
ಮಹಾರಾಷ್ಟ್ರ, ಜೂನ್ 1 : ಹೆರಿಗೆ (Childbirth) ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಮಗುವಿಗೆ ಜನ್ಮ ನೀಡುವುದು ಹೆಣ್ಣಿಗೆ ಹುಟ್ಟು ಸಾವಿನ ನಡುವಿನ ಹೋರಾಟ. ಹೀಗಾಗಿ ಈ ಸಮಯದಲ್ಲಿ ಆಕೆ ಅನುಭವಿಸುವ ನೋವನ್ನು ಹೇಳಲು ಅಸಾಧ್ಯ. ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರುವುದೇ ಇಲ್ಲ. ಹೀಗಾಗಿ ಮಾರ್ಗ ಮಧ್ಯದಲ್ಲೇ ಹೆರಿಗೆ ಆಗುವುದಿದೆ. ಆದರೆ ಇದೀಗ ಆರೋಗ್ಯ ಸೌಲಭ್ಯದ ಕೊರತೆಯಿಂದ ಆದಿವಾಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯೂ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ (Jalgaon district of Maharashtra) ಯಲ್ಲಿ ನಡೆದಿದೆ ಎನ್ನಲಾಗಿದೆ. ರಸ್ತೆ ಮಧ್ಯದಲ್ಲೇ ಮಹಿಳೆಯರು ಈ ಮಹಿಳೆಗೆ ಹೆರಿಗೆ ಮಾಡಿಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
@theobserverpost ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ಮೂರ್ನಾಲ್ಕು ಮಹಿಳೆಯರು ಸೀರೆಯನ್ನು ಅಡ್ಡಲಾಗಿ ಹಿಡಿದು ರಸ್ತೆ ಬದಿಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಈ ಆದಿವಾಸಿ ಮಹಿಳೆಯ ಗಂಡನು ಅಲ್ಲೇ ನಿಂತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ : ಡಿಜಿಟಲ್ ಪಾವತಿಗೆ ಮೊಬೈಲ್ ಬೇಕಿಲ್ಲ, ಕೈಯ ಉಗುರಿನಿಂದ ಪಾವತಿ ಸಾಧ್ಯ
ಅಂದಹಾಗೆ, ವೈದ್ಯರು ಶಾಂತಾಬಾಯಿ ಬರೇಲಾ ಎಂಬ 24 ವರ್ಷದ ಮಹಿಳೆಗೆ ಮೇ 25 ಕ್ಕೆ ಹೆರಿಗೆ ದಿನಾಂಕ ನೀಡಿದ್ದರು. ಆದರೆ ಮೂರು ದಿನ ಮುಂಚಿತವಾಗಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವು ಕಾಣಿಸಿಕೊಂಡ ತಕ್ಷಣವೇ ಆಕೆಯ ಪತಿ ವಿಶ್ವನಾಥ್ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಮೂವತ್ತು ನಿಮಿಷಗಳ ಕಾಲ ಕಾದರೂ ಕೂಡ ಆಂಬ್ಯುಲೆನ್ಸ್ ಬರಲೇ ಇಲ್ಲ. ಕೊನೆಗೆ ಹಿಂದೆ ಮುಂಚೆ ಯೋಚಿಸದೇ ಪತ್ನಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆ ತಲುಪಲು ಒಂದೂವರೇ ಕಿಲೋಮೀಟರ್ ಇರುವಾಗಲೇ ಮಹಿಳೆಗೆ ರಸ್ತೆಯಲ್ಲೇ ಹೆರಿಗೆಯಾಗಿದೆ. ದಾರಿಹೋಕ ಮಹಿಳೆಯರು ಸೇರಿ ಈ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
In Jalgaon district of Maharashtra, an Adivasi woman had to give birth on the roadside. She did not get an ambulance or medical help in time. pic.twitter.com/wNPvDC8j6H
— The Observer Post (@TheObserverPost) May 31, 2025
ಈ ವಿಡಿಯೋವೊಂದು ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನಮ್ಮಂಥ ಬಡವರ ಕಥೆ ಇಷ್ಟೇ, ಇದನ್ನು ನೋಡಿದರೆ ತುಂಬಾ ದುಃಖ ಆಗುತ್ತೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ಆ ದೇವರು ನಿನಗೆ ಆಯಸ್ಸು ಕೊಡಲಿ ಅಮ್ಮ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವವಳು ತಾಯಿ ಮಾತ್ರ, ಆಕೆಯ ತೀರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ