ಮೇಘಾಲಯ ಮುಖ್ಯಮಂತ್ರಿ ಕನ್ರಾಡ್ ಸಂಗ್ಮಾ ಅವರು ಸುಂದರವಾಗಿ ಹಾಡು ಹೇಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರ್ಯರ್ಕ್ರಮವೊಂದರಲ್ಲಿ ಬ್ರಿಯಾನ್ ಆಡಮ್ಸ್ ಅವರ ‘ಸಮ್ಮರ್ ಆಫ್ 69’ ಹಾಡನ್ನು ಸುಮಧುರವಾಗಿ ಹೇಳಿದ್ದಾರೆ. 1 ನಿಮಿಷ 43 ಸೆಕೆಂಡುಗಳಿರುವ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಮೇಘಾಲಯ ಸಿಎಂ ಐಕಾನಿಕ್ ಟ್ರ್ಯಾಕ್ ವಿತ್ ಮ್ಯೂಸಿಕ್ ಜತೆಗೆ ಹಾಡು ಹೇಳುತ್ತಿದ್ದಾರೆ. ಇಟಾ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿತ್ರೀಕರಿಸಿದ ವಿಡಿಯೋವಿದು. ಕನ್ರಾಡ್ ಸಂಗ್ಮಾ ಅವರು ಹಾಡನ್ನು ಶೃತಿ ಬದ್ಧವಾಗಿ ಜತೆಗೆ ತಾಳ, ಲಯಕ್ಕೆ ಸರಿ ಹೊಂದುವಂತೆ ಹಾಡಿರುವದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಹಾಡು ಇದೀಗ ಸಾಮಾಜಿಕ ಜಾಲತಣಾದಲ್ಲಿ ಫುಲ್ ವೈರಲ್ ಆಗಿದೆ.
ಸುಮಧುರ ಕಂಠದಲ್ಲಿ ಹಾಡು ಹೇಳುತ್ತಾ, ಹಾಡು ಕೊನೆಗೊಳ್ಳುವವರೆಗೂ ಅವರು ಆನಂದಿಸುತ್ತಿರುವುದನ್ನು ನೋಡಬಹುದು. ಪತ್ರಕರ್ತೆ ಸಂಗೀತಾ ಬರೂಹ್ ಅವರು ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಸಿಎಂ ಪ್ರತಿಭೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಅನೇಕರು ಅವರು ಹಾಡು ಹೇಳುವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ನಾನಾ ಪ್ರತಿಕ್ರಿಯೆಗಳನ್ನು ಕಳುಹಿಸುವ ಮೂಲಕ ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
Where else you find a chief minister belt out a rock number, only in the #northeast Here is @SangmaConrad belting out Summer of 69 on a nippy evening in Itanagar #NERocks pic.twitter.com/Pygp7I6LVj
— Sangeeta Barooah Pisharoty (@sangbarooahpish) October 18, 2021
ಮುಖ್ಯಮಂತ್ರಿಗಳೆಂದರೆ ದಿನವಿಡೀ ಕೆಲಸ, ಒತ್ತಡ. ಅದರ ಮಧ್ಯೆ ತಮ್ಮ ಸುಮಧುರ ಕಂಠದಲ್ಲಿ ಕಾರ್ಯಕ್ರಮವೊಂದರಲ್ಲಿ ಸುಶ್ರಾವ್ಯವಾಗಿ ಹಾಡಿದ ಮೇಘಾಲಯ ಸಿಎಂ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಅಕ್ಟೋಬರ್ 18ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:
Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್ ವೈರಲ್
Viral Video: ಯುವತಿ ಜತೆ ಸಕತ್ ಸ್ಟೆಪ್ ಹಾಕಿದ ಮುದ್ದಾದ ಬೆಕ್ಕು; ವಿಡಿಯೋ ನೋಡಿ