ಮಹಾರಾಷ್ಟ್ರ, ಜೂನ್ 18: ಚಿನ್ನದ ಬೆಲೆ (gold rate) ಗಗನಕ್ಕೆ ಏರುತ್ತಿದೆ, ಹೀಗಾಗಿ ಆಭರಣವನ್ನು ದೂರದಿಂದ ನೋಡಿಯೇ ಖುಷಿ ಪಡಬೇಕು. ಈಗಿನ ಕಾಲದಲ್ಲಿ ಆಭರಣ ಖರೀದಿ ಮಾಡುವುದೆಂದರೆ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಕನಸೇ ಸರಿ. ಆಭರಣ ಎಷ್ಟೇ ದುಬಾರಿಯಾಗಿರಲಿ ಈ ಹೆಣ್ಣು ಮಕ್ಕಳು ತಮ್ಮ ಪತಿ ಉಡುಗೊರೆಯಾಗಿ ಆಭರಣ ನೀಡಿದರೆ ಖುಷಿ ಪಡುತ್ತಾರೆ. ವೃದ್ಧ ವ್ಯಕ್ತಿಯೊಬ್ಬನು ತನ್ನ ಪತ್ನಿಗೆ ಮಂಗಳಸೂತ್ರ ಕೊಡಿಸಲು ಆಭರಣದ ಅಂಗಡಿಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಅಂಗಡಿ ಮಾಲೀಕನು ಈ ದಂಪತಿಯ ಕಷ್ಟವನ್ನು ಅರಿತು ಇವರಿಂದ 20 ರೂಪಾಯಿ ಸ್ವೀಕರಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ಘಟನೆಯೂ ಮಹಾರಾಷ್ಟ್ರದ ಸಂಭಾಜಿನಗರ (Sambhajinagar of Maharashtra) ದ ಗೋಪಿಕಾ ಜ್ಯುವೆಲ್ಲರ್ಸ್ (Gopika Jewellers)ನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.
@VarlinPanwar ಹೆಸರಿನ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ಇದು ನನ್ನ ದಿನವನ್ನು ಇನ್ನಷ್ಟು ಸುಂದರವಾಗಿಸಿತು. ಮಹಾರಾಷ್ಟ್ರದ ತೀರ್ಥಯಾತ್ರೆಯ ಸ್ಥಳವಾದ ಪಂಢರಪುರಕ್ಕೆ ಹೋಗುವ ದಾರಿಯಲ್ಲಿ ವೃದ್ಧ ದಂಪತಿಗಳು ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ಆಭರಣ ಖರೀದಿಸಲು ಚಿನ್ನದಂಗಡಿಗೆ ಅಂಗಡಿಗೆ ಹೋಗಿದ್ದಾರೆ. ಅಂಗಡಿ ಮಾಲೀಕರು ಅವರಿಗೆ ಸಹಾಯ ಮಾಡಿದ ರೀತಿ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ನೀವು ಮಾಡುವ ಒಳ್ಳೆಯ ಕೆಲಸವು ಯಾವಾಗಲೂ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಹಾಗೂ ನಿಮಗೆ ಯಶಸ್ಸನ್ನು ತರುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ 93 ವರ್ಷದ ವೃದ್ಧನು ಆಭರಣ ಖರೀದಿಸಲು ತನ್ನ ಮಡದಿಯೊಂದಿಗೆ ಆಭರಣದ ಅಂಗಡಿಗೆ ಬಂದಿದ್ದಾನೆ. ಅವರು ತೊಟ್ಟ ಉಡುಗೆಯೇ ಅವರ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದನ್ನು ಸೂಚಿಸುತ್ತದೆ. ಅಂಗಡಿಗೆ ಬಂದ ಈ ವೃದ್ಧ ದಂಪತಿಗಳು ಹಾರ ಮತ್ತು ಮಂಗಳಸೂತ್ರವನ್ನು ಖರೀದಿಸಲು ಮುಂದಾಗುತ್ತಾರೆ. ಇವರಿಬ್ಬರ ಪ್ರೀತಿ ಬಾಂಧವ್ಯವನ್ನು ನೋಡಿದ ಚಿನ್ನದ ಅಂಗಡಿ ಮಾಲೀಕನು ಅವರೊಂದಿಗೆ ಸಂಭಾಷಣೆಗೆ ಇಳಿದಿದ್ದಾನೆ. ಈ ವೇಳೆಯಲ್ಲಿ ನಿಮ್ಮ ಬಳಿ ಹಣ ಎಷ್ಟಿದೆ ಎಂದು ಕೇಳಿದ್ದು, ವೃದ್ಧ ಮಹಿಳೆ 1,120 ರೂ. ಹಣವನ್ನು ತೋರಿಸುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : Video: ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ, ಇದೇ ನೋಡಿ ನಿಜವಾದ ಸಂಸ್ಕಾರ
ಅವರ ಆರ್ಥಿಕ ಸ್ಥಿತಿ ಹಾಗೂ ಕಷ್ಟವನ್ನು ಅರಿತ ಅಂಗಡಿ ಮಾಲೀಕನು “ಇಷ್ಟು ಹಣ?” ಎಂದಿದ್ದಾನೆ. ಆ ವ್ಯಕ್ತಿಯ ಮಾತಿನ ದಾಟಿಯನ್ನು ಅರಿತ ವೃದ್ಧ ಚೀಲಕ್ಕೆ ಕೈ ಹಾಕಿ ನಾಣ್ಯ ತುಂಬಿದ ಗಂಟನು ತೆಗೆದುಕೊಡುತ್ತಾನೆ. ಈ ವೇಳೆಯಲ್ಲಿ ಅಂಗಡಿ ಮಾಲೀಕನು ವೃದ್ಧ ಮಹಿಳೆಯೂ ನೀಡಿದ ಹಣವನ್ನು ಆಕೆಗೆ ಹಿಂದಿರುಗಿಸಿ, ಇದು ಪ್ರೀತಿಯ ಉಡುಗೊರೆ ಎಂದು ಹೇಳಿ ಈ ಆಭರಣಕ್ಕೆ ತಲಾ 20 ರೂ ಹಾಗೂ 10 ರೂ ಮಾತ್ರ ವಿಧಿಸಿರುವುದಾಗಿ ಹೇಳಿರುವುದನ್ನು ನೋಡಬಹುದು. ಹೀಗೆನ್ನುತ್ತಿದ್ದಂತೆ ಈ ವೃದ್ಧ ದಂಪತಿಗಳು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
This just made my day.
An elderly couple on the way to Pandharpur, a pilgrimage site in Maharasthra, visits a jewellery store to buy some jewels with their meagre savings.
How the shop owner helped them was simply heart-touching. Good Karma will always take you higher in life… pic.twitter.com/WkINsZE9JD— Sqn Ldr Varlin Panwar (Retd) (@VarlinPanwar) June 16, 2025
ಜೂನ್ 16 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಅಂಗಡಿ ಮಾಲೀಕನ ಒಳ್ಳೆಯತನವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಈ ಜಗತ್ತಿನಲ್ಲಿ ಇಷ್ಟೊಂದು ಕಾಳಜಿಯುಳ್ಳ, ಪ್ರೀತಿ ತೋರುವ ಹಾಗೂ ಉದಾರ ಜನರಿದ್ದಾರೆ ಎಂದು ನೋಡಲು ಸಂತೋಷವಾಯಿತು. ಈ ವೃದ್ಧ ದಂಪತಿಯ ಆಶೀರ್ವಾದ ಅಂಗಡಿ ಮಾಲೀಕರಿಗೆ ಖಂಡಿತವಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಆಭರಣ ವ್ಯಾಪಾರಿಯ ಒಳ್ಳೆತನಕ್ಕೆ ದೇವರು ಆಶೀರ್ವಾದ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ವ್ಯಕ್ತಿಗಳು ನಮ್ಮ ಸುತ್ತಮುತ್ತಲಿನಲ್ಲಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ