Viral: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು

ಹೊಸದಾಗಿ ಮದುವೆಯಾದ ದಂಪತಿಗಳು ಹನಿಮೂನ್ ಗೆ ತೆರಳುವುದು ಮಾಮೂಲಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬ್ರೆಜಿಲ್‌ನ ದಂಪತಿಗಳಿಬ್ಬರೂ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದ ತಾವು ಇದ್ದ ಕ್ರೂಸ್ ಹಡಗು ಮಗುಚಿ ಬಿದ್ದಿದೆ. ಈ ವೇಳೆ ಒಂದೇ ಒಂದು ಲೈಫ್ ಜಾಕೆಟ್ ನಿಂದ ಈ ದಂಪತಿಗಳು ಬದುಕಿಳಿದ್ದು, ಭಯಾನಕ ತಿರುವು ಪಡೆದುಕೊಂಡ ಕ್ಷಣವನ್ನು ವಿವರಿಸಿದ್ದಾರೆ. ಈ ಘಟನೆಯ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Viral: ಹನಿಮೂನ್ ನಲ್ಲಿದ್ದಾಗ ಹಡಗು ಮುಳುಗಡೆ, ಒಂದೇ ಒಂದು ಲೈಫ್ ಜಾಕೆಟ್‌ನಿಂದ ಬದುಕುಳಿದ ಬ್ರೆಜಿಲಿಯನ್ ದಂಪತಿಗಳು
ವೈರಲ್​​ ವಿಡಿಯೋ
Edited By:

Updated on: Mar 15, 2025 | 12:07 PM

ಮಾಲ್ಡೀವ್ಸ್‌, ಮಾ 15: ಪ್ರತಿಯೊಬ್ಬರು ಮದುವೆಯಾದ ಬಳಿಕ ಹನಿಮೂನ್ (Honeymoon) ಗೆಂದು ದೇಶ ವಿದೇಶಕ್ಕೆ ತೆರಳುತ್ತಾರೆ. ಜೊತೆಯಾಗಿ ಕಾಲ ಕಳೆಯುವ ಮೂಲಕ ತಮ್ಮ ಮಧುಚಂದ್ರ ಕ್ಷಣಗಳನ್ನು ಸುಂದರವಾಗಿಸಲು ಬಯಸುತ್ತಾರೆ. ಆದರೆ ಇದೀಗ ಮಾಲ್ಡೀವ್ಸ್‌ (Maldives) ನಲ್ಲಿ ತಮ್ಮ ಮಧುಚಂದ್ರದ ಸಮಯದಲ್ಲಿ ತಮ್ಮ ಕ್ರೂಸ್ ಹಡಗು ಮುಳುಗಿದಾಗ ಬ್ರೆಜಿಲಿಯನ್ ನವವಿವಾಹಿತ ದಂಪತಿಗಳು (Brazilian Newlywed couple) ಭಯಾನಕ ಕ್ಷಣವನ್ನು ಎದುರಿಸಬೇಕಾಯಿತು. ಈ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ತಮಗಾದ ಭಯಾನಕ ಅನುಭವವನ್ನು ವಿವರಿಸಿದ್ದಾರೆ.

ಹೌದು, ಬ್ರೆಜಿಲ್‌ನ ವೈದ್ಯ ಕೈಯೊ ಗೋಮ್ಸ್ ಮತ್ತು ಅವರ ಪತ್ನಿ ಉದ್ಯಮಿ ಫೆರ್ನಾಂಡಾ ಡಿನಿಜ್ ಮಾಲ್ಡೀವ್ಸ್‌ನಲ್ಲಿ ತಮ್ಮ ಮಧುಚಂದ್ರವನ್ನು ಆನಂದಿಸುತ್ತಿದ್ದಾಗ ಕ್ರೂಸ್ ಹಡಗು ಭಯಾನಕ ತಿರುವು ಪಡೆದುಕೊಂಡಿತು. ಪ್ರಯಾಣದ ಕೇವಲ 40 ನಿಮಿಷಗಳಲ್ಲಿ, ಒಂದು ದೊಡ್ಡ ಅಲೆಯೂ ಬಂದು ಹಡಗನ್ನು ಅಪ್ಪಳಿಸಿತು. ಆದರೆ ಆ ಹಡಗು ಮಾತ್ರ ತಕ್ಷಣವೇ ಮುಳುಗಲಿಲ್ಲ, 20 ನಿಮಿಷಗಳ ನಂತರದಲ್ಲಿ ಮಗುಚಿ ಬೀಳಲು ಪ್ರಾರಂಭಿಸಿತು. ಈ ವೇಳೆ ನವವಿವಾಹಿತ ದಂಪತಿಗಳು ಭೀಕರ ಕ್ಷಣದಿಂದ ಪಾರಾದ ಕಥೆಯೂ ಮೈ ಜುಮ್ಮ್ ಎನ್ನುವಂತಿದೆ.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕ್ರೂಸ್ ಹಡಗು ಮುಳುಗುತ್ತಿದ್ದಂತೆ ಸಿಬ್ಬಂದಿಗಳು, ಪ್ರಯಾಣಿಕರಿಗೆ ಅಪಾಯದ ಬಗ್ಗೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಆದರೆ ಲೈಫ್ ಜಾಕೆಟ್‌ಗಳನ್ನು ಧರಿಸಿ ಸಮುದ್ರಕ್ಕೆ ಹಾರಲು ಸೂಚನೆ ನೀಡಿದರು. ಆದರೆ ಈ ವೇಳೆಯಲ್ಲಿ ಗೋಮ್ಸ್ ಮತ್ತು ಡಿನಿಜ್ ತಮ್ಮ ಲೈಫ್ ಜಾಕೆಟ್‌ಗಳು ಉಬ್ಬಿಕೊಳ್ಳುತ್ತಿಲ್ಲ ಎನ್ನುವ ಗೊಂದಲದಲ್ಲಿಯೇ ಭಯವಾದ ವಾತಾವರಣವು ನಿರ್ಮಾಣವಾಗಿತ್ತು. ಸಹಾಯಕ್ಕಾಗಿ ಎದುರು ನೋಡುತ್ತಿದ್ದಾಗ ಜೀವ ಉಳಿಸಿದ್ದು ಒಂದೇ ಒಂದು ಲೈಫ್ ಜಾಕೆಟ್. ಈ ಜಾಕೆಟನ್ನೇ ಧರಿಸಿ, ಪರಸ್ಪರ ಬಿಗಿಯಾಗಿ ಹಿಡಿದುಕೊಂಡು ಹನಿಮೂನ್ ನ ಕನಸಿನ ಪ್ರವಾಸವನ್ನು ಸಾಹಸಮಯ ಕಥೆಯನ್ನಾಗಿ ಪರಿವರ್ತಿಸಿಕೊಂಡಿದ್ದು ನಿಜಕ್ಕೂ ರೋಚಕವಾಗಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಸಂದರ್ಭವನ್ನು ತೀವ್ರ ಆಘಾತಕಾರಿ ಎಂದು ಬಣ್ಣಿಸಿದ್ದಾರೆ.

ಈ ವೈರಲ್ ವೀಡಿಯೊವನ್ನು ಡೈಲಿ ಮೇಲ್ (@dailymail) ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಶೇರ್ ಮಾಡಿಕೊಳ್ಳಲಾದ ಒಂದೇ ಒಂದು ಗಂಟೆಯಲ್ಲಿ 1.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಪ್ರಯಾಣಿಕರು ಅಲೆಗಳ ನಡುವೆ ತಮ್ಮ ಲೈಫ್ ಜಾಕೆಟ್ ಗಳನ್ನು ಕೈಯಾರೆ ಉಬ್ಬಿಸುತ್ತಿರುವುದನ್ನು ತೋರಿಸಲಾಗಿದೆ. ಪ್ರಣಯ ಪ್ರವಾಸವಾಗಬೇಕಿದ್ದ ಈ ಪ್ರವಾಸವು ಬದುಕುಳಿಯುವ ಹೋರಾಟವಾಗಿ ಬದಲಾಯಿತು, ಅದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋವು ಬಳಕೆದಾರರ ಗಮನ ಸೆಳೆದಿದ್ದು ಕಾಮೆಂಟ್ ಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ನೀವು ಸತ್ತ ಮೇಲೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳು ಆಗುತ್ತದೆ. ಇಲ್ಲಿದೆ ಮಾಹಿತಿ

ಬಳಕೆದಾರರೊಬ್ಬರು, ಆ ಕ್ಷಣವು ಅತ್ಯಂತ ದುರಂತ ಹಾಗೂ ಆಘಾತಕಾರಿಯಾಗಿತ್ತು, ಅವರು ಅದನ್ನು ಚಿತ್ರೀಕರಿಸುತ್ತಿದ್ದರು ‘ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ‘ಇತರರನ್ನು ರಕ್ಷಿಸುವ ಬಗ್ಗೆ ಪ್ರೀತಿ ಹಾಗೂ ಪ್ರಜ್ಞೆಯನ್ನು ಹೊಂದಿದ್ದಾರೆ ಎಂತಹ ಅದ್ಭುತ ದಂಪತಿಗಳು’ ಎಂದು ಈ ದಂಪತಿಗಳನ್ನು ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈಜುಗಾರರಲ್ಲವರು ಇದ್ದರೆ ಒಂದು ಕ್ಷಣ ಊಹಿಸಿ, ಆ ಕ್ಷಣ ಹೃದಯಾಘಾತವಾಗುತ್ತಿತ್ತು’ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ