Viral: ಕಲ್ಲುಗಳ ನಡುವೆ ಬಿದ್ದ ಇಯರ್ ಬಡ್ಸ್‌ ಹುಡುಕಲು ಚಾಟ್ ಜಿಪಿಟಿ ಸಹಾಯ ಪಡೆದ ವ್ಯಕ್ತಿ

ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಷ್ಟು ನಿಪುಣರು. ವ್ಯಕ್ತಿಯೊಬ್ಬರು ಉದ್ಯಾನವನದಲ್ಲಿ ಕಳೆದು ಹೋಗಿದ್ದ ಇಯರ್ ಬಡ್ಸ್‌ ಹುಡುಕಲು ಚಾಟ್ ಜಿಪಿಟಿ ಮೊರೆ ಹೋಗಿದ್ದಾರೆ. ಕೊನೆಗೆ ಚಾಟ್ ಜಿಪಿಟಿಯೇ ಇಯರ್ ಬಡ್ಸ್‌ ಹುಡುಕಿಕೊಟ್ಟಿದೆ. ಈ ಬಗ್ಗೆ ರೆಡ್ಡಿಟ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕಲ್ಲುಗಳ ನಡುವೆ ಬಿದ್ದ ಇಯರ್ ಬಡ್ಸ್‌ ಹುಡುಕಲು ಚಾಟ್ ಜಿಪಿಟಿ ಸಹಾಯ ಪಡೆದ ವ್ಯಕ್ತಿ
ರೆಡ್ಡಿಟ್‌ ಪೋಸ್ಟ್‌
Image Credit source: Denis Borisov/E+/Getty Images/ Reddit

Updated on: Oct 27, 2026 | 1:04 PM

ಇತ್ತೀಚೆಗಿನ ದಿನಗಳಲ್ಲಿ ಎಐ ಬಳಕೆ ಹೆಚ್ಚಾಗಿದೆ. ಪ್ರತಿಯೊಂದು ಸಮಸ್ಯೆಗೂ ಚಾಟ್ ಜಿಪಿಟಿ (Chat GPT) ಮೂಲಕ ಸಲಹೆ ಕೇಳುವವರೇ ಹೆಚ್ಚಾಗಿದ್ದಾರೆ. ಇಂತಹ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ವ್ಯಕ್ತಿಯೊಬ್ಬರು ಕಲ್ಲುಗಳ ನಡುವೆ ಕಳೆದು ಹೋಗಿದ್ದ ಇಯರ್ ಬಡ್ ಹುಡುಕಲು ಪರದಾಡುತ್ತಿದ್ದಾರೆ. ಎಷ್ಟೇ ಹುಡುಕಿದ್ರೂ ಸಿಗದ ಇಯರ್ ಬಡ್ಸ್‌ನ್ನು ಚಾಟ್ ಜಿಪಿಟಿ ಕ್ಷಣಾರ್ಧದಲ್ಲಿ ಹುಡುಕಿಕೊಟ್ಟಿದೆ. ಹೌದು, ಚಾಟ್ ಜಿಪಿಟಿ ಸಹಾಯ ಪಡೆದುಕೊಂಡು ಕಳೆದು ಹೋದ ವಸ್ತು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹಂಚಿಕೊಂಡ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳೆದು ಹೋದ ವಸ್ತು ಹುಡುಕಲಾಗದೇ ಚಾಟ್ ಜಿಪಿಟಿ ಮೊರೆ ಹೋದ ವ್ಯಕ್ತಿ

ಆರ್ ಚಾಟ್ ಜಿಪಿಟಿ (r/ChatGPT) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಮಗನೊಂದಿಗೆ ಉದ್ಯಾನವನದಲ್ಲಿದ್ದಾಗ ನಡೆದಿದೆ ಇಯರ್ ಬಡ್ಸ್‌ ಕಳೆದು ಹೋಗಿದೆ. ಮಗನು ಓಡುತ್ತಿದ್ದ ವೇಳೆ ಆತನನ್ನು ಹಿಡಿಯಲು ಹಿಂದೆ ಓಡಿದ್ದು ಆ ಸಂದರ್ಭ ಜೇಬಲ್ಲಿ ಇದ್ದ ಇಯರ್‌ಬಡ್ಸ್‌ ಗ ಬೆಣಚು ಕಲ್ಲುಗಳ ನಡುವೆ ಬಿದ್ದಿದೆ. ಎಷ್ಟೇ ಹುಡುಕಿದ್ರೂ ಇಯರ್ ಬಡ್ಸ್‌ ಸಿಗಲೇ ಇಲ್ಲ. ಕೊನೆಗೆ ಚಾಟ್ ಜಿಪಿಟಿ ಸಹಾಯ ಪಡೆದುಕೊಂಡೆ. ಈ ಬೆಣಚು ಕಲ್ಲುಗಳ ಫೋಟೊಗಳನ್ನು ಅಪ್‌ ಲೋಡ್ ಮಾಡಿ, ಇದರ ನಡುವೆ ಕಳೆದು ಹೋದ ಇಯರ್ ಬಡ್ಸ್‌ ಹುಡುಕಿ ಕೊಡಲು ಕೇಳಿಕೊಂಡೆ. ಆದರೆ ಚಾಟ್ ಜಿಪಿಟಿ ಇನ್ನಷ್ಟು ಹತ್ತಿರದಿಂದ ತೆಗೆದ ಚಿತ್ರಗಳನ್ನು ನೀಡುವಂತೆ ಸಲಹೆ ನೀಡಿತು. ಒಳಗೆ ಹತ್ತಿರದಿಂದ ತೆಗೆದ ಫೋಟೋ ಕಳುಹಿಸುತ್ತಿದ್ದಂತೆ ಕಲ್ಲುಗಳ ನಡುವೆ ಸಿಲುಕಿದ್ದ ಇಯರ್‌ಬಡ್ಸ್‌ ಎಲ್ಲಿದೆ ಎಂದು ಗುರುತಿಸಿ ಹುಡುಕಿಕೊಟ್ಟಿತು ಎಂದು ಹೇಳಿದ್ದಾರೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ChatGPT found my lost earbud
by
u/Just_a_fungi893 in
ChatGPT

ಇದನ್ನೂ ಓದಿ: ಚೀನಾದಲ್ಲಿ ಸದ್ದು ಮಾಡುತ್ತಿದೆ AI ತಂತ್ರಜ್ಞಾನದ ವಿಚಿತ್ರ ಬಿಸಿನೆಸ್; ಬಾಡಿಗೆಗೆ ಮುಖ ಕೊಟ್ಟು ಲಕ್ಷ ಗಳಿಸುವ ಚೀನಿಯರು!

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಜಕ್ಕೂ ತಂತ್ರಜ್ಞಾನ ಎಷ್ಟು ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ಸಮಯವನ್ನು ಉಳಿಸಿತು ಎಂದಿದ್ದಾರೆ. ಇನ್ನೊಬ್ಬರು, ಚಾಟ್ ಜಿಪಿಟಿ ಇಂತಹ ಸಂದರ್ಭದಲ್ಲಿ ಅನುಕೂಲಕರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us