Viral Video: ಗಡ್ಡದಿಂದ 63 ಕೆಜಿ ತೂಕವಿರುವ ಯುವತಿಯನ್ನು ಮೇಲಕ್ಕೆತ್ತಿದ ವ್ಯಕ್ತಿ; ಗಿನ್ನಿಸ್​ ವರ್ಲ್ಡ್ ರೆಕಾರ್ಡ್

ಇಲ್ಲೋರ್ವ ವ್ಯಕ್ತಿ ಗಡ್ಡದಿಂದ ಬರೋಬ್ಬರಿ 63 ಕೆಜಿ ಹೊಂದಿರುವ ಯುವತಿಯನ್ನು ಮೇಲಕ್ಕಿತ್ತಿದ್ದಾರೆ. ನೆಟ್ಟಿಗರು ಬೆರವಾಗುವಂತೆ ಮಾಡಿರುವ ವಿಡಿಯೊ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ಗಡ್ಡದಿಂದ 63 ಕೆಜಿ ತೂಕವಿರುವ ಯುವತಿಯನ್ನು ಮೇಲಕ್ಕೆತ್ತಿದ ವ್ಯಕ್ತಿ; ಗಿನ್ನಿಸ್​ ವರ್ಲ್ಡ್ ರೆಕಾರ್ಡ್
ಗಡ್ಡದಿಂದ ಯುವತಿಯನ್ನು ಮೇಲಕ್ಕೆತ್ತಿದ ವ್ಯಕ್ತಿ
Edited By:

Updated on: Nov 23, 2021 | 12:55 PM

ಕೆಲವು ಸ್ಟಂಟ್​ಗಳ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ನಿಜವಾಗಿಯೂ ಬೆರಗಾಗುವಂತೆ ಮಾಡುವ ಕೆಲವು ಸಾಹಸಗಳ ದೃಶ್ಯಗಳು ಬಾಯ್ಮೇಲೆ ಬೆರಳಿಟ್ಟು ನೋಡುವಷ್ಟು ಕುತೂಹಲ ಕೆರಳಿಸುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ನೋಡಿದ್ರೆ ನಿಜವಾಗಿಯೂ ಆಶ್ಚರ್ಯ ಪಡುತ್ತೀರಾ. ತನ್ನ ಗಡ್ಡದಿಂದ, ಬರೋಬ್ಬರಿ 63 ಕೆಜಿ ಯುವತಿಯನ್ನು ಮೇಲಕ್ಕೆತ್ತಿ ಗಿನ್ನೆಸ್ ವಲರ್ಡ್ ರೆಕಾರ್ಡ್ ಮಾಡಿದ ವ್ಯಕ್ತಿಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊ ಇದೆ ನಿವೇ ನೋಡಿ.

ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಅಂಟಾನಾಸ್ ಕಾಂಟ್ರಿಮಾಸ್ ಎಂಬ ವ್ಯಕ್ತಿ ಗಡ್ಡದಿಂದ, 63.80 ಕೆಜಿ ತೂಕ ಹೊಂದಿರುವ ಯುವತಿಯನ್ನು ಎತ್ತಿದ್ದಾರೆ ಎಂದು ಶಿರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಗಮನಿಸುವಂತೆ, ವ್ಯಕ್ತಿಯೋರ್ವ ತಾನು ಬೆಳೆಸಿದ ಗಡ್ಡಕ್ಕೆ ಯುವತಿಯನ್ನು ಕಟ್ಟಿದ್ದಾನೆ. ಬರೋಬ್ಬರಿ 63 ಕೆಜಿ ತೂಕ ಹೊಂದಿರುವ ಯುವತಿಯನ್ನು ಗಡ್ಡದ ಸಹಾಯದಿಂದ ಮೇಲಕ್ಕೆತ್ತಿ ದಾಖಲೆ ನಿರ್ಮಿಸಿದ್ದಾನೆ.

ವಿಡಿಯೊ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ದೃಶ್ಯ, ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಅದ್ಭುತ ಪ್ರತಿಭೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ರೀತಿ ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುವ ಮೂಲಕ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ರೈಲಿನಲ್ಲಿ ತಾತ್ಕಾಲಿಕ ಸೀಟ್ ತಯಾರಿಸಿಕೊಂಡು ಕುಳಿತ ಪ್ರಯಾಣಿಕ; ಹೇಗಂತೀರಾ? ವಿಡಿಯೊ ನೋಡಿ

Viral Video: ಔಟ್ ಆಗುವುದನ್ನು ತಡೆಯಲು ಹೋಗಿ ಔಟ್ ಆದ ಶ್ರೀಲಂಕಾ ಬ್ಯಾಟರ್

Published On - 12:55 pm, Tue, 23 November 21

Loading...
Unable to load recommendations.
Follow Us