Video: ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ

ಒಂಟಿ ಮಹಿಳೆ ಕಂಡರೆ ಸಾಕು,ಕೆಲವರು ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇಂತಹ ಅಹಿತಕರ ಘಟನೆಗೆ ಸಂಬಂಧಿಸಿದ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮುಸ್ಲಿಂ ಮಹಿಳೆಯ ಜೊತೆಗೆ ಯುವಕನೊಬ್ಬನು ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ರಸ್ತೆಯಲ್ಲಿ ಹೋಗುತ್ತಿದ್ದ ಬುರ್ಖಾದಾರಿ ಮಹಿಳೆಗೆ ಕಿಸ್​​ ಮಾಡಿ ಹೋದ ಯುವಕ
ವಿಡಿಯೋ ವೈರಲ್
Image Credit source: Twitter

Updated on: May 27, 2025 | 2:42 PM

ಮೀರತ್, ಮೇ 27 : ಕೆಲಸದ ಸ್ಥಳಗಳಲ್ಲಿ, ಪ್ರಯಾಣದ ವೇಳೆಯಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆ ಸಿಕ್ಕರೆ ಸಾಕು, ಕೆಲ ವ್ಯಕ್ತಿಗಳು ಅನುಚಿತವಾಗಿ ವರ್ತಿಸುವ ಮೂಲಕ ನೀಚ ಬುದ್ಧಿಯನ್ನು ತೋರಿಸುತ್ತಾರೆ. ಇದೀಗ ಉತ್ತರ ಪ್ರದೇಶದ ಮೀರತ್ (Meerut of Uttar pradesh) ನಲ್ಲಿ ಇಂತಹದ್ದೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಮಹಿಳೆಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಯುವಕ (Young boy) ನೊಬ್ಬನು ಬಲವಂತವಾಗಿ  ಆಕೆಯ ಕೆನ್ನೆಗೆ ಚುಂಬಿಸಿದ್ದಾನೆ. ಮೀರತ್ ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರದೇಶದ ಅಹ್ಮದ್ ನಗರ ಪ್ರದೇಶದಲ್ಲಿ ಮೇ 20 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Voice of Hindus ಹೆಸರಿನ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ರಸ್ತೆಯಲ್ಲಿ ಪುಟ್ಟ ಬಾಲಕಿಯೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನುಕಾಣಬಹುದು. ಈ ವೇಳೆಯಲ್ಲಿ ಬೈಕ್‌ನಲ್ಲಿ ಬಂದ ಯುವಕನೊಬ್ಬನು ಮಹಿಳೆಯ ಕೆನ್ನೆಗೆ ಚುಂಬಿಸಿ ಹೋಗಿದ್ದಾನೆ. ‌ ಮಹಿಳೆಯೂ ಕೋಪದಿಂದ ಯುವಕನಿಗೆ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ್ದಾಳೆ.

ಇದನ್ನೂ ಓದಿ
ವಿದ್ಯಾರ್ಥಿಗೆ ಗಿಟಾರ್ ಕಲಿಸಿದ ಮೇಘಾಲಯ ಸಿಎಂ; ಸರಳತನಕ್ಕೆ ಭಾರೀ ಮೆಚ್ಚುಗೆ
73 ವರ್ಷಗಳ ಬಳಿಕ ಸೌದಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ
ಫೋನ್ ಟ್ಯಾಪಿಂಗ್ ನಿಂದ ಬದಲಾಯ್ತು ಅದೃಷ್ಟ, 231 ಕೋಟಿ ಗೆದ್ದ ವ್ಯಕ್ತಿ
ಬಾಲಿವುಡ್ ಹಾಡಿಗೆ ಸೊಂಟ ಕುಲುಕಿಸಿದ ಅಜ್ಜಿ

ಇದನ್ನೂ ಓದಿ : ಕಾರ್ಡ್​ನಿಂದ ಅತಿ ಎತ್ತರದ ಮನೆ ನಿರ್ಮಿಸಿ ಗಿನ್ನೆಸ್ ರೆಕಾರ್ಡ್ ಬರೆದ ಹದಿನೈದರ ಪೋರ

ಯುವಕನು ಮಹಿಳೆಯೊಂದಿಗೆ ಅನುಚಿತವಾಗಿ  ವರ್ತಿಸಿದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ನಡೆದ ಸ್ಥಳದ ಕುರಿತು ಮಾಹಿತಿ ಕಲೆ ಹಾಕಿ, ಆರೋಪಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಈ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಐದು ಲಕ್ಷ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿದೆ. ಬಳಕೆದಾರರೊಬ್ಬರು, ‘ಈ ಕಾಲ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಆರೋಪಿಯ ವಿರುದ್ಧ ಕಠಿಣ ಹಾಗೂ ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಮೀರತ್ ಪೊಲೀಸರಿಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಮ್ಮ ಸುತ್ತಮುತ್ತಲಿನಲ್ಲಿ ಇಂತಹ ಕೆಟ್ಟ ಮನಸ್ಥಿತಿಗಳು ಇರುವುದೇ ಹೆಣ್ಣು ಮಕ್ಕಳು ಭಯದಲ್ಲೇ ಓಡಾಡುವಂತಾಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ