ಭಾರತೀಯ ರೈಲ್ವೆ ಆರಾಮದಾಯಕ ಮತ್ತು ಬಜೆಟ್ ಫ್ರೆಂಡ್ಲಿ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನವರು ಆರಾಮದಾಯಕ ಪ್ರಯಾಣಕ್ಕಾಗಿ ರೈಲ್ವೆಯನ್ನೇ ಅವಲಂಬಿಸಿದ್ದಾರೆ. ಇಂತಹ ಭಾರತೀಯ ರೈಲ್ವೆ ಪ್ಯಾಸೆಂಜರ್ ಮಾತ್ರವಲ್ಲದೆ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಮಹಾರಾಜ ಎಕ್ಸ್‌ಪ್ರೆಸ್ ಎಂಬ ಐಷಾರಾಮಿ ರೈಲು ಸೇವೆಯೂ ನಮ್ಮ ಭಾರತದಲ್ಲಿದ್ದು, ಇದು ಏಷ್ಯಾದಲ್ಲೇ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಟ್ರೈನ್ ಎಂಬ ಖ್ಯಾತಿ ಪಡೆದಿದೆ. ಈ ಒಂದು ಟ್ರೈನ್ ಟಿಕೆಟ್ ದರ ಎಷ್ಟು, ಇದರಲ್ಲಿ ಏನೆಲ್ಲಾ ಸೌಲಭ್ಯಗಳಿದೆ ಎಂಬುದನ್ನು ನೋಡೋಣ ಬನ್ನಿ.
ಮಹಾರಾಜಾ ಎಕ್ಸ್‌ಪ್ರೆಸ್ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲೇ ಅತ್ಯಂತ ದುಬಾರಿ ಐಷಾರಾಮಿ ರೈಲು ಎಂಬ ಖ್ಯಾತಿ ಪಡೆದಿದೆ. ಈ ರೈಲು ಸೇವೆಯನ್ನು 2010 ರಲ್ಲಿ ಪ್ರಾರಂಭಿಸಲಾಯಿತು. ಇದರಲ್ಲಿ ಪ್ರಯಾಣಿಕರಿಗೆ 5 ಸ್ಟಾರ್ ಸೇವೆಯನ್ನು ನೀಡಲಾಗುತ್ತದೆ. ಹೌದು ಈ ರೈಲಿನಲ್ಲಿ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಸಿಗುತ್ತವೆ.
ಮಹಾರಾಜ ರೈಲಿನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ರೈಲಿನ ಪ್ರತಿಯೊಂದು ಕೋಚ್‌ಗೆ ದೊಡ್ಡ ಕಿಟಕಿಗಳು, ಕಾಂಪ್ಲಿಮೆಂಟರಿ ಮಿನಿ ಬಾರ್, ಎಸಿ, ವೈಫೈ, ಲೈವ್ ಟಿವಿ, ಡಿವಿಡಿ ಪ್ಲೇಯರ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಮಹಾರಾಜ ಎಕ್ಸ್‌ಪ್ರೆಸ್ ದಿ ಹೆರಿಟೇಜ್ ಆಫ್ ಇಂಡಿಯಾ, ದಿ ಟ್ರೆಷರ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಪನೋರಮಾ ಮತ್ತು ದಿ ಇಂಡಿಯನ್ ಸ್ಪ್ಲೆಂಡರ್ ಹೆಸರಿನ ನಾಲ್ಕು ವಿಭಿನ್ನ ಪ್ರವಾಸಗಳನ್ನು ಒದಗಿಸುತ್ತದೆ. ಈ ಟ್ರೈನ್ ಟಿಕೆಟ್ ದರ 5 ಲಕ್ಷದಿಂದ 20 ಲಕ್ಷ ರೂ. ಗಳವರೆಗೆ ಇದೆ.
ಮಹಾರಾಜ ಎಕ್ಸ್‌ಪ್ರೆಸ್ ನಾಲ್ಕು ವಿಭಿನ್ನ ರೀತಿಯ ಕೋಚ್‌ಗಳನ್ನು ಹೊಂದಿದೆ, ಇದರಲ್ಲಿ ಡಿಲಕ್ಸ್ ಕ್ಯಾಬಿನ್ ಸೂಟ್, ಜೂನಿಯರ್ ಸೂಟ್ ಮತ್ತು ಪ್ರೆಸಿಡೆನ್ಶಿಯಲ್ ಸೂಟ್ ಸೇರಿವೆ. ಈ ರೈಲಿನಲ್ಲಿ ಎರಡು ರೀತಿಯ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ. ಒಂದು 3 ರಾತ್ರಿ ಮತ್ತು 4 ಹಗಲುಗಳ ಪ್ರಯಾಣ ಮತ್ತು ಇನ್ನೊಂದು 6 ರಾತ್ರಿ ಮತ್ತು 7 ಹಗಲುಗಳ ಪ್ರಯಾಣ. ಈ ಎಲ್ಲದಕ್ಕೂ ವಿಭಿನ್ನ ದರಗಳನ್ನು ನಿಗದಿಪಡಿಸಲಾಗಿದೆ.
ಮಹಾರಾಜ ಎಕ್ಸ್‌ಪ್ರೆಸ್ ಭಾರತದ ಐಷಾರಾಮಿ ಮತ್ತು ದುಬಾರಿ ರೈಲುಗಳಲ್ಲಿ ಒಂದಾಗಿದೆ. ಈ ರೈಲಿನಲ್ಲಿ ಕೇವಲ 88 ಪ್ರಯಾಣಿಕರು ಮಾತ್ರ 12 ಕೋಚ್‌ಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳಬಹುದು. ಈ ರೈಲು ದೆಹಲಿಯಿಂದ ರಾಜಸ್ಥಾನಕ್ಕೆ ವಿವಿಧ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಇದು ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದು, ಈ ರೈಲು ಪ್ರಯಾಣಿಕರನ್ನು ತಾಜ್ ಮಹಲ್, ಖಜುರಾಹೊ ದೇವಸ್ಥಾನ, ರಣಥಂಬೋರ್ ಮತ್ತು ವಾರಣಾಸಿಯ ಸ್ನಾನ ಘಾಟ್‌ಗಳಿಗೆ ತನ್ನ 8 ದಿನದ ಪ್ರಯಾಣದಲ್ಲಿ ದೇಶದ ಅನೇಕ ವಿಶೇಷ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ಟ್ರೈನ್‌ನ ಅಗ್ಗದ ಡಿಲಕ್ಸ್ ಕ್ಯಾಬಿನ್‌ನ ದರವು ರೂ 65,694 ರಿಂದ ಪ್ರಾರಂಭವಾಗುತ್ತದೆ. ಪ್ರೆಸಿಡೆನ್ಷಿಯಲ್ ಸೂಟ್‌ನ ಅತ್ಯಂತ ದುಬಾರಿ ಟಿಕೆಟ್ 19 ಲಕ್ಷ ರೂ. ಒಟ್ಟಾರೆ ಈ ರೈಲಿನ ಟಿಕೆಟ್ ದರ 5 ಲಕ್ಷದಿಂದ ಆರಂಭವಾಗಿ 20 ಲಕ್ಷದ ವರೆಗೂ ಇದೆ.
ಇದನ್ನೂ ಓದಿ: ಚಲಿಸುತ್ತಿರುವ ಥಾರ್‌ನಿಂದ ದೊಪ್ಪನೆ ಕೆಳಗೆ ಬಿದ್ದ ವಿದ್ಯಾರ್ಥಿಗಳು; ಮುಂದೇನಾಯ್ತು ನೋಡಿ
ಏಷ್ಯಾದ ಅತ್ಯಂತ ದುಬಾರಿ ರೈಲನ್ನು IRCTC ಅಂದರೆ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ನಿರ್ವಹಿಸುತ್ತದೆ. ಇದರ ಸೌಲಭ್ಯಗಳ ಬಗ್ಗೆ ಮಾತನಾಡುವುದಾದರೆ, ಈ ರೈಲಿನ ಪ್ರೆಸಿಡೆನ್ಸಿಯಲ್ ಸೂಟ್ ಊಟದ ಸ್ಥಳ, ಸ್ನಾನಗೃಹ ಮತ್ತು ಎರಡು ಮಾಸ್ಟರ್ ಬೆಡ್ ರೂಮ್‌ಗಳನ್ನು ಹೊಂದಿದೆ. ಅಲ್ಲದೆ ಈ ರೈಲಿನ ಪ್ರತಿಯೊಂದು ಕೋಚ್‌ನಲ್ಲಿಯೂ ಮಿನಿ ಬಾರ್, ಲೈವ್ ಟಿವಿ, ಎಸಿ, ದೊಡ್ಡ ಕಿಟಕಿಗಳಿವೆ ಹಾಗೂ ಇನ್ನೂ ಹಲವು ಹಲವು ಐಷಾರಾಮಿ ಸೌಲಭ್ಯಗಳು ಲಭ್ಯವಿವೆ. ಒಟ್ಟಾರೆ ಈ ರೈಲಿನಲ್ಲಿ ಪ್ರಯಾಣಿಸುವವರಿಗೆ ರಾಜಾತಿಥ್ಯ ನೀಡಲಾಗುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ