
ತಾಯಿ (mother) ಅಂದರೆ ತ್ಯಾಗ, ಪ್ರೀತಿಗೆ ಇನ್ನೊಂದು ಹೆಸರು. ಮಕ್ಕಳ ಆರೈಕೆ ಹಾಗೂ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರಾಗುವವರೆಗೂ ತಾಯಿ ತನ್ನ ನಿದ್ದೆ, ಊಟ, ತಿಂಡಿ ಎಲ್ಲವನ್ನೂ ತ್ಯಾಗ ಮಾಡಬೇಕು. ಇದೀಗ ಎರಡು ವರ್ಷದ ಮಗುವಿನ ಆರೈಕೆ ಮಾಡುತ್ತಿರುವ ತಾಯಿಯೊಬ್ಬಳು ತನ್ನ ಕಂದಮ್ಮ ತನ್ನನ್ನು ಬಿಟ್ಟು ಒಂದು ನಿಮಿಷ ಕೂಡ ಇರಲಾರದು. ನನಗೆ ಊಟ, ತಿಂಡಿ ಮಾಡಲು ಸಮಯವಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ನೋಡಿದ ನೆಟ್ಟಿಗರು ಈ ಮಹಿಳೆಗೆ ಧೈರ್ಯ ತುಂಬಿದ್ದಾರೆ.
@babymodel_jashit ಹೆಸರಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಜಶಿತ್ ಸಿಂಗ್ ನರುಲಾ ತಾಯ್ತನದ ಅನುಭವದ ಜತೆಗೆ ತನ್ನ ಪ್ರಸ್ತುತ ಸ್ಥಿತಿಯನ್ನು ವಿವರಿಸಿರುವುದನ್ನು ಕಾಣಬಹುದು. ತನ್ನ ಕಂದಮ್ಮ ಸ್ನಾನಗೃಹಕ್ಕೆ ಹೋಗುವುದರಿಂದ ಹಿಡಿದು ಊಟ ಮಾಡುವವರೆಗೆ ಒಂದು ಕ್ಷಣವು ನನ್ನನ್ನು ಬಿಟ್ಟಿರುವುದಿಲ್ಲ. ನನಗೆ ನೆಮ್ಮದಿಯಿಂದ ಚಹಾ ಕೂಡ ಕುಡಿಯಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.
ತನ್ನೊಂದಿಗೆ ಹೆಚ್ಚು ಕಾಲ ಇರುತ್ತದೆ, ಈ ಪುಟಾಣಿಯೂ ತಂದೆ ಹಾಗೂ ಅಜ್ಜನ ಬಳಿ ಹೋಗಲು ನಿರಾಕರಿಸುತ್ತಾನೆ. ಅವನನ್ನು ನಾನೇ ನೋಡಿಕೊಳ್ಳಬೇಕು. ಇದು ಬೆಳವಣಿಗೆಯ ಹಂತ ಎನ್ನುವುದು ತಿಳಿದಿದ್ದರೂ, ಇದು ಸರಳವಾದ ದೈನಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟಕರವಾಗುತ್ತಿದೆ. ನನ್ನ ಮಗು ಟಿವಿ ನೋಡುವುದಿಲ್ಲ ಅಥವಾ ಮೊಬೈಲ್ ಬಳಸುವುದಿಲ್ಲ. ಯಾವಾಗಲೂ ಆಟ ಆಡುತ್ತದೆ ಎಂದು ಈ ಮಹಿಳೆ ಹೇಳಿದ್ದಾಳೆ.
ಪ್ರತಿಯೊಬ್ಬ ತಾಯಿಯೂ ಮನುಷ್ಯಳೇ ಆಗಿರುವುದರಿಂದ ಈ ಹಂತದಲ್ಲಿ ದುಃಖದಂತಹ ಭಾವನೆಗಳು ಇರುತ್ತವೆ, ಇದು ಸಹಜ ಕೂಡ. ಅಂತಹ ಭಾವನೆಗಳನ್ನು ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆಯೇ ಎಂಬುದು ಅವರು ಎಷ್ಟು ಬೆಂಬಲ ನೀಡುತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ವಿವರಿಸಿದ್ದಾಳೆ.
ಇದನ್ನೂ ಓದಿ: ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದಯವಿಟ್ಟು ಟಿವಿ ಆನ್ ಮಾಡಿ, ಅವನಿಗೆ 30 ನಿಮಿಷಗಳ ಕಾಲ ಸುರಕ್ಷಿತ ಕಾರ್ಯಕ್ರಮ ನೋಡಲು ಬಿಡಿ. ನೀವೇ ಒಂದು ಕಪ್ ಚಹಾ ಸವಿಯಿರಿ ಎಂದಿದ್ದಾರೆ. ಮತ್ತೊಬ್ಬರು, ಮಕ್ಕಳ ಆರೈಕೆಯೇ ಹಾಗೆ, ಎಲ್ಲವನ್ನು ತ್ಯಾಗ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನಗೆ ನಿಮ್ಮ ಭಾವನೆ ಅರ್ಥವಾಗುತ್ತದೆ. ಆದರೆ ನೀವು ಈ ವಿಚಾರವನ್ನು ಇಂಟರ್ನೆಟ್‌ನಲ್ಲಿ ಹಾಕುವಷ್ಟು ಧೈರ್ಯಶಾಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Fri, 13 March 26