Viral: ಕೆಲಸಕ್ಕೆ ಸೇರಿದ 2.5 ಗಂಟೆಯಲ್ಲೇ ಜಾಬ್ ಕಳೆದುಕೊಂಡ ವ್ಯಕ್ತಿ, ಅಸಲಿ ಕಾರಣ ಇಲ್ಲಿದೆ ನೋಡಿ

ಈಗಿನ ಕಾಲದಲ್ಲಿ ಕೆಲಸ ಸಿಗೋದೇ ಕಷ್ಟ. ಸಿಕ್ಕ ಕೆಲಸ ಕೂಡ ಹೋದ್ರೆ ಆ ಸಂದರ್ಭ ಹೇಗಿರುತ್ತೆ ಎಂದು ಯೋಚಿಸಿದ್ದೀರಾ. ಇಲ್ಲೊಬ್ಬ ವ್ಯಕ್ತಿಗೆ ಒಂಬತ್ತು ತಿಂಗಳ ಬಳಿಕ ಉದ್ಯೋಗ ಸಿಕ್ಕಿದೆ. ಕೆಲಸಕ್ಕೆ ಸೇರಿದ ಮೊದಲ ದಿನವೇ ಜಾಬ್ ಹೋಗಿದೆ. ಕೇವಲ 2.5 ಗಂಟೆಗಳಲ್ಲೇ ಹೈಜೀನ್ ಸಮಸ್ಯೆ ಎಂಬ ಕಾರಣ ನೀಡಿ ಅಸೈನ್‌ಮೆಂಟ್‌ನ್ನು ಕೊನೆಗೊಳಿಸಲಾಗಿದೆಯಂತೆ. ಹೌದು, ಕಂಪನಿಯ ಈ ನಿರ್ಧಾರ ಈ ವ್ಯಕ್ತಿಗೆ ಆಘಾತ ತಂದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕೆಲಸಕ್ಕೆ ಸೇರಿದ 2.5 ಗಂಟೆಯಲ್ಲೇ ಜಾಬ್ ಕಳೆದುಕೊಂಡ ವ್ಯಕ್ತಿ, ಅಸಲಿ ಕಾರಣ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Image Credit source: Lea Winkler/picture alliance via Getty Images

Updated on: Sep 21, 2026 | 3:50 PM

ಓದು ಮುಗಿಯುತ್ತಿದ್ದಂತೆ ಜಾಬ್ (job) ಸಿಕ್ಕಿ ಬಿಡಬೇಕು. ಆದರೆ ಕೆಲಸವಿಲ್ಲದೇ ವರ್ಷಾಗಟ್ಟಲೇ ಮನೆಯಲ್ಲೇ ಉಳಿಯುತ್ತಾರೆ. ಆದರೆ ಈ ವ್ಯಕ್ತಿ ಒಂಬತ್ತು ತಿಂಗಳ ಬಳಿಕ ಕೆಲಸ  ದೊರೆತಿದೆ. ಹೌದು ನ್ಯೂಯಾರ್ಕ್‌ನ ಕ್ರಿಸ್ ಸ್ಮಾಲ್ಸ್‌ಗೆ ಟೆಂಪ್ ಏಜೆನ್ಸಿ ಮೂಲಕ ಹೊಸ ಕೆಲಸ ಸಿಕ್ಕಿದೆ. ಆದರೆ ಜಾಯಿನ್ ಆದ ಕೇವಲ 2.5 ಗಂಟೆಯಲ್ಲೇ ಕಂಪನಿ ಕೆಲಸದಿಂದ ತೆಗೆದುಹಾಕಲಾಯಿತು. ಆದರೆ ಈ ರೀತಿ ನಿರ್ಧಾರ ಯಾಕೆ ತೆಗೆದುಕೊಂಡರು ಎಂಬುದು ಈ ವ್ಯಕ್ತಿಗೆ ತಿಳಿದಿಲ್ಲ. ಈ ಬಗ್ಗೆ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲಸ ಸಿಕ್ಕ ಖುಷಿಯಲ್ಲಿ ತೇಲಾಡಿದ ವ್ಯಕ್ತಿ

ಆರ್ ಬಾಯ್‌ ಡಿನ್ನರ್ ಡೈರೀಸ್ (r/BoyDinnerDiaries) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್ ನಲ್ಲಿ ಯುಎಸ್ ಈ ವ್ಯಕ್ತಿಯೊಬ್ಬ ಮೊದಲ ದಿನವೇ ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ತಾನು ಟೆಂಪ್ ಏಜೆನ್ಸಿ ಮೂಲಕ ಟೆಕ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಹೊಸ ಕೆಲಸದ ಮೊದಲ ದಿನ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಹಿಂದಿನ ರಾತ್ರಿ ಸ್ನಾನ ಮಾಡಿ, ಹೊಸ ಪೊಲೊ ಶರ್ಟ್ ಕೂಡ ರೆಡಿ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

I was let go from my new job after 2.5hrs.
by
u/Havocko in
BoyDinnerDiaries

ಮೊದಲ ದಿನವೇ ಶಾಕ್ ನೀಡಿದ ಕಂಪನಿ

ಮೊದಲ ದಿನ ಆಫೀಸ್ ಗೆ ಹೋದ ಕೆಲವು ಗಂಟೆಗಳು ಏನು ಬದಲಾವಣೆಗಳು ಇರಲಿಲ್ಲ. ಮ್ಯಾನೇಜರ್ ಆಫೀಸ್‌ ತೋರಿಸಿ ಕೆಲಸ ಹೇಗೆಂದು ವಿವರಿಸಿದರು. ಕಂಪನಿಯ ಉದ್ಯೋಗಿ ಟ್ರೈನಿಂಗ್ ನೀಡಲು ಮುಂದಾದರು, ಎಲ್ಲವೂ ಯಥಾಸ್ಥಿತಿಯ ಪ್ರಕಾರವೇ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಮ್ಯಾನೇಜರ್ ಊಟಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ ಅದಕ್ಕೂ ಮುನ್ನವೇ ಟೆಂಪ್ ಏಜೆನ್ಸಿಯಿಂದ ಕರೆ ಬಂದಿದ್ದು, ಹೈಜೀನ್ ಸಮಸ್ಯೆ ಕಾರಣಕ್ಕೆ ತಮ್ಮ ಅಸೈನ್‌ಮೆಂಟ್ ಮುಗಿಸಲಾಗಿದೆ ಎಂದು ಕಂಪನಿ ಶಾಕ್ ನೀಡಿದೆ.

ಕೆಲಸದಿಂದ ತೆಗೆದು ಹಾಕಿದ ಕಾರಣ ಮಾತ್ರ ನಿಗೂಢ

ಏಕಾಏಕಿ ಕೆಲಸದಿಂದ ತೆಗೆದು ಹಾಕುವ ಕಂಪನಿಯ ನಿರ್ಧಾರದ ಹಿಂದಿನ ಅಸಲಿ ಕಾರಣ ಏನೆಂದು ನನಗೆ ಅರ್ಥವಾಗಿಲ್ಲ. ತಾನು ಸ್ನಾನ ಮಾಡಿದ್ದಾಗಿ, ಹಲ್ಲು ಉಜ್ಜಿ ಮತ್ತು ಹೊಸ ಶರ್ಟ್ ಧರಿಸಿದ್ದಾಗಿ ಬಂದಿದ್ದೇನೆ. ಹೀಗಾಗಿ ಯಾವುದೇ ದುರ್ವಾಸನೆ ಬರುತ್ತಿರಲಿಲ್ಲ. ಕೊನೆಗೆ ಅನುಮಾನ ಬಂದು ತನ್ನ ಇಬ್ಬರೂ ಸ್ನೇಹಿತರ ಬಳಿ ಈ ಬಗ್ಗೆ ಪರೀಕ್ಷಿಸಲು ತಿಳಿಸಿದ್ದಾರೆ. ಸ್ನೇಹಿತರ ಉತ್ತರವು ಯಾವುದೇ ದುರ್ವಾಸನೆ ಇಲ್ಲ ಎನ್ನುವುದಾಗಿತ್ತು. ಆದರೆ ಮ್ಯಾನೇಜರ್ ಯಾವ ಹೈಜೀನ್ ಸಮಸ್ಯೆ ಎಂಬುದನ್ನು ನನ್ನ ಬಳಿ ವಿವರಿಸಿಲ್ಲ. ತಮ್ಮ ಸಣ್ಣದಾದ ವರ್ತನೆಯನ್ನು ಕೂಡ ತಪ್ಪಾಗಿ ಅರ್ಥೈಸಿರಬಹುದೇ ಎಂದು ಈ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಿಗ್ಗಿಯಲ್ಲಿ ಆಹಾರ ಸಮಸ್ಯೆ ಬಗ್ಗೆ ದೂರು ಸಲ್ಲಿಸಿ ಇಂಟರ್ವ್ಯೂ ಅವಕಾಶ ಕೇಳಿದ ಯುವಕ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಕಂಪನಿಗಳ ಕೆಲವು ನಿರ್ಧಾರಗಳು ಅರ್ಥವೇ ಆಗಲ್ಲ ಎಂದಿದ್ದಾರೆ. ಇನ್ನೊಬ್ಬರು, ಪ್ರಯತ್ನ ಪಡಿ ಬೇರೆ ಉದ್ಯೋಗ ಸಿಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೇರೆ ಕಾರಣವಿರಬಹುದು, ನಿಮಗೆ ತಿಳಿಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us