ಮಂಗಳೂರಿಗರೇ… ಈ ದೀಪಾವಳಿಗೆ ಮುಗ್ಧ ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ಬಣ್ಣದ ಹಣತೆಗಳನ್ನು ಖರೀದಿಸಿ

ದೀಪಾವಳಿ ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ದೀಪದ ಹಬ್ಬದಲ್ಲಿ ಹಣತೆಗಳಿಗೆ ಬಹಳನೇ ಪ್ರಾಧಾನ್ಯತೆ ಇದ್ದು, ಈಗಾಗ್ಲೇ ಅನೇಕರು ಮಾಲ್‌, ಅಂಗಡಿಗಳಲ್ಲಿ ಸುತ್ತಾಡಿ ವಿವಿಧ ಡಿಸೈನ್‌, ವಿವಿಧ ಬಣ್ಣಗಳ ದೀಪಗಳನ್ನು ಖರೀಸುವ ಪ್ಲಾನ್‌ ಮಾಡಿರ್ತಾರೆ. ನೀವೇನಾದ್ರೂ ಮಂಗಳೂರಿನವರಾದ್ರೇ ಮಾಲ್‌, ಇತ್ಯಾದಿ ಅಂಗಡಿಗಳಲ್ಲಿ ದೀಪಗಳನ್ನು ಖರೀದಿಸುವ ಬದಲು ಇಲ್ಲೊಂದು ವಿಶೇಷ ಚೇತನ ಮಕ್ಕಳು ಬಹಳ ಪ್ರೀತಿಯಿಂದ ತಯಾರಿಸಿದಂತಹ ಬಣ್ಣದ ಹಣತೆಗಳನ್ನು ಖರೀದಿಸಿ.

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನೂ ದಿನಗಣನೆ ಶುರುವಾಗಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಹೀಗಾಗಿ ದೀಪಗಳು ಈ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಹೆಚ್ಚಿನ ಜನರು ಮಣ್ಣಿನ ದೀಪಗಳನ್ನು ಖರೀದಿಸುವ ಬದಲು ವಿವಿಧ ಡಿಸೈನ್‌ಗಳ ದೀಪಗಳು ಬೇಕೆಂದು ಮಣ್ಣಿನ ಹಣತೆಯ ಬದಲು ಪಿಂಗಾಣಿ, ಪಿಒಪಿ ಹಣತೆಗಳನ್ನು ಖರೀದಿಸುತ್ತಾರೆ. ಈ ಬಾರಿಯ ಹಬ್ಬಕ್ಕೂ ಅನೇಕರು ಮಾಲ್‌, ಅಂಗಡಿಗಳಲ್ಲಿ ಸುತ್ತಾಡಿ ವಿವಿಧ ಡಿಸೈನ್‌, ವಿವಿಧ ಬಣ್ಣಗಳ ದೀಪಗಳನ್ನು ಖರೀಸುವ ಪ್ಲಾನ್‌ ಮಾಡಿರ್ತಾರೆ. ನೀವೇನಾದ್ರೂ ಮಂಗಳೂರಿನಲ್ಲಿದ್ದರೆ ಮಾಲ್‌, ಇತ್ಯಾದಿ ಅಂಗಡಿಗಳಲ್ಲಿ ಪಿಂಗಾಣಿ ಇತ್ಯಾದಿ ದೀಪಗಳನ್ನು ಖರೀದಿಸುವ ಬದಲು ಇಲ್ಲೊಂದು ವಿಶೇಷ ಚೇತನ ಮಕ್ಕಳು ಬಹಳ ಪ್ರೀತಿಯಿಂದ ತಯಾರಿಸಿದಂತಹ ಬಣ್ಣದ ಹಣತೆಗಳನ್ನು ಖರೀದಿಸಿ.

ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನಲ್ಲಿ ಸೇವಾಭಾರತಿ ಸಂಸ್ಥೆ ನಿರ್ವಹಿಸುತ್ತಿರುವ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು ಈ ಬಣ್ಣದ ಹಣತೆಗಳನ್ನು ತಯಾರಿಸುತ್ತಿದ್ದು, ಈ ಮುದ್ದು ಮನಸ್ಸುಗಳು ಪ್ರೀತಿಯಿಂದ ತಯಾರಿಸಿದ ದೀಪಗಳನ್ನು ಸಂಸ್ಥೆಯವರು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ತಯಾರಾದ ಮಣ್ಣಿನ ಹಣತೆಗಳನ್ನು ತಂದು ಈ ವಿಶೇಷ ಚೇತನ ಮಕ್ಕಳ ಕೈಗೆ ನೀಡಲಾಗುತ್ತದೆ. ಗುರುಗಳು ಮತ್ತು ತಮ್ಮ ಮೆಂಟರ್‌ಗಳ ಸಹಾಯದಿಂದ ಈ ಮಕ್ಕಳು ಮಣ್ಣಿನ ದೀಪಗಳಿಗೆ ತಮ್ಮಿಷ್ಟದ ಬಣ್ಣ ಬಳಿದು ಬಣ್ಣದ ಹಣತೆಯನ್ನು ತಯಾರಿಸ್ತಾರೆ. ಎಲ್ಲೆಲ್ಲೋ ಚೌಕಾಸಿ ಮಾಡಿ ಹಣತೆಗಳನ್ನು ಖರೀದಿಸುವ ಬದಲು ಈ ಮುಗ್ಧ ಮನಸ್ಸುಗಳು ಬಹಳ ಪ್ರೀತಿಯಿಂದ ತಯಾರಿಸಿದ ಶ್ರೇಷ್ಠ ಹಣತೆಗಳನ್ನು ಖರೀದಿಸುವುದು ಸೂಕ್ತ ಅಲ್ವಾ.

ಇದನ್ನೂ ಓದಿ: ಕೌಟುಂಬಿಕ ಕಲಹ… ಹೆಂಡತಿ-ಮಗಳಿಂದಲೇ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ; ವಿಡಿಯೋ ವೈರಲ್

ಈ ಕುರಿತ ಪೋಸ್ಟ್‌ ಪೋಸ್ಟ್‌ ಒಂದನ್ನು HarryDS46144044 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಂಗಳೂರಿನ ಮಿತ್ರರೇ, ದಯವಿಟ್ಟು ಸ್ವಲ್ಪ ಬಿಡಿವು ಮಾಡಿಕೊಂಡು ಇಲ್ಲಿಂದಲೇ ಖರೀದಿಸುವ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ ವಿಶೇಷ ಚೇತನ ಮಕ್ಕಳು ಬಣ್ಣ ಬಣ್ಣದ ಸುಂದರ ಹಣತೆಗಳನ್ನು ತಯಾರಿಸುವ ಅದ್ಭುತ ದೃಶ್ಯವನ್ನು ಕಾಣಬಹುದು. ಅಂಗಡಿಗಳಲ್ಲಿ ದೀಪಗಳನ್ನು ಖರೀದಿಸುವ ಬದಲು ಈ ಮುಗ್ಧ ಮನಸ್ಸುಗಳು ತಯಾರಿಸಿದ ದೀಪಗಳನ್ನು ಖರೀದಿಸಿಸುವ ಮೂಲಕ ಈ ಬಾರಿಯ ಬೆಳಕಿನ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿರಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us