Tinder: ‘ನಾನು 23 ವರ್ಷದ ಯುವತಿ. ಟಿಂಡರ್ ಡೇಟಿಂಗ್ ಆ್ಯಾಪ್ (Dating App) ನಲ್ಲಿ ಇತ್ತೀಚೆಗೆ ವ್ಯಕ್ತಿಯೊಂದಿಗೆ ಮ್ಯಾಚ್ ಮಾಡಿಕೊಂಡೆ. ಆರಂಭದಲ್ಲಿ ಆ ವ್ಯಕ್ತಿ ತುಂಬಾ ಮಹಾನ್ ಎಂಬಂತೆ ವರ್ತಿಸುತ್ತಿದ್ದ. ಆದರೆ ನಾನೇ ತಪ್ಪು ತಿಳಿದುಕೊಂಡಿದ್ದೆ. ಅವನೊಂದಿಗೆ ಮಾತನಾಡಲು ಆರಂಭಿಸಿದ ಎರಡು ದಿನಗಳೊಳಗೆ, ನಾವು ಲೈಂಗಿಕತೆಯಲ್ಲಿ ತೊಡಗಿಕೊಳ್ಳಬಹುದೆ? ಎಂದು ಕೇಳಿದ. ಈ ಕುರಿತು ತನ್ನ ಕಲ್ಪನೆಗಳನ್ನು ಹೇಳಿಕೊಳ್ಳಲಾರಂಭಿಸಿದ- ಅಯ್ಯೋ ದೇವರೇ! ಏನಾಗಿದೆ ಹುಡುಗರಿಗೆ? ಆರೋಗ್ಯಕರ ಸಂಬಂಧಕ್ಕೆ ಲೈಂಗಿಕತೆಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದು ನನಗೆ ಗೊತ್ತು. ಆದರೆ ಪರಿಚಯವಾದ ತಕ್ಷಣವೇ ಅದರತ್ತ ನುಗ್ಗುವುದು ಸರಿಯಾದುದಲ್ಲ. ಒಟ್ಟಾರೆಯಾಗಿ ಡೇಟಿಂಗ್ಗಾಗಿ ನನಗೆ ಯೋಗ್ಯ ವ್ಯಕ್ತಿ ಸಿಗಲಾರನೇ? ಗಂಡಸರು ಗಂಡಸರೇ’
ಇದನ್ನೂ ಓದಿ : Viral: ಹಾಂಗ್ಕಾಂಗ್; ಸ್ನೇಕ್ ಪಿಝಾ ತಿನ್ನಲು ಯಾರಿಗೆಲ್ಲ ಧೈರ್ಯವಿದೆ?
ರೆಡ್ಡಿಟ್ನಲ್ಲಿ ಯುವತಿಯೊಬ್ಬರು ಟಿಂಡರ್ ಅನುಭವವನ್ನು ಹಂಚಿಕೊಂಡಿದ್ದಾರೆ. ನೂರಾರು ಜನರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವನು ಸತ್ಯವನ್ನೇ ಹೇಳಿದ್ದಾನೆ, ಮುಕ್ಕಾಲು ಪಾಲು ಹುಡುಗರು ಹೀಗೆಯೇ ಇರುತ್ತಾರೆ. ಆನ್ಲೈನ್ ಡೇಟಿಂಗ್ ಆ್ಯಪ್ನಲ್ಲಿ ಇದಕ್ಕಿಂತ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ? ಯೋಗ್ಯ ಹುಡುಗರು ನಿಮಗೆ ಆನ್ಲೈನ್ನಲ್ಲಿ ಸಿಗಲಾರರು ಎಂದಿದ್ದಾರೆ ಕೆಲವರು.
ಅವರು ವಾಸ್ತವವನ್ನು ಹೇಳಿದ್ದಾರೆ, ನೀವು 5.7 ಅಡಿಗಿಂತ ಎತ್ತರವಾಗಿದ್ದೀರಾ? ಎಂದಿದ್ದಾರೆ ಒಬ್ಬರು. ಮುಂಬರುವ ದಿನಗಳಲ್ಲಿ ಆನ್ಲೈನ್ ಡೇಟಿಂಗ್ ಮೂಲಕ ನಿಮಗೆ ಉತ್ತಮ ವ್ಯಕ್ತಿ ಸಿಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ನೇರವಾಗಿ ಲೈಂಗಿಕತೆಯ ಬಗ್ಗೆ ಪ್ರಸ್ತಾಪಿಸುವವರು ಅದರಲ್ಲಿ ಅವರು ಕುಶಲತೆ ಹೊಂದಿದ್ದಾರೆ ಎಂದರ್ಥ ಎಂದಿದ್ದಾರೆ ಮತ್ತೊಬ್ಬರು. ಯೋಗ್ಯವ್ಯಕ್ತಿಗಳು ನೀರಸವಾಗಿರುತ್ತಾರೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್ಮಂದಿ
ಸುಂದರವಾದ ಗಂಡಸರು ಸಾಮಾನ್ಯವಾಗಿ ಲೈಂಗಿಕತೆಯ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ ಎಂದಿದ್ದಾರೆ ಒಬ್ಬರು. ಇದನ್ನು ತಪ್ಪು ಎಂದು ನೀವು ಹೇಗೆ ಹೇಳುತ್ತೀರಿ? ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಇನ್ನೊಬ್ಬರು. ಎಷ್ಟೋ ಹುಡುಗಿಯರು ಎರಡು ದಿನಗಳಲ್ಲಿ ನನ್ನೊಂದಿಗೆ ತಮ್ಮ ಭ್ರಮೆಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ನನಗಿದು ಅಸಹಜ ಎನ್ನಿಸುವುದಿಲ್ಲ. ಬಹುಶಃ ನೀವು ಟಿಂಡರ್ಗೆ ಹೊಸಬರು ಎನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ