತಿಯ ಮುಂದೆ ಭಾಷೆ, ಜಾತಿ, ಧರ್ಮ, ದೇಶ ಎಂಬುದು ಬರುವುದಿಲ್ಲ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ಇದಕ್ಕೆ, ಇಂತಹದೇ ಒಂದು ಅಪರೂಪದ ಪ್ರೇಮ ಪುರಾಣವೊಂದು ನಡೆದಿದೆ. ಇದನ್ನು ಒಂದು ರೀತಿಯಲ್ಲಿ ಗಡಿದಾಟಿದ ಪ್ರೀತಿ ಎಂದು ಹೇಳಬಹುದು. ಆಕೆ ಅಮೆರಿಕದ​​​​ ಹುಡುಗಿ, ಇವನು ಆಂಧ್ರಪ್ರದೇಶ ಹುಡುಗ, ಒಂದು ಹಾಯ್​​​ಯಿಂದ ಪ್ರಾರಂಭವಾದ ಈ ಪ್ರೀತಿ ಇಂದು ಅವರನ್ನು ದಂಪತಿಯಾಗಲು ಮುನ್ನುಡಿ ಹಾಡಿದೆ. ಸಾವಿರಾರು ಮೈಲುಗಳಿಂದ ಆಂಧ್ರಕ್ಕೆ ಬಂದು ಆತನನ್ನು ಭೇಟಿಯಾಗಿದ್ದಾಳೆ. ಇವರದ್ದು ಸೋಶಿಯಲ್​​ ಮೀಡಿಯಾ ಪ್ರೀತಿ. ಅಮೆರಿಕದ ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ (Jacqueline Forero) ಅವರು ಚಂದನ್ ಅವರನ್ನು ಮೊದಲು ಪರಿಚಯ ಮಾಡಿಕೊಂಡಿದ್ದು ಇನ್‌ಸ್ಟಾಗ್ರಾಮ್​​ನಲ್ಲಿ, ಜಾಕ್ಲಿನ್ ಫೊರೆರೊ ಚಂದನ್ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಇಷ್ಟಪಟ್ಟು ಪ್ರೀತಿ ಮಾಡಲು ಶುರು ಮಾಡಿದ್ದಾರೆ. ಆತನ ಸರಳತೆಯನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

ಹೀಗೆ ಹಾಯ್​​ ಎಂಬ ಒಂದು ಸಂದೇಶದಿಂದ ಶುರುವಾದ ಮಾತು, 14 ತಿಂಗಳುಗಳ ಕಾಲ ಮುಂದುವರಿದೆ. ಇದೀಗ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಶ್ರೀಮತಿ ಫೊರೆರೊ ಎಂದು ಬರೆದಿದ್ದಾರೆ, “14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ತಮ್ಮ 14 ತಿಂಗಳ ಸ್ನೇಹದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ 45 ಸೆಕೆಂಡುಗಳ ಕ್ಲಿಪ್‌ನಲ್ಲಿ ಅವರು ಒಟ್ಟಿಗೆ ಕಳೆದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಜಾಕ್ಲಿನ್ ಫೊರೆರೊ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. “ನಾನು ಮೊದಲು ಚಂದನ್‌ಗೆ ಸಂದೇಶ ಕಳುಹಿಸಿದೆ. ಅವರ ದೇವಶಾಸ್ತ್ರದ ಬಗ್ಗೆ ಅಥವಾ ಆಧ್ಯಾತ್ಮಕತೆಯ ಬಗ್ಗೆ ಇರುವ ಒಲವು ತುಂಬಾ ಇಷ್ಟವಾಯಿತು. ಸಂಗೀತ, ಕಲೆ ಮತ್ತು ಛಾಯಾಗ್ರಹಣದೊಂದಿಗೆ 8 ತಿಂಗಳ ಸ್ನೇಹದ ಬಳಿಕ ನನ್ನ ಅಮ್ಮನ ಒಪ್ಪಿಗೆ ಪಡೆದು ಅವರ ಜತೆಗೆ ಜೀವನ ಕಳೆಯಬೇಕು” ಎಂಬ ಮನಸ್ಸಾಗಿದೆ ಎಂದು ಬರದುಕೊಂಡಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ನಮ್ಮ ಸಂಬಂಧದ ಬಗ್ಗೆ ಜನರು ಅವರಿಗೆ ಬೇಕಾದಂತೆ ಮಾತನಾಡಿಕೊಂಡರು ನಾವು ಅದಕ್ಕೆ ಹೆಚ್ಚು ಪ್ರಮುಖ್ಯತೆ ನೀಡಲು ಹೋಗಿಲ್ಲ. ನಮ್ಮ ವಯಸ್ಸಿನ ಬಗ್ಗೆಯೂ ಮಾತನಾಡಿದ್ದಾರೆ. ಅದಕ್ಕೂ ಕೇರ್​ ಮಾಡಿಲ್ಲ. ನಮ್ಮ ನಡುವಿನ ಸಂಬಂಧದ ಬಗ್ಗೆ ಯಾವುದೇ ಸಂಶಯವಿಲ್ಲ. ನಾವಿಬ್ಬರು ಒಪ್ಪಿಕೊಂಡಿದ್ದೇವೆ. ನಮಗೆ ಯಾವುದು ಒತ್ತಡ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, “9 ವರ್ಷಗಳು ಏನೂ ಅಲ್ಲ. ನನ್ನ ಗಂಡ ಮತ್ತು ನಾನು 10 ವಯಸ್ಸಿನ ವ್ಯತ್ಯಾಸ. ಇದರಲ್ಲಿ ನಿಕಾರಿಸುವುದು ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನೀವಿಬ್ಬರೂ ಭಗವಂತನಿಗೆ ಇಷ್ಟವಾಗಿದ್ದೀರಾ ಅದಕ್ಕೆ ನಿಮ್ಮನ್ನು ಜೊತೆಯಾಗಿಸಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳ ಹುಚ್ಚಾಟ, ಇಲ್ಲಿದೆ ವಿಡಿಯೋ

ಮತ್ತೊಬ್ಬರು, “ನೀವಿಬ್ಬರೂ ಒಟ್ಟಿಗೆ ಅದ್ಭುತವಾಗಿ ಕಾಣುತ್ತೀರಿ” ಎಂದು ಬರೆದಿದ್ದಾರೆ. ಏಳು ತಿಂಗಳ ನಂತರ, ನಾನು ಅವರನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದೇನೆ. 3 1/2 ವರ್ಷಗಳ ಹಿಂದೆ, ಮತ್ತು ಅವರು ಕಳೆದ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಬಂದರು! ಇದು ಒಂದು ಹುಚ್ಚು ಪ್ರಯಾಣ ಆದರೆ ಅದು ತುಂಬಾ ಯೋಗ್ಯವಾಗಿದೆ ಎಂದು ಮತ್ತೊಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಬಳಕೆದಾರ ನಾನು ಮತ್ತು ನನ್ನ ಪತ್ನಿ ಇಬ್ಬರು ಬೇರೆ ಬೇರೆ ದೇಶದವರು, ನಾವು ಆನ್‌ಲೈನ್‌ನಲ್ಲಿ ಭೇಟಿಯಾದೆವು, ಪ್ಯಾರಿಸ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು. ಒಂದು ವರ್ಷದ ನಂತರ ವಿವಾಹವಾದರು ಆದ್ದರಿಂದ ನಾವು ಒಟ್ಟಿಗೆ ಇರಲು ಸಾಧ್ಯವಾಯಿತು. ಈಗಾಗಲೇ 9 ವರ್ಷಗಳಾಗಿವೆ. ನಮ್ಮ ರೀತಿಯೇ ನಿಮ್ಮ ಪ್ರೇಮ ಕಥೆ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ