ಸದಾ ನಮ್ಮ ಪ್ರೇಮ ಬಾನೆತ್ತರಕ್ಕೇರುತ್ತಿರಲಿ ; ವಿಮಾನದಲ್ಲಿ ಪ್ರೇಮ ನಿವೇದನೆ

| Updated By: ಶ್ರೀದೇವಿ ಕಳಸದ

Updated on: Oct 21, 2022 | 3:30 PM

Love Proposal in Flight : ತನ್ನ ಪ್ರೇಮವನ್ನು ಎಲ್ಲಿ, ಹೇಗೆ ನಿವೇದಿಸಿಕೊಂಡರೆ ವಿಶೇಷವೆನ್ನಿಸಬಹುದು? ಪ್ರತಿಯೊಬ್ಬ ಪ್ರೇಮಿಯೂ ಯೋಚಿಸುತ್ತಿರುತ್ತಾರೆ. ಈಗಿಲ್ಲಿ ಇವ ವಿಮಾನದಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಸದಾ ನಮ್ಮ ಪ್ರೇಮ ಬಾನೆತ್ತರಕ್ಕೇರುತ್ತಿರಲಿ ; ವಿಮಾನದಲ್ಲಿ ಪ್ರೇಮ ನಿವೇದನೆ
Man surprises girlfriend with proposal during flight
Follow us on

Viral : ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಗೆಳೆಯ ಅಥವಾ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಬಗೆಯ ಬಗ್ಗೆ ಬಹಳ ಯೋಚಿಸುತ್ತಿರುತ್ತಾರೆ. ಹೃದಯಕ್ಕೆ ಸಂಬಂಧಿಸಿದ್ದು ಯಾವತ್ತೂ ವಿಭಿನ್ನವಾಗಿರಬೇಕು, ವಿಶಿಷ್ಟವಾಗಿರಬೇಕು ಎಂಬ ಆಲೋಚನೆ ಅವರ ಮನಸಿನಲ್ಲಿ ಸದಾ ಸುಳಿದಾಡುತ್ತಿರುತ್ತದೆ. ವಿಶಾಲ ಸಾಗರದ ಮಧ್ಯೆ ಮನಸು ಬಿಚ್ಚಿದರೆ ಹೇಗೆ? ಶಾಂತವಾಗಿ ಹರಿಯುವ ನದೀ ತಟದಲ್ಲಿ? ಕಾಡಿನ ಹಸಿರಿನ ಮಧ್ಯೆ? ರೆಸ್ಟೋರೆಂಟಿನ ಮಂದ ಬೆಳಕು, ಮೆಲುವಾದ ಸಂಗೀತದ ಮಧ್ಯೆ? ಇಲ್ಲವಾದರೆ, ಭೂಮಿಯಿಂದ ಮೇಲೆ ಸಾವಿರಾರು ಮೈಲಿ ದೂರದಲ್ಲಿ ಹಾರಾಡುವ ವಿಮಾನದಲ್ಲಿ? ಹಾಂ! ಈ ವಿಮಾನದಲ್ಲಿಯೇ ಇದೀಗ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಅಚ್ಚರಿ ಮತ್ತು ಅಪೂರ್ವ ಕ್ಷಣಗಳಿಂದ ಆಕೆಯ ಹೃದಯವನ್ನು ಆರ್ದ್ರಗೊಳಿಸಿದ್ದಾನೆ.

ಅಮೆರಿಕದ ಯುನೈಟೆಡ್​ ಏರ್​ಲೈನ್ಸ್​ನಲ್ಲಿ ಈ ಮಧುರ ಗಳಿಗೆಗಳು ಅರಳಿವೆ. ಬ್ರಿಯಾನ್​ ಮತ್ತು ಸ್ಟಿಫಾನೀಗೆ ಏರ್​ಲೈನ್ಸ್​ನ ಸಿಬ್ಬಂದಿ ಹಾರೈಸಿ ಸಂಭ್ರಮಿಸಿದೆ. ಈ ಪೋಸ್ಟ್​ ಅನ್ನು ಅಕ್ಟೋಬರ್ 17ರಂದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 5,300 ಜನರು ಈ ಪೋಸ್ಟ್​ ಅನ್ನುಇಷ್ಟಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನ ಮರುಹಂಚಿಕೊಂಡಿದ್ದಾರೆ. 280ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಎಂಥ ಸುಂದರವಾಗಿದೆ ಈ ದೃಶ್ಯ, ವಿಮಾನ ಸಿಬ್ಬಂದಿ ಎಷ್ಟು ಚೆಂದ ಸಹಕರಿಸಿದೆ’ ಎಂದಿದ್ದಾರೆ ಒಬ್ಬರು. ‘ಅವರಿಬ್ಬರ ಒಂದುಗೂಡುವಿಕೆಗೆ ಸಾಕ್ಷಿಯಾದ ನಿಮಗೆ ಧನ್ಯವಾದ’ ಎಂದಿದ್ದಾರೆ ಇನ್ನೂ ಒಬ್ಬರು. ‘ಅವರ ಪ್ರೀತಿಯನ್ನೂ ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೀರಿ’ ಎಂದಿದ್ದಾರೆ ಮಗದೊಬ್ಬರು.

ಪ್ರೀತಿ ಎಷ್ಟು ಎತ್ತರಕ್ಕೇರುತ್ತದೆಯೋ ಅಷ್ಟೇ ಆಳಕ್ಕೂ ಇಳಿಯಬಲ್ಲುದು. ಅಂದಾಗಲೇ ಅದು ಬಂಧ.

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:29 pm, Fri, 21 October 22