Viral: ಮಂಡ್ಯದಲ್ಲೊಂದು ಅಚ್ಚರಿಯ ಘಟನೆ; ಒಂದಲ್ಲ ಎಡರಲ್ಲ… ಏಕಕಾಲಕ್ಕೆ ಮೂರು ಕರುಗಳಿಗೆ ಜನ್ಮ ನೀಡಿದ ಹಸು

ಈ ಪ್ರಪಂಚದಲ್ಲಿ ಆಗೊಮ್ಮೆ ಈಗೊಮ್ಮೆ ನಮ್ಮ ಊಹೆಗೂ ನಿಲುಕದ ಕೆಲವೊಂದು ಅಚ್ಚರಿಯ ಸಂಗತಿಗಳು ನಡೆಯುತ್ತಿರುತ್ತವೆ. ಇಂತಹ ಘಟನೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇದೀಗ ಅಂತಹದ್ದೇ ಅಚ್ಚರಿಯ ಘಟನೆ ನಡೆದಿದ್ದು, ಅಪರೂಪದಲ್ಲಿ ಅಪರೂಪ ಎನ್ನುವಂತೆ ಹೆಚ್.‌ಎಫ್‌ ತಳಿಯ ಹಸುವೊಂದು ಒಂದಲ್ಲ ಎರಡಲ್ಲ ಏಕಕಾಲಕ್ಕೆ ಮೂರು ಕರುಗಳಿಗೆ ಜನ್ಮವನ್ನು ನೀಡಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Nov 29, 2024 | 3:21 PM

ಸಾಮಾನ್ಯವಾಗಿ ಹಸುಗಳು ಒಂದು ಸಲ ಒಂದೇ ಕರುವಿಗೆ ಜನ್ಮವನ್ನು ನೀಡುತ್ತವೆ. ಅಪರೂಪದಲ್ಲಿ ಅಪರೂಪ ಎನ್ನುವಂತೆ ಕೆಲವು ಕಡೆಗಳಲ್ಲಿ ಹಸುಗಳು ಅವಳಿ ಕರುಗಳಿಗೆ ಜನ್ಮ ನೀಡಿದಂತಹ ಉದಾಹರಣೆಗಳು ಕೂಡಾ ಇವೆ. ಆದ್ರೆ ನೀವು ಹಸು ತ್ರಿವಳಿ ಕರುಗಳಿಗೆ ಜನ್ಮ ನೀಡಿದಂತಹ ಸುದ್ದಿಯನ್ನು ಕೇಳಿದ್ದೀರಾ? ಇಲ್ಲೊಂದು ಇಂತಹ ಅಚ್ಚರಿಯ ಘಟನೆ ನಡೆದಿದ್ದು ಹೆಚ್.‌ಎಫ್‌ ತಳಿಯ ಹಸುವೊಂದು ತ್ರಿವಳಿ ಹೆಣ್ಣು ಕರುಗಳಿಗೆ ಜನ್ಮವನ್ನು ನೀಡಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಈ ಅದ್ಭುತ ಹಾಗೇನೇ ಅಚ್ಚರಿಯ ವಿಷಯವನ್ನು ತಿಳಿದು ನೆಟ್ಟಿಗರು ಬೆರಗಾಗಿದ್ದಾರೆ.

ಹಸು ಅವಳಿ ಕರುಗಳಿಗೆ ಜನ್ಮ ನೀಡಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಹಸು ತ್ರಿವಳಿ ಕರುಗಳಿಗೆ ಜನ್ಮವನ್ನು ನೀಡಿದೆ. ಈ ಅಚ್ಚರಿಯ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ. ಹೆಚ್.ಎಫ್‌ ತಳಿಯ ಹಸುವೊಂದು ಏಕಕಾಲಕ್ಕೆ ಬರೋಬ್ಬರಿ 3 ಹೆಣ್ಣು ಕರುಗಳಿಗೆ ಜನ್ಮವನ್ನು ನೀಡಿದ್ದು, ಈ ತ್ರಿವಳಿ ಕರುಗಳು ಆರೋಗ್ಯಕರವಾಗಿದೆ.

ಇದನ್ನೂ ಓದಿ: ಇದೇನಿದು ಆಶ್ಚರ್ಯ… ಹುಲ್ಲು ಬಿಟ್ಟು ಜೀವಂತ ಕೋಳಿಯನ್ನು ತಿಂದ ಹಸು; ವಿಡಿಯೋ ವೈರಲ್‌

ಈ ಕುರಿತ ವಿಡಿಯೋವನ್ನು ಪರಿಸರ ಪರಿವಾರ (Parisara360) ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು “ಅವಳಿಯಲ್ಲ, ತ್ರಿವಳಿ ಕರುಗಳ ಜನನ; ಮಾಲೀಕರಿಗೆ ತ್ರಿಬಲ್‌ ಧಮಾಕ!!” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಬಳಿಕ ಹಸು ತನ್ನ ಕಂದಮ್ಮಗಳನ್ನು ಆರೈಕೆ ಮಾಡುತ್ತಿರುವ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಏಕಕಾಲಕ್ಕೆ ಹಸು ಮೂರು ಕರುಗಳಿಗೆ ಜನ್ಮ ನೀಡಿರುವಂತಹ ಈ ಸುದ್ದಿಯನ್ನು ಕೇಳಿ ನೆಟ್ಟಿಗರು ಬೆರಗಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ